"

ಕೋಲ್ಕತ್ತಾ(ನ.25): ಪ.ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕರೀಂಪುರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಜಾಯ್ ಪ್ರಕಾಶ್, ಪ್ರಚಾರ ಮಾಡುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ಏಕಾಏಕಿ ದಾಳಿ ಮಾಡಿದ್ದಾರೆ.

ಮತ್ತೆ ಹರಿಯಿತು ನೆತ್ತರು : ಮತ್ತೋರ್ವ ಬಿಜೆಪಿ ಮುಖಂಡನ ಹತ್ಯೆ
 

ಜಾಯ್ ಪ್ರಕಾಶ್ ಅವರನ್ನು ಸುತ್ತುವರೆದ ಟಿಎಂಸಿ ಕಾರ್ಯಕರ್ತರು, ಅವರನ್ನು ತಳ್ಳಾಡಿದಲ್ಲದೇ ಕಾಲಿನಿಂದ ಒದ್ದು ಅಮಾನವೀಯ ವರ್ತನೆ ತೋರಿದ್ದಾರೆ.

#WATCH West Bengal BJP Vice President and candidate for Karimpur bypoll, Joy Prakash Majumdar manhandled and kicked allegedly by TMC workers as voting is underway in the constituency. #WestBengalpic.twitter.com/Vpb5s14M5A

— ANI (@ANI) November 25, 2019

ಜಾಯ್ ಪ್ರಕಾಶ್ ಅವರನ್ನು ಟಿಎಂಸಿ ಕಾರ್ಯಕರ್ತನೋರ್ವ ಒದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಾಯ್ ಪ್ರಕಾಶ್ ಪೊದೆಯೊಳಗೆ ಹೋಗಿ ಬಿದ್ದಿದ್ದಾರೆ.

ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!

ಕೂಡಲೇ ಜಾಯ್ ಪ್ರಕಾಶ್ ನೆರವಿಗೆ ಧಾವಿಸಿದ ಪೊಲೀಸರು, ಟಿಎಂಸಿ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ.ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವಿನ ಜಗಳಕ್ಕೆ ಕೊನೆಯೇ ಇಲ್ಲದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಪರಸ್ಪರ ಕಿತ್ತಾಡುವ ಎರಡೂ ಪಕ್ಷಗಳ ಕಾರ್ಯಕರ್ತರು, ಹತ್ಯೆಯಂತಹ ಕೀಳು ಮಟ್ಟದ ರಾಜಕಾರಣಕ್ಕೂ ಇಳಿಯುವುದು ದುರದೃಷ್ಟಕರ.

ಕಳೆದ ಲೋಕಸಭೆ ಚುನಾವಣೆ ವೇಳೆ ಹಲವು ಬಿಜೆಪಿ-ಟಿಎಂಸಿ ಕಾರ್ಯಕರ್ತರು ಹತ್ಯೆಗೊಳಗಾಗಿದ್ದು, ಬಿಜೆಪಿ ಕಾರ್ಯಕರ್ತರ ಹಾಗೂ ನಾಯಕರು ಸರಣಿ ಹತ್ಯೆಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: