Asianet Suvarna News Asianet Suvarna News

Mimicry Row: 'ನಾನು ಕೂಡ 20 ವರ್ಷ ಇಂಥ ಅವಮಾನ ಎದುರಿಸಿದ್ದೆ..' ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಟೀಕೆ

ಇನ್ನೊಂದೆಡೆ, ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ವಿಚಾರದಲ್ಲಿ ಯಾವುದೇ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ,
 

PM Narendra Modi and  President Droupadi Murmu called the Vice President Jagdeep Dhankhar on the mimicry issue san
Author
First Published Dec 20, 2023, 3:17 PM IST

ನವದೆಹಲಿ (ಡಿ.20): ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ ಅವರನ್ನು ಮಿಮಿಕ್ರಿ ಮಾಡಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅವರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ವಿಚಾರಗಳು ಬೆಳವಣಿಗೆ ಆಗಿರುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ನಮ್ಮ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ಕಂಡು ನಾನು ಅಚ್ಚರಿಗೊಂಡಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗೆ ಇರಬೇಕು. ಅದು ನಾವು ಹೆಮ್ಮೆಪಡುವ ಸಂಸದೀಯ ಸಂಪ್ರದಾಯವಾಗಿದೆ ಮತ್ತು ಭಾರತದ ಜನರು ಅದನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸುತ್ತಾರೆ' ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

"ನಿಮ್ಮ ಮಾತುಗಳು ಮತ್ತು ಮೂಲಭೂತ ಸೌಜನ್ಯಗಳು ಯಾವಾಗಲೂ ಉಳಿಯಬೇಕು ಎಂಬ ಸಮಯೋಚಿತ ಜ್ಞಾಪನೆಗಾಗಿ ರಾಷ್ಟ್ರಪತಿ ಜೀ ಅವರಿಗೆ ಧನ್ಯವಾದಗಳು" ಎಂದು ಉಪರಾಷ್ಟ್ರಪತಿ ಮಾತನಾಡಿದ್ದಾರೆ. "ನನ್ನ ಕೊನೆಯ ಉಸಿರು ಇರುವವರೆಗೂ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಲು ಬದ್ಧನಾಗಿದ್ದೇನೆ ಮತ್ತು ಯಾವುದೇ ಅವಮಾನಗಳು ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ, ಪಿಎಂ ಮೋದಿ ಅವರು ಕೆಲವು ಸಂಸದರ ನಾಟಕಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 'ಪ್ರಧಾನಿ ನರೇಂದ್ರಮೋದಿ ಜಿ ಅವರಿಂದ ದೂರವಾಣಿ ಕರೆ ಸ್ವೀಕರಿಸಿದೆ. ಅವರು ನಿನ್ನೆ ಪವಿತ್ರ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಗೌರವಾನ್ವಿತ ಸಂಸದರ ಕೆಟ್ಟ ನಡವಳಿಕೆಗಳ ಬಗ್ಗೆ ತೀವ್ರ ನೋವನ್ನು ವ್ಯಕ್ತಪಡಿಸಿದರು' ಎಂದು ಉಪರಾಷ್ಟ್ರಪತಿ ಸಚಿವಾಲಯ ಹೇಳಿದೆ. ನಾನು ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಸ್ವೀಕರಿಸುತ್ತಿದ್ದೇನೆ ಈಗಲೂ ಎದುರಿಸುತ್ತಿದ್ದೇನೆ. ಆದರೆ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಕೂಡ ಇದು ನಡೆಯಬಹುದು ಮತ್ತು ಅದು ಸಂಸತ್ತಿನಲ್ಲಿ ದುರದೃಷ್ಟಕರವಾಗಿದೆ ಎಂದು ಅವರು ಹೇಳಿದರು; ಎಂದು ಧನ್‌ಕರ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗಿದ್ದರೂ, ಇದು ತನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವುದಿಲ್ಲ ಎಂದು ಅವರು ಹೇಳಿದರು. "ನಾನು ಪ್ರಧಾನಮಂತ್ರಿಗಳಿಗೆ, ಕೆಲವರ ವರ್ತನೆಗಳು ನನ್ನ ಕರ್ತವ್ಯವನ್ನು ನಿರ್ವಹಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಎತ್ತಿಹಿಡಿಯುವುದನ್ನು ತಡೆಯುವುದಿಲ್ಲ. ನನ್ನ ಹೃದಯದ ಆಳದಿಂದ ಆ ಮೌಲ್ಯಗಳಿಗೆ ನಾನು ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಹಾದಿಯನ್ನು ಬದಲಾಯಿಸುವುದಿಲ್ಲ' ಎಂದು ಹೇಳಿದೆ ಎಂದು ಧನ್‌ಕರ್‌ ಎಕ್ಸ್‌ನಲ್ಲಿ ಬರೆದಿದ್ದಾರೆ.

Mimicry Row: ಕಲಾಪದಲ್ಲಿ 'ನಿಂತು' ಪ್ರತಿಭಟಿಸಿದ ಬಿಜೆಪಿ, ಉಲ್ಟಾ ಹೊಡೆದ ಕಲ್ಯಾಣ್‌ ಬ್ಯಾನರ್ಜಿ!

ವೈರಲ್‌ ಆದ ವಿಡಿಯೋ ಕ್ಲಿಪ್‌ನಲ್ಲಿ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ, ರಾಜ್ಯಸಭೆ ಅಧ್ಯಕ್ಷ ಜಗದೀಪ್‌ ಧನಕರ್‌ ಅವರ ರೀತಿ ಮಿಮಿಕ್ರಿ ಮಾಡಿದ್ದಲ್ಲದೆ, 'ನನ್ನ ಬೆನ್ನು ನೇರವಾಗಿದೆ. ನಾನು ಬಹಳ ಉದ್ಧವಾಗಿದ್ದೇನೆ' ಎಂದು ಹೇಳಿರುವ ಮಾತುಗಳನ್ನು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂದಿ ರೆಕಾರ್ಡ್‌ ಕೂಡ ಮಾಡುತ್ತಿದ್ದರು. ಇದಕ್ಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗೆ ಅವಮಾನ : ವೀಡಿಯೋ ಮಾಡಿ ಪ್ರೋತ್ಸಾಹಿಸಿದ ರಾಹುಲ್ ಗಾಂಧಿ

Follow Us:
Download App:
  • android
  • ios