ಚೆನ್ನೈ (ನ. 04): ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸ್ಟಾರ್‌ ನಟರಿಗೆ ಮಾತ್ರ ಮೊಬೈಲ್‌ ಫೋನ್‌ ಒಯ್ಯಲು ಅವಕಾಶ ನೀಡಿದ್ದಕ್ಕೆ ಗಾಯಕ ಎಸ್‌.ಬಿ. ಬಾಲಸುಬ್ರಹ್ಮಣ್ಯಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದ ವೇಳೆ ಕೆಲವೊಂದು ನಟರ ಮೇಲೆ ತಾರತಮ್ಯ ತೋರಲಾಗಿತ್ತು. ಗಣ್ಯರ ಕಾರ್ಯಕ್ರಮದ ವೇಳೆ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿರುವುದು ದಿಗ್ಭ್ರಮೆ ಉಂಟು ಮಾಡಿದೆ ಎಂದು ಎಸ್‌.ಪಿ.ಬಿ. ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ವೈರಲ್‌ ಆಗಿದೆ.

 

ಪ್ರಿಯಾಂಕಾ ಫೋನ್ ಗೂ ವಾಟ್ಸಾಪ್ ನಿಂದ ಕನ್ನ?

‘ಮಾನ್ಯ ಪ್ರಧಾನಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ನಾನು ಕೂಡ ಭಾಗಿಯಾಗಲು ರಾಮೋಜಿ ರಾವ್‌ ಅವರು ಕಾರಣ. ಈ ಕಾರಣಕ್ಕಾಗಿ ನಾನು ಅವರಿಗೆ ಚಿರಋುಣಿ. ಪ್ರಧಾನಿ ಅವರ ನಿವಾಸದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ನಮ್ಮ ಬಳಿ ಇದ್ದ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಪಡೆದುಕೊಂಡು ಟೋಕನ್‌ಗಳನ್ನು ನೀಡಿದರು. ಆದರೆ, ಕಾರ್ಯಕ್ರಮದ ವೇಳೆ ಸ್ಟಾರ್‌ ನಟರು ಮೋದಿ ಅವರ ಜೊತೆ ಸೆಲ್ಫೀ ತೆಗೆದುಕೊಂಡಿದ್ದನ್ನು ಕಂಡು ದಿಗ್ಭ್ರಮೆಗೆ ಒಳಗಾದೆ’ ಎಂದು ಬಾಲಸುಬ್ರಹ್ಮಣ್ಯಂ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗಾಂಧಿ ವಾದ ಹಾಗೂ ಸಿದ್ಧಾಂತ ಪ್ರಚಾರಕ್ಕಾಗಿ ಆಯೋಜಿಸಿದ್ದ ಭೇಟಿಯ ವೇಳೆ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಅಮಿರ್‌ ಖಾನ್‌ ಸೇರಿದಂತೆ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು.