ಕೋಲ್ಕತಾ (ಫೆ.21): ಡಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ,  ಪಕ್ಷದ ಸಹೋದ್ಯೋಗಿಯೊಬ್ಬರು ತಮ್ಮ ವಿರುದ್ಧ ಸಂಚು ರೂಪಿಸಿರುವುದಾಗಿ ಆರೋಪಿಸಿದ್ದಾರೆ. 

ಕೊಕೇನ್‌ ಇಟ್ಟುಕೊಂಡ ಕಾರಣಕ್ಕೆ ಪಮೇಲಾ ಗೋಸ್ವಾಮಿ ಅವರನ್ನು ಶುಕ್ರವಾರ ದಕ್ಷಿಣ ಕೋಲ್ಕತಾದ ನ್ಯೂ ಅಲಿಪೋರ್‌ದಲ್ಲಿ ಬಂಧಿಸಲಾಗಿತ್ತು. 

ಮಾದಕ ವಸ್ತು ಹೊಂದಿದ್ದ ಬಿಜೆಪಿ ಯುವ ನಾಯಕಿ ಅರೆಸ್ಟ್

ವಿಚಾರಣೆಯ ವೇಳೆ, ಬಿಜೆಪಿಯ ರಾಕೇಶ್‌ ಸಿಂಗ್‌ ಎನ್ನುವವರು ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದಿದ್ದಾರೆ.

 ಅಲ್ಲದೇ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಪಮೇಲಾ ಹೇಳಿದ್ದಾರೆ. ಆದರೆ, ಈ ಆರೋಪವನ್ನು ರಾಕೇಶ್‌ ಸಿಂಗ್‌ ತಳ್ಳಿಹಾಕಿದ್ದಾರೆ.