Asianet Suvarna News Asianet Suvarna News

ಬಂಗಾಳ ಹಿಂಸೇಲಿ 45 ಸಾವು: ಪ್ರೀತಿಯ ಅಂಗಡಿ ತೆರಿತೀನಿ ಅನ್ನೋ ರಾಹುಲ್‌ ಮೌನ ಏಕೆ: ಬಿಜೆಪಿ ಪ್ರಶ್ನೆ

ಪಶ್ಚಿಮ ಬಂಗಾಳದ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ನ 74000 ಸ್ಥಾನಗಳಿಗೆ ಇತ್ತೀಚೆಗೆ ನಡೆಸಿದ್ದ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ.

West Bengal Ruling Trinamool Congress led by CM Mamata Banerjee won a landslide victory in Gram Panchayat, Taluk Panchayat Zilla Panchayat election akb
Author
First Published Jul 12, 2023, 11:47 AM IST

ಕೋಲ್ಕತಾ: ಪಶ್ಚಿಮ ಬಂಗಾಳದ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ನ 74000 ಸ್ಥಾನಗಳಿಗೆ ಇತ್ತೀಚೆಗೆ ನಡೆಸಿದ್ದ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ.

ಮಂಗಳವಾರ ಸಂಜೆ ವೇಳೆಗೆ ಪ್ರಕಟವಾದ ಅಂಕಿ ಅಂಶಗಳ ಅನ್ವಯ ಮತ ಎಣಿಕೆ ಪೂರ್ಣಗೊಂಡ ಒಟ್ಟು 27,985 ಗ್ರಾಪಂ ಸ್ಥಾನಗಳ ಪೈಕಿ ಟಿಎಂಸಿ 18,606 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೆ ತನ್ನ ಪಾರುಪತ್ಯ ಉಳಿಸಿಕೊಂಡಿದೆ. ಉಳಿದಂತೆ ವಿಪಕ್ಷ ಬಿಜೆಪಿ 4,482 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಎಡರಂಗ 1,502, ಕಾಂಗ್ರೆಸ್‌ 1,073, ಐಎಫ್‌ಎಸ್‌ ಸೇರಿ ಇತರ ನೂತನ ಪಕ್ಷಗಳು 476 ಸ್ಥಾನಗಳಲ್ಲಿ ಹಾಗೂ ಟಿಎಂಸಿಯಿಂದ ಬಂಡೆದ್ದ ಅಭ್ಯರ್ಥಿಗಳು ಸೇರಿದಂತೆ 1,060 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಒಟ್ಟು 928 ಜಿಲ್ಲಾ ಪರಿಷತ್‌ ಸ್ಥಾನಗಳಲ್ಲಿ ಟಿಎಂಸಿ 18 ಸ್ಥಾನಗಳಲ್ಲಿ ಗೆದ್ದಿದೆ.

ಪೊಲೀಸ್ ವಾಹನಕ್ಕೆ ಬೆಂಕಿ, ಹೊತ್ತಿ ಉರಿದ ಬಂಗಾಳದಲ್ಲಿ 15 ಸಾವು, ಮಕ್ಕಳು ಸೇರಿ ಹಲವರಿಗೆ ಗಾಯ!

ಜು.8ರಂದು ನಡೆದ ಚುನಾವಣೆ ವೇಳೆ ಭಾರೀ ಹಿಂಸಾಚಾರ ನಡೆದಿತ್ತು.

ಕಳೆದ ಬಾರಿ ಟಿಎಂಸಿ 38118 ಗ್ರಾಪಂ, 8062 ತಾಪಂ, 793 ಜಿಪಂ ಸ್ಥಾನ ಗೆದ್ದಿತ್ತು. ಬಿಜೆಪಿ 5779 ಗ್ರಾಪಂ, 769 ತಾಪಂ, 22 ಜಿಪಂ ಸ್ಥಾನ ಗೆದ್ದಿತ್ತು. ಎಡರಂಗ 1713 ಗ್ರಾಪಂ, 129 ತಾಪಂ, 1 ಜಿಪಂ, ಗೆದ್ದಿತ್ತು. ಕಾಂಗ್ರೆಸ್‌ 1066 ಗ್ರಾಪಂ, 133 ತಾಪಂ, 6 ಜಿಪಂ ಸ್ತಾನ ಗೆದ್ದಿತ್ತು.

ಬಂಗಾಳ ಹಿಂಸೇಲಿ 45 ಸಾವು:   ಪ್ರೀತಿಯ ಅಂಗಡಿ ತೆರಿತೀನಿ ಅನ್ನೋ ರಾಹುಲ್‌ ಮೌನ ಏಕೆ: ಬಿಜೆಪಿ

ಪಶ್ಚಿಮ ಬಂಗಾಳದ ಪಂಚಾಯತ್‌ ಚುನಾವಣೆಯಲ್ಲಿ ಉಂಟಾದ ಹಿಂಸಾಚಾರದಲ್ಲಿ ಕನಿಷ್ಠ 45 ಜನ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ನಿರ್ದಯಿ’ ಎಂದು ಕಿಡಿಕಾರಿದೆ. ಈ ಬಗ್ಗೆ ಮಂಗಳವಾರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ‘ಮಾಧ್ಯಮ ವರದಿ ಪ್ರಕಾರ ರಾಜ್ಯ ಪಂಚಾಯತ್‌ ಚುನಾವಣೆಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಬಾಂಬ್‌ ದಾಳಿ, ನಕಲಿ ಮತದಾನ ಮತ್ತು ತಿರುಚುವಿಕೆ ಮಾಧ್ಯಮ ವರದಿಗಳಲ್ಲಿ ಹೆಚ್ಚು ಬಳಸಲಾದ ಪದಗಳಾಗಿವೆ. ಇವರು ನಿರ್ಮಮತಾ (ನಿರ್ದಯಿ ಮಮತಾ) ಹೊರತು ಮಮತಾ (ಪ್ರೀತಿ) ಅಲ್ಲ. ಇವೆಲ್ಲ ರಾಜ್ಯ ಪ್ರಾಯೋಜಿತ ಕೊಲೆಗಳು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಹಿಂಸಾಚಾರಕ್ಕೆ 14 ಸಾವು, ದೀದಿ ನಾಡಲ್ಲಿ ರಕ್ತಪಾತ!

ಅಲ್ಲದೇ ಬಂಗಾಳ ಹಿಂಸಾಚಾರ ಬಗೆಗಿನ ವಿಪಕ್ಷಗಳ ಮೌನವನ್ನು ಖಂಡಿಸಿದ ಅವರು ‘ಕಾಂಗ್ರೆಸ್‌ ಮತ್ತು ಇತರ ಎಡಪಕ್ಷಗಳೂ ಈ ವಿಷಯದಲ್ಲಿ ಮೌನವಾಗಿವೆ. ಲಾಲು ಯಾದವ್‌, ನಿತೀಶ್‌ ಕುಮಾರ್‌, ರಾಹುಲ್‌ ಗಾಂಧಿ ಮತ್ತು ‘ಮಹಾಘಟಬಂಧನ್‌’ ನ ನಾಯಕರು ಎಲ್ಲಿದ್ದಾರೆ. ಪ್ರೀತಿಯ ಅಂಗಡಿ ತೆರೆಯುವೆ ಎನ್ನುವ ರಾಹುಲ್‌ ಮೋಸದಿಂದ ದೇಶ ಆಳಲು ಬಯಸಿದ್ದರಿಂದ ಮೌನವಾಗಿದ್ದಾರೆ ಎಂದಿದ್ದಾರೆ.

ಜು.8 ರಂದು ಬಂಗಾಳದಲ್ಲಿ ಪಂಚಾಯತ್‌ ಚುನಾವಣೆಯ ಮತದಾನದಂದು ಭಾರೀ ಘರ್ಷಣೆ ಮತ್ತು ಹಿಂಸಾಚಾರ ನಡೆದಿದ್ದು ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಆಡಳಿತ ವರದಿ ಹೇಳಿದೆ. ಆದರೆ ಬಿಜೆಪಿ 45 ಸಾವು ಸಂಭವಿಸಿದೆ ಎಂದು ಹೇಳಿದೆ. 

Follow Us:
Download App:
  • android
  • ios