Asianet Suvarna News Asianet Suvarna News

Viral News: ತಮ್ಮನ ಮದುವೆಯಲ್ಲಿ ಉಳಿದಿತ್ತು ರಾಶಿ ರಾಶಿ ಊಟ, ಹಾಳು ಮಾಡದ ಅಕ್ಕ ಬಡವರಿಗೆ ಹಂಚಿದಳು!

* ಒಂದೊತ್ತಿನ ಊಟವಿಲ್ಲದೇ ಪದಾಡುತ್ತಿದ್ದಾರೆ ಜನ

* ಮದುವೆ ಸಮಾರಂಭಗಳಲ್ಲಿ ಹಾಳಾಗುತ್ತಿದೆ ರಾಶಿ ರಾಶಿ ಆಹಾರ

* ತಮ್ಮನ ಮದುವೆಯಲ್ಲಿ ಉಳಿದ ಊಟ ಬಡವರಿಗೆ ಹಂಚಿ ಸಾರ್ಥಕತೆ ಮೆರೆದ ಅಕ್ಕ

West Bengal Woman Distributes Leftover Food from Brother Wedding to Needy pod
Author
Bangalore, First Published Dec 6, 2021, 2:40 PM IST
  • Facebook
  • Twitter
  • Whatsapp

ಕೋಲ್ಕತ್ತಾ(ಡಿ.06): ಸದ್ಯ ಭಾರತದಲ್ಲಿ (India) ಮದುವೆ ಸೀಸನ್ ನಡೆಯುತ್ತಿದೆ. ಅನೇಕ ಔತಣಗಳನ್ನೂ ಆಯೋಜಿಸಲಾಗುತ್ತಿದೆ. ಹೀಗಿರುವಾಗ ಭಾರೀ ಪ್ರಮಾಣದಲ್ಲಿ ಆಹಾರ (Food) ವ್ಯರ್ಥವಾಗುತ್ತಿರುತ್ತದೆ. ಆದರೆ ಇದರ ಮಹತ್ವ ಎರಡು ಹೊತ್ತಿನ ಊಟ ಸಿಗದೆ ಪರದಾಡುವವರಿಗಷ್ಟೇ ಗೊತ್ತಾಗುತ್ತದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುಂದರವಾದ ಸುದ್ದಿ ಜನರ ಹೃದಯವನ್ನು ಗೆಲ್ಲುತ್ತಿದೆ. ಮಹಿಳೆಯೊಬ್ಬಳ ಹೃದಯ ವೈಶಾಲ್ಯತೆಗೆ ಎಲ್ಲರೂ ತಲೆದೂಗಿದ್ದಾರೆ. ಇಷ್ಟೇ ಅಲ್ಲದೇ ಈ ಸುದ್ದಿಯನ್ನು ನೊಡಿ ನೀವೂ ಮುಂದಿನ ದಿನಗಳಲ್ಲಿ ಆಹಾರದ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ ಮತ್ತು ಅದನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವಿರೆಂಬ ಆಶಯ ನಮ್ಮದು. 

ಪಶ್ಚಿಮ ಬಂಗಾಳದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ, ಇದರಲ್ಲಿ ಮಹಿಳೆಯೊಬ್ಬರು ತನ್ನ ಸಹೋದರನ ಮದುವೆಯ (Wedding) ಉಳಿದ ಆಹಾರವನ್ನು ನಿರ್ಗತಿಕರಿಗೆ ವಿತರಿಸುತ್ತಿರುವುದನ್ನು ಕಾಣಬಹುದು. ಮಹಿಳೆಯನ್ನು ರಾಣಾಘಾಟ್ ರೈಲು ನಿಲ್ದಾಣದಲ್ಲಿ ಆಹಾರದಿಂದ ತುಂಬಿದ ದೊಡ್ಡ ಪಾತ್ರೆಗಳೊಂದಿಗೆ ಕಾಣಬಹುದು. ಪೇಪರ್ ಪ್ಲೇಟ್ ನಲ್ಲಿ ಜನರಿಗೆ ಊಟ ಬಡಿಸುತ್ತಿದ್ದ ಮಹಿಳೆಯನ್ನು ಪಾಪಿಯ ಕರ್ ಎಂದು ಗುರುತಿಸಲಾಗಿದೆ. ವೈರಲ್ ಆಗುತ್ತಿರುವ ಈ ಚಿತ್ರಗಳನ್ನು ಛಾಯಾಗ್ರಾಹಕ ನಿಲಂಜನ್ ಮಂಡಲ್ ಪಶ್ಚಿಮ ಬಂಗಾಳದ ರಾಣಾಘಾಟ್ ನಿಲ್ದಾಣದಲ್ಲಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಜನರ ಮನ ಗೆಲ್ಲುತ್ತಿದೆ.

ಈ ಘಟನೆ ಬಗ್ಗೆ ವಿವರಣೆ ನೀಡಿದ ಮಂಡಲ್, ಫೋಟೋದಲ್ಲಿರುವ ಮಹಿಳೆಯ ಸಹೋದರನ ಮದುವೆಯ ಆರತಕ್ಷತೆ ಆ ದಿನ ನಡೆದಿತ್ತು ಮತ್ತು ಸಾಕಷ್ಟು ಆಹಾರ ಉಳಿದಿತ್ತು ಎಂದು ಮಂಡಲ್ ಹೇಳಿದರು. ಹಾಗಾಗಿ ಆಕೆ ಅದನ್ನು ನಿರ್ಗತಿಕರಿಗೆ ವಿತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನ ತಮ್ಮ ಪ್ರತಿಕ್ರಿಯೆ ನಿಡಲಾರಂಭಿಸಿದ್ದಾರೆ. ಈ ನಡುವೆ ಒಬ್ಬಾತ ವಾಸ್ತವದಲ್ಲಿ ಜನರು ಯಾವುದೇ ಮದುವೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಸಾಮಾನ್ಯವೆಂದು ಹೇಳಿದ್ದಾರೆ. ಆದರೆ ಈ ಜನ ಆಹಾರದ ನಿಜವಾದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ. ಅದೇ ಸಮಯದಲ್ಲಿ, ಅಂತಹ ಚಿತ್ರಗಳು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ಅವೈಜ್ಞಾನಿಕ, ಸಂಶೋಧನೆ ಆಘಾತಕಾರಿ ಎಂದ ಭಾರತ!

 

ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ(Global Hunger Report) ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದೆ. ಜಾಗತಿಕ ಎಜೆನ್ಸಿ ಬಿಡುಗಡೆ ಮಾಡಿದ ಈ ವರದಿಯಲ್ಲಿ ಭಾರತಕ್ಕೆ 101ನೇ ಸ್ಥಾನ ನೀಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಇದೆ ಎಂದು ಉಲ್ಲೇಖಿಸಲಾಗಿದೆ. ಆ ವರದಿ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ(Ministry of Women and Child Development) ಪ್ರತಿಕ್ರಿಯೆ ನೀಡಿದೆ. ಈ ವರದಿ ಅವೈಜ್ಞಾನಿಕ(unscientific) ಎಂದು ಭಾರತ ಹೇಳಿದೆ.

ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್

ಕನ್ಸರ್ನ್ ವರ್ಲ್ಡ್ ವೈಡ್ ಹಾಗೂ ವೆಲ್ತ್ ಹಂಗರ್ ಎಜೆನ್ಸಿ ನಡೆಸಿದ ಈ ಸಂಶೋಧನಾ ಅಧ್ಯಯನ ಆಧಾರ ರಹಿತವಾಗಿದೆ. ಗ್ರೌಂಡ್ ರಿಯಾಲಿಟಿ ರಹಿತವಾದ ವರದಿ ಬಿಡುಗಡೆ ಮಾಡಿದೆ. ಎಜೆನ್ಸಿ ಸರಿಯಾದ ಪರಿಶ್ರಮವಹಿಸಿ ವರದಿ ತಯಾರಿಸಿಲ್ಲ. ಈ ವರದಿ ಆಘಾತಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.

ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ತಪ್ಪು. ಎಜೆನ್ಸಿ ನಡೆಸಿದ ಸಂಶೋಧನೆ ಸರಿಯಾಗಿಲ್ಲ. ಕಾರಣ ಪೌಷ್ಠಿಕಾಂಶವಿಲ್ಲದ ಜನಸಂಖ್ಯೆ ಅನುಪಾತದ ಮೇಲೆ ಈ ವರದಿ ತಯಾರಿಸಲಾಗಿದೆ. ಭಾರತದ ಪೌಷ್ಠಿಕಾಂಶದ ಕೊರತೆ ವರದಿ ಅನುಪಾತದಲ್ಲಿ ಹಸಿವಿನ ಸೂಚ್ಯಂಕ್ಯ ತಿಳಿಯಲು ಸಾಧ್ಯವಿಲ್ಲ. ಈ ವರದಿ ಸತ್ಯಾಸತ್ಯಯಿಂದ ಕೂಡಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿದೆ.

ಒಂದೊತ್ತಿನ ಊಟಕ್ಕೂ ಹಾಹಾಕಾರ, ಖಜಾನೆಯಲ್ಲಿ ಹಣವಿಲ್ಲ; ಅಫ್ಘಾನ್ ನಾಗರೀಕರ ಸ್ಥಿತಿ ಹರೋಹರ

ಸಂಶೋಧನೆ ನಡೆಸಿದ ವಿಧಾನವೂ ಅವೈಜ್ಞಾನಿಕವಾಗಿದೆ. ಕಾರಣ ಜಾಗತಿಕ ಹಸಿವಿನ ಮೌಲ್ಯಮಾಪವನ್ನು ಕೇವಲ 4 ಪ್ರಶ್ನೆಗಳ ಅಭಿಪ್ರಾಯದಲ್ಲಿ ಮಾಡಲಾಗಿದೆ. ಅಪೌಷ್ಟಿಕತೆಯ ವೈಜ್ಞಾನಿಕ ಮಾಪನಕ್ಕೆ ತೂಕ ಮತ್ತು ಎತ್ತರದ ಅಳತೆಯ ಅಗತ್ಯವಿರುತ್ತದೆ, ಆದರೆ ಇಲ್ಲಿ ಒಳಗೊಂಡಿರುವ ವಿಧಾನವು ಜನಸಂಖ್ಯೆಯ ಶುದ್ಧ ದೂರವಾಣಿ ಅಂದಾಜಿನ ಆಧಾರದ ಮೇಲೆ ನಡೆಸಲಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಕೇಂದ್ರ ಸರ್ಕಾರ ಭಾರತದ ಇಡೀ ಜನಸಂಖ್ಯೆಗೆ ಬೃಹತ್ ಆಹಾರ ಭದ್ರತೆಯನ್ನು ನೀಡಿದೆ. ಭಾರತ ಸರ್ಕಾರದ ಪ್ರಯತ್ನದ ಅಂಕಿ ಅಂಶವನ್ನು ನಿರ್ಲಕ್ಷಿಸಿದೆ. ಈ ಕುರಿತು ಒಂದು ಒಂದು ಪ್ರಶ್ನೆಯನ್ನು ಮೌಲ್ಯಮಾಪನದಲ್ಲಿ ಇಲ್ಲ. ಹೀಗಾಗಿ ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಭಾರತ ಹೇಳಿದೆ.

'ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ'

ಕೊರೋನಾದಿಂದ ಆರ್ಥಿಕತೆ ಹಾಗೂ ಆಹಾರದಲ್ಲಿ ಹೆಚ್ಚಿನ ಸಮಸ್ಯೆಗಳಾದ ರೀತಿಯಲ್ಲಿ ಭಾರತ ನೋಡಿಕೊಂಡಿದೆ. ಆದರೆ ಹಸಿವಿನ ಸೂಚಂಕ್ಯ ವರದಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾಗೆ ಕೋವಿಡ್‌ನಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿ ನೀಡಿದೆ. ಆದರೆ ಸಂಶೋಧನಾ ವರದಿ ಹೇಳುವಂತೆ ಭಾರತದಲ್ಲಿ ಹಸಿವಿನ ಸೂಚಂಕ್ಯ ಕೆಳಕ್ಕೆ ಇಳಿದಿಲ್ಲ ಎಂದು ಸಚಿವಾಲಯ ಹೇಳಿದೆ. 

Follow Us:
Download App:
  • android
  • ios