ನವದೆಹಲಿ, (ಮೇ.01): ಲಾಕ್‌ಡೌನ್ ಮತ್ತೆ ಎರಡು ವಾರ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಮೇ.4ರಿಂದ 17ರ ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯ ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು ಮೂರು ಜೋನ್ ಗಳಾಗಿ ವಿಂಗಡಿಸಿದೆ.

ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಏನಿರುತ್ತೆ.? ಏನಿರೋಲ್ಲ...?

ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲ ಸಡಿಲಿಕೆಗಳನ್ನು ನೀಡಿದ್ದು ರೆಡ್ ಜೋನ್ ನಲ್ಲಿ ಎಂದಿನಂತೆ ಲಾಕ್ ಡೌನ್ ಮಾರ್ಗಸೂಚಿ ಆದೇಶ ಮುಂದುವರೆಯಲಿದೆ. 

ಕೊರೋನಾ ಸೋಂಕಿತರಿಗೆ ಮಾತ್ರೆ ಭಾಗ್ಯ, ಮತ್ತೋರ್ವ ಬಾಲಿವುಡ್ ನಟನಿಗೆ ಅನಾರೋಗ್ಯ? ಮೇ.01ರ ಟಾಪ್ 10 ಸುದ್ದಿ! 

 ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಅವಧಿ ಮುಗಿಯಬೇಕಿತ್ತು. ಆದರೆ ದಿನೇದಿನೆ ಭಾರತದಲ್ಲಿ ಕರೊನಾ ಪ್ರಸರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ನ್ನು ಮೇ 17ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಿತ್ತಳೆ ವಲಯಗಳಲ್ಲಿ, ಕೆಂಪು ವಲಯದಲ್ಲಿ ಅನುಮತಿಸಲಾದ ಚಟುವಟಿಕೆಗಳ ಜೊತೆಗೆ, ಟ್ಯಾಕ್ಸಿಗಳು ಮತ್ತು ಕ್ಯಾಬ್ ಅಗ್ರಿಗೇಟರ್‌ಗಳನ್ನು ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕರೊಂದಿಗೆ ಮಾತ್ರ ಅನುಮತಿಸಲಾಗುತ್ತದೆ ಅಂತ ತಿಳಿಸಿದೆ.

ಅಗತ್ಯ ವಸ್ತುಗಳು ಎಂದಿನಂತೆ ಸಿಗುತ್ತವೆ. ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿ OPD ತೆರೆಯಲು ಕೇಂದ್ರ ಗೃಹ ಸಚಿವಾಲು ಸೂಚಿಸಿದೆ.