Asianet Suvarna News Asianet Suvarna News

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗೆ ಅವಮಾನ : ವೀಡಿಯೋ ಮಾಡಿ ಪ್ರೋತ್ಸಾಹಿಸಿದ ರಾಹುಲ್ ಗಾಂಧಿ

ತ್ರಿಣಮೂಲ ಕಾಂಗ್ರೆಸ್ ಸಂಸದ ಸಂಸತ್ ಭವನದ ಮುಂಭಾಗ ಪ್ರತಿಭಟನೆ ಮಾಡುವ ವೇಳೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ವ್ಯಂಗ್ಯವಾಗಿ ಮಿಮಿಕ್ ಮಾಡಿದ ಘಟನೆ ನಡೆದಿದೆ.

BJP shared video in that TMC MP Kalyan Banerjee Mimicking Vice President jagadeep dhankar and Rahul Gandhi Took Video of it akb
Author
First Published Dec 19, 2023, 3:47 PM IST

ನವದೆಹಲಿ: ತ್ರಿಣಮೂಲ ಕಾಂಗ್ರೆಸ್ ಸಂಸದ ಸಂಸತ್ ಭವನದ ಮುಂಭಾಗ ಪ್ರತಿಭಟನೆ ಮಾಡುವ ವೇಳೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ವ್ಯಂಗ್ಯವಾಗಿ ಮಿಮಿಕ್ ಮಾಡಿದ ಘಟನೆ ನಡೆದಿದೆ. ಬರೀ ಇಷ್ಟೇ ಅಲ್ಲ ಪ್ರತಿಭಟನಾ ನಿರತ ಎಲ್ಲಾ ಎಂಪಿಗಳು ಈ ವೇಳೆ ಟಿಎಂಸಿ ಎಂಪಿ ಕಲ್ಯಾಣ ಬ್ಯಾನರ್ಜಿ ಅವರು ಮಾಡಿದ  ಮಿಮಿಕ್ರಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಲ್ಲದೇ ಸ್ವತಃ ರಾಹುಲ್ ಗಾಂಧಿ ಈ ಇವರ ಈ ಅತೀರೇಕದ ವರ್ತನೆಯನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಖುಷಿಪಟ್ಟಿದ್ದಾರೆ. ವಿಪಕ್ಷಗಳ ಈ ವರ್ತನೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.  ರಾಜ್ಯಸಭಾ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಸಂಸದರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ನಾಚಿಕೆಗೇಡಿನ ವರ್ತನೆ ಮತ್ತು ಇಂತಹ ವರ್ತನೆ ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ವತಃ ಬಿಜೆಪಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇಡೀ ದೇಶವೇ ಏಕೆ ವಿರೋಧ ಪಕ್ಷದ ಸಂಸದರು ಅಮಾನತ್ತಾಗಿದ್ದಾರೆ ಎಂದು ಅಚ್ಚರಿಗೆ ಒಳಗಾಗಿದೆ. ಅದಕ್ಕೆ ಕಾರಣ ಇಲ್ಲಿದೆ. ಟಿಎಂಸಿ ಎಂಪಿ ಕಲ್ಯಾಣ ಬ್ಯಾನರ್ಜಿ ಗೌರವಾನ್ವಿತ ಉಪ ರಾಷ್ಟ್ರಪತಿ ಕಲ್ಯಾಣ ಮುಖರ್ಜಿ ಅವರನ್ನು ವ್ಯಂಗ್ಯವಾಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಹಾಗೆಯೇ ಮಾಡುವಂತೆ ಹುರಿದುಂಬಿಸಿದ್ದು, ಅವರು ಸದನದಲ್ಲಿ ಎಷ್ಟು ಅಜಾಗರೂಕವಾಗಿ ವರ್ತಿಸಿ ಸದನದ ನಿಯಮ ಉಲ್ಲಂಘಿದ್ದಾರೆ ಎಂಬುದನ್ನು ವೀಡಿಯೋ ನೋಡಿದರೆ ಊಹಿಸಬಹುದು ಎಂದು ಬರೆದುಕೊಂಡು ಬಿಜೆಪಿ 38 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಿದೆ. 

ಇತಿಹಾಸದಲ್ಲೇ ಮೊದಲು: ರಾಜ್ಯದ ಮೂವರು ಸೇರಿ ಸಂಸತ್ತಿಂದ ಒಂದೇ ದಿನ ವಿಪಕ್ಷಗಳ 78 ಸದಸ್ಯರು ಸಸ್ಪೆಂಡ್‌!

ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ ಬ್ಯಾನರ್ಜಿ ಅವರು ಸಂಸತ್‌ನಿಂದ ಅಮಾನತ್ತಾದ 141 ಸಂಸದರಲ್ಲಿ ಒಬ್ಬರಾಗಿದ್ದು, ಅವರು ಹೊಸ ಸಂಸತ್ತಿನ ಕಟ್ಟಡದ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಿಂತು ಮಾತನಡುವಾಗ ಉಪರಾಷ್ಟ್ರಪತಿಯನ್ನು ಅನುಕರಿಸುತ್ತಾ ಅನಿಮೇಷನ್‌ನ ರೀತಿಯಲ್ಲಿ ಮಾತನಾಡಿ ಅಣಕಿಸುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ. ಈ ವೇಳೆ ಅಲ್ಲೇ ಕುಳಿತಿದ್ದ ಇತರ ಸಂಸದರು ನಗುತ್ತಿದ್ದರೆ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡುವುದನ್ನು ಕಾಣಬಹುದಾಗಿದೆ. ಘಟನೆಯನ್ನು ಸ್ವತಃ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ತೀವ್ರವಾಗಿ ಖಂಡಿಸಿದ್ದಾರೆ. 

ಸದನವನ್ನು ಮುಂದೂಡಿದ ನಂತರ ಮಧ್ಯಾಹ್ನ 12 ಗಂಟೆಗೆ ಮತ್ತೆ ಸೇರುತ್ತಿದ್ದಂತೆ, ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ರಾಜ್ಯಸಭಾ ಅಧ್ಯಕ್ಷರು ಮಾತನಾಡಿದ್ದು, ಅಧ್ಯಕ್ಷರ ಕಚೇರಿ, ರಾಜ್ಯಸಭೆ ಮತ್ತು ಸ್ಪೀಕರ್ ಕಚೇರಿ ತುಂಬಾ ವಿಭಿನ್ನವಾಗಿದೆ. ರಾಜಕೀಯ ಪಕ್ಷಗಳು ವಿಭಿನ್ನ ನಿಲುವುಗಳನ್ನು ಹೊಂದಿರುತ್ತವೆ. ಅವುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ನಿಮ್ಮ ಪಕ್ಷದ ಹಿರಿಯ ನಾಯಕನೋರ್ವ ಮತ್ತೊಂದು ಪಕ್ಷದ ಮತ್ತೊಬ್ಬ ಸದಸ್ಯನನ್ನು ವೀಡಿಯೋ ಚಿತ್ರೀಕರಣ ಮಾಡುವುದನ್ನು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಧ್ಯಕ್ಷರ ಬಗ್ಗೆ ಮಿಮಿಕ್ರಿ ಮಾಡುವುದು ಸ್ಪೀಕರ್ ಬಗ್ಗೆ ಮಿಮಿಕ್ರಿ ಮಾಡುವುದು ಎಷ್ಟು ನಾಚಿಕೆಗೇಡು ಎಷ್ಟು ತಮಾಷೆ, ಎಷ್ಟು ಸ್ವೀಕರಾರ್ಹವಲ್ಲ ಎಂದು ಅವರು ಕೇಳಿದರು. 

ವಿಪಕ್ಷಕ್ಕೆ ಮತ್ತೊಂದು ಶಾಕ್, 33 ಸಂಸದರು ಲೋಕಸಭೆಯಿಂದ ಅಮಾನತು!

ಸದನದಲ್ಲಿ ವಿರೋಧ ಪಕ್ಷಗಳು ಮೊನ್ನೆ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಅಮಿತ್ ಷಾ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೂ ಮೊದಲು ಧನಕರ್ ಅವರು ಸಂಸದರ ವರ್ತನೆಯನ್ನು ಸಂಪೂರ್ಣ ನಿಯಮ ಉಲ್ಲಂಘನೆ ಎಂದಿದ್ದರು. 

 

 

Follow Us:
Download App:
  • android
  • ios