Asianet Suvarna News Asianet Suvarna News

'ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ, ಹಿಂಸೆ ಇದೆಯೇ ಹೊರತು ಅಭಿವೃದ್ಧಿ ಅಲ್ಲ!'

* ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ: ಸಂತೋಷ್‌

* ಬಂಗಾಳದಲ್ಲಿ ಹಿಂಸಾ ರಾಜಕೀಯ ಇದೆಯೇ ಹೊರತು ಅಭಿವೃದ್ಧಿ ಅಲ್ಲ

* ಎಲ್ಲ ಕ್ಷೇತ್ರಗಳಲ್ಲೂ ಗೂಂಡಾಗಿರಿ ಇದೆ, ಹಿಂಸೆ ಬಗ್ಗೆ ಸುಪ್ರೀಂಗೆ ಅರ್ಜಿ

West Bengal now a lab for political violence BJP leader BL Santhosh pod
Author
Bangalore, First Published May 22, 2021, 9:12 AM IST

ಬೆಂಗಳೂರು(ಮೇ.22): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬರೀ ಹಿಂಸೆಯ ರಾಜಕೀಯ ಮಾತ್ರ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ನಡೆಯುತ್ತಿಲ್ಲ. ಅಲ್ಲಿನ ಎಲ್ಲ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಿಜೆಪಿ ಪ್ರಶ್ನೆ ಮಾಡಲಿದೆ ಎಂದೂ ಅವರು ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಅಂತೆ-ಕಂತೆ, ಬಿಎಸ್‌ವೈಗೆ ಪರ್ಯಾಯ ನಾಯಕ ಯಾರು?

ಶುಕ್ರವಾರ ಸಂಜೆ ಫೇಸ್‌ಬುಕ್‌ ಸಂವಾದದಲ್ಲಿ ಪಾಲ್ಗೊಂಡು ‘ಬಂಗಾಳದಲ್ಲಿ ಚುನಾವಣೆ ನಂತರ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಉಗ್ರರ ಉಪಟಳ ಇರುವ ಆಸ್ಸಾಂನಲ್ಲಿ ಶಾಂತಿಯುತ ಚುನಾವಣೆ ನಡೆಯಿತು. ಆದರೆ, ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹಿಂಸಾತ್ಮಕ ಘಟನೆಗಳು ತೀವ್ರ ಬೇಸರ ಉಂಟು ಮಾಡಿತು. ಅಲ್ಲಿನ ಹಿಂಸಾಚಾರಕ್ಕೆ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಕಾರಣ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿನ ಹಿಂಸಾತ್ಮಕ ಘಟನೆಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಸಾಮಾನ್ಯ ಜೀವನ ಕೂಡ ಹದಗೆಟ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಗೂಂಡಾಗಿರಿ ನೋಡಬೇಕು ಎಂದರೆ ಪಶ್ಚಿಮ ಬಂಗಾಳಕ್ಕೆ ಬರಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಆ ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆ ರಾಜಕೀಯಕರಣಗೊಂಡಿದೆ. ಆರು ಸಾವಿರ ಘಟನೆಗಳಲ್ಲಿ ಕೇವಲ 30 ಘಟನೆಗಳ ಬಗ್ಗೆ ಮಾತ್ರ ಎಫ್‌ಐಆರ್‌ ದಾಖಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಅಪರಾಧೀಕರಣ ಆಗಿದೆ. ರೇಷನ್‌ ಅಂಗಡಿಗೆ, ಪರಿಹಾರದ ಹಣಕ್ಕೆ ಟಿಎಂಸಿ ಪಕ್ಷದವರೇ ಮಾಲೀಕರು. ಪಶ್ಚಿಮ ಬಂಗಾಳದಲ್ಲಿ ಆಡಳಿತ ಅನ್ನೋದು ಬಿಡುವಿನ ವೇಳೆ ನಡೆಯುವ ಕೆಲಸ ಆಗಿದೆ. ಅಲ್ಲಿನ ನಕ್ಸಲ್ಬರಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆದ್ದಿದೆ. ಈ ಚುನಾವಣೆಯ ಬಳಿಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದು ಕೊಲೆ ಆಗಿದೆ. ಇದು ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ನಡೆಯುತ್ತಿರುವ ಅಪರಾಧಗಳು. ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮ ಬಾಂಗ್ಲಾ ವಾಸಿಗಳು ಹಿಂಸಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಟಿಎಂಸಿ ಬೆಂಬಲ ಕೂಡ ಇದೆ. ಕಮ್ಯುನಿಸ್ಟರು ಕೊಟ್ಟಹಿಂಸಾಚಾರದ ಕೊಡುಗೆಯನ್ನು ಟಿಎಂಸಿ ಮುಂದುವರೆಸುತ್ತಿದೆ ಎಂದು ಹರಿಹಾಯ್ದರು.

ಬಂಗಾಳ ರಾಜ್ಯಪಾಲರ ಬದಲಾಯಿಸಿ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಮಮತಾ ಪತ್ರ!

ಬಂಗಾಳದಲ್ಲಿ ಬರೀ ಹಿಂಸೆಯ ರಾಜಕೀಯ ಮಾತ್ರ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ನಡೆಯುತ್ತಿಲ್ಲ. ಅಸ್ಸಾಂನ ಕೆಲವು ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಹಿಂದೂ ಪ್ರತಿನಿಧಿ ಗೆದ್ದು ಬರಲು ಸಾಧ್ಯವಾಗುತ್ತಿಲ್ಲ. 9 ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಿಂಸಾಚಾರ ಘಟನೆಗಳು ನಡೆದಿದ್ದರೂ ದೂರು ಕೊಡಲು ಕೂಡ ಅಲ್ಲಿನ ಜನ ಹೆದರುತ್ತಾರೆ. ಮಮತಾ ಬ್ಯಾನರ್ಜಿ ಅವರ ನಡವಳಿಕೆ ಪ್ರಜಾಪ್ರಭುತ್ವ ಕ್ಕೆ ಅಪಾಯಕಾರಿ ಆಗಿದೆ. ಹತ್ಯೆ, ಹಿಂಸಾಚಾರ ನಡೆದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಆಗುತ್ತಿದೆ. ಅಲ್ಲಿನ ಎಲ್ಲ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಿಜೆಪಿ ಪ್ರಶ್ನೆ ಮಾಡಲಿದೆ ಎಂದು ಸಂತೋಷ್‌ ಹೇಳಿದರು.

Follow Us:
Download App:
  • android
  • ios