ನವದೆಹಲಿ (ನ. 04): ಗಾಂಧಿ ಕುಟುಂಬಕ್ಕೆ ಬಹುಕಾಲದಿಂದ ನಿಷ್ಠರಾಗಿದ್ದ ಪಂಕಜ್‌ ಶಂಕರ್‌ ಎಂಬ ಪತ್ರಕರ್ತರೊಬ್ಬರು, ಕಾಂಗ್ರೆಸ್‌ ಪಕ್ಷದ ದುಃಸ್ಥಿತಿಗೆ ಸೋನಿಯಾ ಗಾಂಧಿ ಅವರ ‘ಪುತ್ರ ಮೋಹ’ವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಕುರಿತಂತೆ 13 ಕಂತುಗಳ ‘ವೆಬ್‌ ಸರಣಿ’ಯನ್ನು ಪ್ರಸಾರ ಮಾಡಲು ನಿರ್ಧರಿಸಿದ್ದಾರೆ.

ಮೋದಿ ಭೇಟಿ ವೇಳೆ ಮೊಬೈಲ್ ಕಸಿದಿದ್ದಕ್ಕೆ ಎಸ್ ಪಿ ಬಿ ಆಕ್ರೋಶ

ಪ್ರಮುಖ ವೆಬ್‌ಸೈಟ್‌ಗಳಲ್ಲಿ ಈ ಸರಣಿ ಇನ್ನು 3 ತಿಂಗಳಲ್ಲಿ ಪ್ರಸಾರವಾಗುವ ನಿರೀಕ್ಷೆಯಿದ್ದು, ರಾಹುಲ್‌ ಗಾಂಧಿ ಅವರ ವೈಫಲ್ಯಗಳನ್ನು ಎತ್ತಿ ತೋರಿಸಲಿದೆ. ಈ ಬಗ್ಗೆ ಮಾತನಾಡಿದ ಶಂಕರ್‌, ‘ಪ್ರಿಯಾಂಕಾ ವಾದ್ರಾ ಅವರಿಗೆ ಕಾಂಗ್ರೆಸ್‌ಗೆ ಪುನಶ್ಚೇತನ ನೀಡುವ ಎಲ್ಲ ಶಕ್ತಿ ಇದೆ. ಆದರೆ ಸೋನಿಯಾ ಅವರ ‘ಪುತ್ರ ಮೋಹ’ವು ಪ್ರಿಯಾಂಕಾ ಪದೋನ್ನತಿಗೆ ತಡೆ ಹಾಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಂಕರ್‌ ಅವರು ಇತ್ತೀಚಿನ ಲೋಕಸಭೆ ಚುನಾವಣೆ ವೇಳೆ ಪ್ರಿಯಾಂಕಾ ಅವರ ಮಾಧ್ಯಮ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದರು. ಅಲ್ಲದೆ, ಅವರ ಕಾರ್ಯಗಳ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌ನ ಅಡ್ಮಿನ್‌ ಕೂಡ ಆಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ, ‘ಪಕ್ಷಕ್ಕೂ ಶಂಕರ್‌ ಅವರಿಗೂ ಯಾವುದೇ ಅಧಿಕೃತ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.