ನಂದಿಗ್ರಾಮದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಬಿಡುಗಡೆಯಾಗಿದ್ದಾರೆ. ಹೆಚ್ಚಿನ ವಿವರ ಇಲ್ಲಿವೆ.
ಕೋಲ್ಕತಾ(ಮಾ.12): ನಂದಿಗ್ರಾಮದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಸಿಎಂ ಮಮತಾ ಬ್ಯಾನರ್ಜಿ ಇದೀಗ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಮಾರ್ಚ್ 10ರಂದು ಗಾಯಗೊಂಡಿದ್ದ ದೀದಿ, ದಿಢೀರ್ ಆಸ್ಪತ್ರೆ ದಾಖಲಾಗಿದ್ದರು. ವೈದ್ಯಕೀಯ ನಿರ್ಬಂಧನೆಗಳೊಂದಿಗೆ ದೀದಿಯನ್ನು ಬಿಡುಗಡೆ ಮಾಡಲಾಗಿದೆ.
ದೀದಿ ಗಾಯಗೊಂಡಿದ್ದು ಅಪಘಾತದಲ್ಲಿ : ನಿಜವಾಗಿಯೂ ಆಗಿದ್ದೇನು?
ನಂದಿಗ್ರಾಮದಲ್ಲಿ ಕಾಲು, ಭುಜಕ್ಕೆ ಗಾಯಗಳಾಗಿತ್ತು. ವೈದ್ಯರ ಪ್ರಕಾರ ಕನಿಷ್ಠ 7 ದಿನಗಳ ಚಿಕಿತ್ಸೆ ಅಗತ್ಯವಿತ್ತು. ಆದರೆ ಮಮತಾ ಬ್ಯಾನರ್ಜಿ ಅವರ ಸತತ ಮನವಿಯಿಂದ ಬಿಡುಗಡೆ ಮಾಡುತ್ತಿದ್ದೇವೆ. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಕನಿಷ್ಠ 15 ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಶಾಂತಿ ಕಾಪಾಡಿ, ವ್ಹೀಲ್ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ!
ವೀಲ್ ಚೇರ್ ಮೂಲಕ ಆಸ್ಪತ್ರೆಯಿಂದ ಹೊರಬಂದ ಮಮತಾ ಬ್ಯಾನರ್ಜಿ, ನೇರವಾಗಿ ಕಾರು ಹತ್ತಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ನಂದಿಗ್ರಾಮದಿಂದ ಸ್ಪರ್ಧಿಸುತ್ತಿರುವ ಮಮತಾ ಬ್ಯಾನರ್ಜಿ ಪ್ರಚಾರ ನಡೆಸಿದ್ದರು. ಈ ವೇಳೆ ಮಮತಾ ಬ್ಯಾನರ್ಜಿಯನ್ನು ಅಪರಿಚಿತರು ತಳ್ಳಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡ ಎಂದು ಟಿಎಂಸಿ ಹಾಗೂ ಸ್ವತ ಮಮತಾ ಆರೋಪಿಸಿದ್ದರು. ಆದರೆ ಮಮತಾ ಸರ್ಕಾರದ ಪೊಲೀಸರು ನಡೆಸಿದ ತನಿಖೆಯಲ್ಲಿ ಇದು ಆಕಸ್ಮಿಕ ಎಂದು ವರದಿಯಾಗಿದೆ.
