ಕೋಲ್ಕತಾ(ಮಾ.06): ಪಶ್ಚಿಮ ಬಂಗಾಳ ಚುನಾವಣೆ ಕಾವು ಏರುತ್ತಿದೆ. ಮಾರ್ಚ್ 27 ರಂದು ಬಂಗಾಳ ಚುನಾವಣೆ ಹಂತ ಹಂತಗಳಲ್ಲಿ ಆರಂಭಗೊಳ್ಳಲಿದೆ. ಬಂಗಾಳದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ವಿಶ್ವಾಸದಲ್ಲಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಪಶ್ಚಿಮ ಬಂಗಾಳ ಚುನಾವಣೆ: 291 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಮಮತಾ ಬ್ಯಾನರ್ಜಿ!.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 294 ಸ್ಥಾನಗಳ ಪೈಕಿ ಮೊದಲೆರೆಡು ಹಂತದ ಚುನಾವಣೆಗೆ ಬಿಜೆಪಿ 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೆಂದು ಅಧಿಕಾರಿ ಇದೀಗ ನಂದೀಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. 

ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಬಂಗಾಳ ಚುನಾವಣೆ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಪಾಲ್ಗೊಂಡಿದ್ದರು.

ಆಟವಾಡ್ತಾ ಆದರ್ಶ ಮರೆತ ದೀದಿ: ಬಿಜೆಪಿಗೆ ಸೇರಿದ ಮಾಜಿ ಟಿಎಂಸಿ ನಾಯಕ ತ್ರಿವೇದಿ!.

ಪಶ್ಚಿಮ ಬಂಗಾಳದ ಚುನಾವಣೆ ಮಾರ್ಚ್ 27 ರಂದು ಆರಂಭಗೊಳ್ಳಲಿದೆ. 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 66 ದಿನಗಳ ಕಾಲ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.
8 ಹಂತದ ಚುನಾವಣೆ:
1ನೇ ಹಂತದ ಚುನಾವಣೆ: ಮಾರ್ಚ್ 27
2ನೇ ಹಂತದ ಚುನಾವಣೆ: ಎಪ್ರಿಲ್ 1
3ನೇ ಹಂತದ ಚುನಾವಣೆ: ಎಪ್ರಿಲ್ 6
4ನೇ ಹಂತದ ಚುನಾವಣೆ: ಎಪ್ರಿಲ್ 10
5ನೇ ಹಂತದ ಚುನಾವಣೆ: ಎಪ್ರಿಲ್ 17
6ನೇ ಹಂತದ ಚುನಾವಣೆ: ಎಪ್ರಿಲ್ 22
7ನೇ ಹಂತದ ಚುನಾವಣೆ: ಎಪ್ರಿಲ್ 26
8ನೇ ಹಂತದ ಚುನಾವಣೆ: ಎಪ್ರಿಲ್ 29