ಬಹುವರ್ಣದ ಬಂಧನಿ ಪೇಟಾ ಧರಿಸಿ ಸತತ 90 ನಿಮಿಷ ಕಾಲ ಮೋದಿ ವಾಗ್ಝರಿ

ದೇಶದ 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 90 ನಿಮಿಷಗಳ ಕಾಲ ಮಾತನಾಡಿ ಸರ್ಕಾರದ ಸಾಧನೆಗಳನ್ನು ಹಾಗೂ ತಮ್ಮ ಭವಿಷ್ಯದ ಪರಿಕಲ್ಪನೆಯನ್ನು ಜನರ ಮುಂದೆ ಬಿಚ್ಚಿಟ್ಟರು.

Wearing a multi-colored bandhani peta, Modi spoke for 90 minutes in independence day program akb

ನವದೆಹಲಿ: ದೇಶದ 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 90 ನಿಮಿಷಗಳ ಕಾಲ ಮಾತನಾಡಿ ಸರ್ಕಾರದ ಸಾಧನೆಗಳನ್ನು ಹಾಗೂ ತಮ್ಮ ಭವಿಷ್ಯದ ಪರಿಕಲ್ಪನೆಯನ್ನು ಜನರ ಮುಂದೆ ಬಿಚ್ಚಿಟ್ಟರು. ಈ ಹಿಂದೆ 2016ರಲ್ಲಿ 96 ನಿಮಿಷ ಭಾಷಣ ಮಾಡಿದ್ದು ಈವರೆಗಿನ ಹೆಚ್ಚಿನ ಅವಧಿಯಾಗಿತ್ತು. 2017ರಲ್ಲಿ ಕೇವಲ 56 ನಿಮಿಷ ಭಾಷಣ ಮಾಡಿದ್ದರು. ಇದು ಅವರ ಕನಿಷ್ಠ ಅವಧಿಯ ಭಾಷಣ. ಇದನ್ನು ಹೊರತುಪಡಿಸಿ 2015ರಲ್ಲಿ 86 ನಿಮಿಷ, 2018-83, 2019ರಲ್ಲಿ 92 ನಿಮಿಷ, 2020ರಲ್ಲಿ 90 ನಿಮಿಷ ಹಾಗೂ 2021ರಲ್ಲಿ 88 ನಿಮಿಷ ಮಾತನಾಡಿದ್ದರು.

ಸಂಪ್ರದಾಯದಂತೆ ಬಹುವರ್ಣದ ಬಂಧನಿ ಪೇಟಾ ಧರಿಸಿದ ಮೋದಿ

ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆ ಭಾಷಣಕ್ಕೆ ಬರುವಾಗ ಬಹುವರ್ಣದ ಪೇಟಾ (multi-coloured petta) ಧರಿಸುವ ಸಂಪ್ರದಾಯವನ್ನು ಪ್ರಧಾನಿ ನರೇಂದ್ರ ಮೋದಿ ಈ ವರ್ಷವೂ ಮುಂದುವರೆಸಿದ್ದಾರೆ. ಪ್ರಧಾನಿ ಮೋದಿ ರಾಜಸ್ಥಾನ ಬಂಧನಿ ಪ್ರಿಂಟ್‌ ಪೇಟಾ (Rajasthan Bandhani print peta), ಬಿಳಿಯ ಕುರ್ತಾ, ಪೈಜಾಮಾ ಧರಿಸಿ ಗಮನ ಸೆಳೆದರು. ಕುರ್ತಾ ಮೇಲೆ ಕಪ್ಪು ಬಣ್ಣದ ವಿ ನೆಕ್‌ ಜಾಕೆಟ್‌ ತೊಟ್ಟಿದ್ದರೆ ಅವರು ತೊಟ್ಟಿದ್ದ ಪೇಟಾ ಹಳದಿ, ಹಸಿರು ಬಣ್ಣ ಒಳಗೊಂಡಿದ್ದು, ಬಾಲ ಕೆಂಪು ಬಣ್ಣದಲ್ಲಿತ್ತು. 2014ರಿಂದಲೂ ಪ್ರಧಾನಿ ಮೋದಿ ಹೀಗೆ ಬಣ್ಣ ಬಣ್ಣದ ಪೇಟಾ ತೊಡುವ ಅಭ್ಯಾಸ ರೂಪಿಸಿಕೊಂಡಿದ್ದಾರೆ.

ಮುಂದಿನ ವರ್ಷಇದೇ ಸ್ಥಳ, ಇದೇ ಸಮಯ; ಕೆಂಪುಕೋಟೆಯಲ್ಲಿ ಮತ್ತೆ ಮೋದಿ ಸರ್ಕಾರದ ಭರವಸೆ!

ಸರ್ಕಾರದ ನೀತಿಗಳಿಂದ ಭಾರತ ವಿಶ್ವದ 3ನೇ ಸ್ಟಾರ್ಟಪ್‌ ಹಬ್‌: ಮೋದಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀತಿಗಳು ದೇಶದ ಯುವಕರಿಗೆ ಬಲವನ್ನು ತುಂಬಿದ್ದು, ಇದು ಭಾರತ ವಿಶ್ವದಲ್ಲೇ 3ನೇ ಅತಿದೊಡ್ಡ ಸ್ಟಾರ್ಟಪ್‌ ಎಕೋಸಿಸ್ಟಂ (startup ecosystem) ಆಗಲು ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯುವ ಶಕ್ತಿಯನ್ನು ನಂಬುತ್ತೇನೆ. ಹಾಗೆಯೇ ನಮ್ಮ ನೀತಿಗಳು ಯುವಶಕ್ತಿಗೆ ಮತ್ತಷ್ಟು ಬಲ ನೀಡಿದೆ. ಭಾರತದ ಯುವಕರ ಶಕ್ತಿಯನ್ನು ನೋಡಿ ವಿಶ್ವವೇ ನಿಬ್ಬೆರಗಾಗಿದೆ. ಯುವಶಕ್ತಿ ಭಾರತವನ್ನು ಸ್ಟಾರ್ಟ್‌ಅಪ್‌ ವಿಭಾಗದಲ್ಲಿ ಜಗತ್ತಿನ 3ನೇ ಅತಿದೊಡ್ಡ ರಾಷ್ಟ್ರವನ್ನಾಗಿಸಿದೆ. ಏಪ್ರಿಲ್‌ವರೆಗೆ ದೇಶದಲ್ಲಿ 98,119 ಸ್ಟಾರ್ಟಪ್‌ಗಳು ತಲೆ ಎತ್ತಿವೆ. ಅಲ್ಲದೇ ನಾವು 40 ಲಕ್ಷ ಕೋಟಿ ರು. ರಫ್ತಿನ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಇದು ಈ ಮಿತಿಯನ್ನು ಮೀರಿದೆ ಎಂದು ಹೇಳಿದರು.

ವಿಶ್ವಾದ್ಯಂತ ಸ್ವಾತಂತ್ರ್ಯ ಸಂಭ್ರಮ: ಗಣ್ಯರಿಂದ ಭಾರತಕ್ಕೆ ಶುಭಾಶಯ

ಅಮೆರಿಕ, ಚೀನಾ, ಇಂಗ್ಲೆಂಡ್‌ ಸೇರಿದಂತೆ ವಿಶ್ವಾದ್ಯಂತ ಮಂಗಳವಾರ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಯಾ ದೇಶದ ಭಾರತೀಯ ಕಚೇರಿಗಳಲ್ಲಿ ಆಚರಿಸಲಾಯಿತು. ಈ ವೇಳೆ ಸ್ಥಳೀಯ ಭಾರತೀಯ ಮೂಲದ ಜನರೆಲ್ಲ ಸೇರಿ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿದರು. ಹಲವೆಡೆ ನೃತ್ಯ, ಸಂಗೀತ ಮತ್ತು ನಾಟಕಗಳನ್ನು ಪ್ರದರ್ಶಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಅಂತೆಯೇ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆದುರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ಭಾಷಣವನ್ನು ಓದಿದರು.

Har ghar Tiranga ವೆಬ್‌ಸೈಟ್‌ನಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಿ ಸರ್ಟಿಫಿಕೇಟ್‌ ಪಡೆಯೋದು ಹೇಗೆ ?

ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ (Australian Prime Minister Anthony Albanese), ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌, ನೇಪಾಳದ ವಿದೇಶಾಂಗ ಸಚಿವ ಎನ್‌.ಪಿ ಸೌದ್‌ ಸೇರಿ ಹಲವು ಜಾಗತಿಕ ಗಣ್ಯರು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

Latest Videos
Follow Us:
Download App:
  • android
  • ios