Asianet Suvarna News Asianet Suvarna News

ರಾಹುಲ್‌ ಗಾಂಧಿ ವಿಡಿಯೋ ಮಾಡಿದ್ದೇ ಅವಾಂತರಕ್ಕೆ ಕಾರಣ: ಮಿಮಿಕ್ರಿ ಗದ್ದಲಕ್ಕೆ ಮಮತಾ ಬ್ಯಾನರ್ಜಿ ಆರೋಪ

ಪಕ್ಷದ ಸಂಸದ ಕಲ್ಯಾಣ್‌ ಬ್ಯಾನರ್ಜಿಯನ್ನು ಉಪರಾಷ್ಟ್ರಪತಿಯ ಮಿಮಿಕ್ರಿ ಗದ್ದಲ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸಮರ್ಥನೆ ಮಾಡಿಕೊಂಡಿದ್ದು, ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಅದನ್ನು ರೆಕಾರ್ಡ್ ಮಾಡದಿದ್ದರೆ ಯಾರಿಗೂ ಅದು ತಿಳಿಯುತ್ತಿರಲಿಲ್ಲ ಎಂದಿದ್ದಾರೆ.

west bengal chief minister mamata banerjee blames recording by rahul gandhi for jagdeep dhankhar row ash
Author
First Published Dec 21, 2023, 10:17 AM IST

ದೆಹಲಿ (ಡಿಸೆಂಬರ್ 21, 2023):  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಿಮಿಕ್ರಿ ಗದ್ದಲ ವಿಚಾರದಲ್ಲಿ ತಮ್ಮ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಪರ ಬ್ಯಾಟ್‌ ಬೀಸಿದ್ದಾರೆ. ಹಾಗೂ, ರಾಹುಲ್‌ ಗಾಂಧಿ ವಿಡಿಯೋ ರೆಕಾರ್ಡ್‌ ಮಾಡಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕನ ಮೇಲೆ ಗೂಬೆ ಕೂರಿಸಿದ್ದಾರೆ.

ತಮ್ಮ ಪಕ್ಷದ ಸಂಸದ ಕಲ್ಯಾಣ್‌ ಬ್ಯಾನರ್ಜಿಯನ್ನು ಉಪರಾಷ್ಟ್ರಪತಿಯ ಮಿಮಿಕ್ರಿ ಗದ್ದಲ ವಿಚಾರದಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಅದನ್ನು ರೆಕಾರ್ಡ್ ಮಾಡದಿದ್ದರೆ ಯಾರಿಗೂ ಅದು ತಿಳಿಯುತ್ತಿರಲಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ. 

ಇದನ್ನು ಓದಿ: Mimicry Row: 'ನಾನು ಕೂಡ 20 ವರ್ಷ ಇಂಥ ಅವಮಾನ ಎದುರಿಸಿದ್ದೆ..' ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಟೀಕೆ

ಈ ಮಧ್ಯೆ, ತೃಣಮೂಲ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಸಹ ಈ ವಿಚಾರವಾಗಿ ಮಾತನಾಡಿದ್ದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ನೋಯಿಸುವ ಅಥವಾ ಅಗೌರವಿಸುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. 

ಈ ಗದ್ದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, ನಾವು ಪ್ರತಿಯೊಬ್ಬರನ್ನೂ ಗೌರವಿಸುತ್ತೇವೆ. ಇದು ಯಾರನ್ನೂ ಅಗೌರವ ಮಾಡುವುದಲ್ಲ. ಇದನ್ನು ರಾಜಕೀಯವಾಗಿ ಮತ್ತು ಸಾಂದರ್ಭಿಕವಾಗಿ ತೆಗೆದುಕೊಳ್ಳಬೇಕು. ರಾಹುಲ್ ಜೀ ಇದನ್ನು ರೆಕಾರ್ಡ್ ಮಾಡದಿದ್ದರೆ ಜನರಿಗೆ ಇದರ ಬಗ್ಗೆ ತಿಳಿಯುತ್ತಿರಲಿಲ್ಲ ಎಂದು ಹೇಳಿದರು. ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರದಿಂದ ಬಾಕಿ ಬರಬೇಕಿರುವ ಹಣದ ವಿಚಾರವಾಗಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರು. 

ಇದನ್ನೂ ಓದಿ: Mimicry Row: ಕಲಾಪದಲ್ಲಿ 'ನಿಂತು' ಪ್ರತಿಭಟಿಸಿದ ಬಿಜೆಪಿ, ಉಲ್ಟಾ ಹೊಡೆದ ಕಲ್ಯಾಣ್‌ ಬ್ಯಾನರ್ಜಿ!

ಈ ವೇಳೆ ಮಿಮಿಕ್ರಿ ವಿಚಾರ ಗದ್ದಲ ಹೆಚ್ಚಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ - ಪ್ರಧಾನಿ ಭೇಟಿಯಲ್ಲಿ ವಿವಾದಕ್ಕೀಡಾಗಿರುವ ಸಂಸದ ಕಲ್ಯಾಣ್ ಬ್ಯಾನರ್ಜಿಯನ್ನು ಈ ಭೇಟಿಯ ವೇಳೆ ಕರೆದೊಯ್ದಿರಲಿಲ್ಲ. ಆ ಪಟ್ಟಿಯಲ್ಲಿ ಇವರ ಹೆಸರು ಇದ್ದರೂ ಕೈಬಿಟ್ಟಿದ್ದಕ್ಕೆ ಕಾರಣ ಮಿಮಿಕ್ರಿ ಗದ್ದಲ ಎನ್ನಲಾಗಿದೆ. 

 ಈ ವಿಚಾರವಾಗಿ ಮಾತನಾಡಿದ್ದ ಕಲ್ಯಾಣ್ ಬ್ಯಾನರ್ಜಿ, ತಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದಿದ್ದರ. ಹಾಗೂ, ಉಪರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಎಂದು ಜಗದೀಪ್ ಧನಕರ್ ಇದನ್ನ ಬಣ್ಣಿಸಿದ್ದರೂ, ಟಿಎಂಸಿ ಸಂಸದ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಲಿಲ್ಲ. 

ಅಲ್ಲದೆ, ಮಿಮಿಕ್ರಿ ಮಾಡುವುದು ಅಪರಾಧವಲ್ಲ. ಬಿಜೆಪಿಯವರು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದು ಸರಿಯೇ ಎಂಬ ಮುಖ್ಯ ವಿಷಯವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಸಂಸದ ಹೇಳಿದ್ದಾರೆ, ಹಾಗೂ, ಪ್ರಧಾನಿ ಮೋದಿಯೂ ಈ ಹಿಂದೆ ಮಿಮಿಕ್ರಿ ಮಾಡಿದ್ದಾರೆ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗೆ ಅವಮಾನ : ವೀಡಿಯೋ ಮಾಡಿ ಪ್ರೋತ್ಸಾಹಿಸಿದ ರಾಹುಲ್ ಗಾಂಧಿ

ವಿರೋಧ ಪಕ್ಷದ ಸಂಸದರ ಅಮಾನತು ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಕಲ್ಯಾಣ್ ಬ್ಯಾನರ್ಜಿ ತಮ್ಮ ಸಹೋದ್ಯೋಗಿಗಳು ಮತ್ತು ಇತರ ಸಂಸದರ ಹರ್ಷೋದ್ಗಾರಗಳ ನಡುವೆ ಧನಕರ್‌ ಅವರ ನಡವಳಿಕೆಯನ್ನು ಅನುಕರಿಸಿದ್ದರು. ಹಾಗೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ಕೃತ್ಯದ ವಿಡಿಯೋ ಚಿತ್ರೀಕರಿಸಿದ್ದರು.

Latest Videos
Follow Us:
Download App:
  • android
  • ios