Asianet Suvarna News Asianet Suvarna News

ಮುಂದಿನ ವರ್ಷಇದೇ ಸ್ಥಳ, ಇದೇ ಸಮಯ; ಕೆಂಪುಕೋಟೆಯಲ್ಲಿ ಮತ್ತೆ ಮೋದಿ ಸರ್ಕಾರದ ಭರವಸೆ!

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ಈ ವೇಳೆ ಮುಂದಿನ ವರ್ಷ ಇದೇ ಸಮಯ, ಇದೇ ಸ್ಥಳದಲ್ಲಿ ನಿಂತು ಧ್ವಜಾರೋಹಣ ಮಾಡುತ್ತೇನೆ. ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಮತ್ತೆ ಪ್ರಧಾನಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ.
 

Independence Day Modi assured next term as PM in Red fort for flag hoist ckm
Author
First Published Aug 15, 2023, 10:34 AM IST

ನವದೆಹಲಿ(ಆ.15) ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ದೇಶವನ್ನುದ್ದೇಶಿ ಮಾತನಾಡಿದ ಮೋದಿ, ಭಾರತದ ಬೆಳವಣಿಗೆ, ವಿಶ್ವದಲ್ಲಿ ಭಾರತಕ್ಕಿರುವ ಸ್ಥಾನ ಸೇರಿದಂತೆ ಹಲವು ಅಭಿವೃದ್ಧಿಗಳ ಕುರಿತು ಮಾತನಾಡಿದ್ದಾರೆ. ಭಾಷಣದ ಅಂತ್ಯದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಭರವಸೆ ನೀಡಿದ್ದಾರೆ. ಇದು ವಿಪಕ್ಷಗಳ ಕಣ್ಮು ಕೆಂಪಾಗಿಸಿದೆ. ಮುಂದಿನ ವರ್ಷ ಇದೇ ಸ್ಥಳ, ಇದೇ ಸಮಯದಲ್ಲಿ ಮತ್ತೆ ನಿಮ್ಮನ್ನುದ್ದೇಶಿ ಮಾತನಾಡುತ್ತೇನೆ. ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಮುಂದಿನ 5 ವರ್ಷ ಭಾರತದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ ಸಮಯ ಎಂದು ಮೋದಿ ಹೇಳಿದ್ದಾರೆ.

2014ರಲ್ಲಿ ನನ್ನ ಮೇಲೆ ಭರವಸೆ ಇಟ್ಟು ಅಧಿಕಾರ ನೀಡಿದ್ದೀರಿ. 2019ರಲ್ಲಿ ಸರ್ಕಾರದ ಆಡಳಿತ ನೋಡಿ ಮತ್ತೆ ಅಧಿಕಾರ ನೀಡಿದ್ದೀರಿ. ಮುಂದಿನ 5 ವರ್ಷ ಅಭಿವೃದ್ಧಿಯ ವಿಚಾರದಲ್ಲಿ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಪರಿವಾರವಾದ ಪಕ್ಷಗಳು ದೇಶದ ಅಭಿವೃದ್ಧಿ ಬದಲು ತಮ್ಮ ಕುಟುಂಬದ ಅಭಿವೃದ್ಧಿ ಮಾಡುತ್ತಿದೆ ಎಂದು ಮೋದಿ ವಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ.

ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ

ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ಮೋದಿ ರಾಜಕೀಯ ಉದ್ದೇಶಕ್ಕೆ ಬಳಸಿದ್ದಾರೆ ಎಂದು ವಿಪಕ್ಷಗಳು ಕಿಡಿ ಕಾರಿದೆ. ಲೋಕಸಭೆ ಚುನಾವಣೆ ಹಾಗೂ ಗೆಲುವಿನ ಕುರಿತು ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.  90 ನಿಮಿಷದ ಭಾಷಣದಲ್ಲಿ ಮೋದಿ, ಕಳೆದ 10 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ಭಾರತ ಇದೀಗ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿದೆ. ಇದು ಸುಮ್ಮನೆ ಆಗಿಲ್ಲ. ಇದರ ಹಿಂದೆ ಭಾರತೀರ ಪರಿಶ್ರಮವಿದೆ. ಇದೀಗ ಭಾರತವನ್ನು 3ನೇ ಅತೀ ದೊಡ್ಡ ಆರ್ಥಿಕತೆ ಮಾಡುವುದು ನಮ್ಮ ಗುರಿ ಎಂದು ಮೋದಿ ಹೇಳಿದ್ದಾರೆ.

ಭ್ರಷ್ಟಾಚಾರ ಭಾರತದ ಅಭಿವೃದ್ಧಿಯನ್ನು ಕುಂಠಿತಗೊಳಿಸಿತ್ತು. ಆದರೆ ಕಳೆದ 10 ವರ್ಷ ಸ್ವಚ್ಚ ಆಡಳಿತ ನೀಡಿದ್ದೇವೆ. ಮುಂದಿನ ಅವಧಿಯಲ್ಲಿ ಭಾರತದ ಅಭಿವೃದ್ಧಿ ಮತ್ತಷ್ಟು ವೇಗವಾಗಿ ಸಾಗಲಿದೆ. ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜಗೆ ಏರಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಇಂದು 77ನೇ ಸ್ವಾತಂತ್ರ್ಯ ಸಂಭ್ರಮ: 10ನೇ ಬಾರಿ ಧ್ವಜರೋಹಣ ನೆರವೇರಿಸಿದ ಪ್ರಧಾನಿ

ಪ್ರಧಾನಿ ಮೋದಿ ಎರಡನೇ ಅವಧಿಯ ಕೊನೆಯ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮೋದಿ ಹಲವು ಭರವಸೆಗಳನ್ನು ನೀಡಿದ್ದಾರೆ. ಕೋವಿಡ್ ಬಳಿಕ ದೇಶದಲ್ಲಿನ ವೈದ್ಯಕೀಯ ಕ್ಷೇತ್ರ ಮೂಲಸೌಕರ್ಯಗಳ ಬೇಡಿಕೆ ಅಗಾಧವಾಗಿತ್ತು. ಅದನ್ನು ಪೂರೈಸಿ ಸವಾಲನ್ನು ಮೆಟ್ಟಿನಿಂತಿದ್ದೇವೆ. ಭಾರತ ತಂತ್ರಜ್ಞಾನದಲ್ಲಿ ಸಾಧನೆ ಪಥದಲ್ಲಿ ಸಾಗುತ್ತಿದೆ. ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನ ಅಲಂಕರಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಭಾರತ ಹಿಂದೆಂದು ಕಾಣದಂತ ಅಭಿವೃದ್ಧಿಯಾಗಿದೆ. ಸೋರಿಕೆ ತಡೆ ಹಿಡಿಯಲಾಗಿದೆ ಎಂದು ಮೋದಿ ಹೇಳಿದ್ದಾರೆ. 

Follow Us:
Download App:
  • android
  • ios