ಬಿಜೆಪಿ ಯುವ ನಾಯಕಿಯೋರ್ವರನ್ನು ಬಂಧಿಸಲಾಗಿದೆ. ಬ್ಯಾಗಿನಲ್ಲಿ ಡ್ರಗ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. 

ಕೋಲ್ಕತಾ (ಫೆ.20): ಮಾದಕ ವಸ್ತು ಕೊಕೇನ್‌ನೊಂದಿಗೆ ಸಿಕ್ಕಿಬಿದ್ದಿರುವ ಬಿಜೆಪಿಯ ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 ಶುಕ್ರವಾರ ದಕ್ಷಿಣ ಕೋಲ್ಕತಾದ ನ್ಯೂ ಅಲಿಪೋರ್‌ ಎಂಬಲ್ಲಿ ಪಮೇಲಾ ಅವರು ತಮ್ಮ ಸ್ನೇಹಿತ ಪ್ರಬೀರ್‌ ಕುಮಾರ್‌ ಡೇ ಜೊತೆಗಿದ್ದರು.

ಜೈಲಿಗೆ ಹೋದ್ರೂ ಬುದ್ಧಿ ಬಂದಿಲ್ಲ, ಮತ್ತೆ ಗಾಂಜಾ ಬ್ಯುಸಿನೆಸ್‌ನಲ್ಲಿ ಸಿಕ್ಕಿ ಬಿದ್ದ ವೈಭವ್ ಜೈನ್ .

 ಈ ವೇಳೆ ಅವರ ಕಾರು ಮತ್ತು ಹ್ಯಾಂಡ್‌ಬ್ಯಾಗ್‌ನಲ್ಲಿ 100 ಗ್ರಾಂನಷ್ಟು ಕೊಕೇನ್‌ ಪತ್ತೆಯಾಗಿದೆ. ಹೀಗಾಗಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದಿದ್ದಾರೆ ನ್ಯೂ ಅಲಿಪೋರ್‌ ಪೊಲೀಸರು.

ಈ ಹಿಂದೆ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಹೊಂದಿದ್ದು ಇದರ ಜಾಲ ಪತ್ತೆಯಾಗುತ್ತಲೇ ಅನೇಕ ನಟ ನಟಿಯರು ಬಲೆಗೆ ಬಿದ್ದಿದ್ದರು. ಇದೀಗ ಬಿಜೆಪಿ ನಾಯಕಿಯನ್ನು ಅರೆಸ್ಟ್ ಮಾಡಲಾಗಿದೆ.