Asianet Suvarna News Asianet Suvarna News

Har ghar Tiranga ವೆಬ್‌ಸೈಟ್‌ನಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಿ ಸರ್ಟಿಫಿಕೇಟ್‌ ಪಡೆಯೋದು ಹೇಗೆ ?

ಭಾರತ ಇಂದು ದೇಶಾದ್ಯಂತ 2023ರ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಿಕೊಳ್ಳುತ್ತಿದೆ. ಹರ್ ಘರ್ ತಿರಂಗಾದಲ್ಲಿ ನೋಂದಣಿ ಮಾಡಿಸ್ಕೊಂಡು, ಸೆಲ್ಫಿ ಅಪ್‌ಲೋಡ್ ಮಾಡಿ ಪ್ರಮಾಣಪತ್ರ ಡೌನ್‌ಲೋಡ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

Har Ghar Tiranga 2023 Registration, Certificate Download at harghartiranga.com Vin
Author
First Published Aug 15, 2023, 10:12 AM IST

Harghartiranga.com ಎಂಬುದು ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗವಹಿಸಲು ಭಾರತೀಯರೆಲ್ಲರಿಗೂ ಅನುಮತಿಸುವ ವೆಬ್‌ಸೈಟ್ ಆಗಿದೆ. ಈ ಅಭಿಯಾನವು ಧ್ವಜದೊಂದಿಗೆ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಭಾರತೀಯ ಧ್ವಜಕ್ಕೆ ತಮ್ಮ ಬೆಂಬಲವನ್ನು ಪ್ರದರ್ಶಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಮತ್ತು ರಾಷ್ಟ್ರಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ಅಪ್‌ಲೋಡ್ ಮಾಡುವ ಮೂಲಕ, ನಿಮ್ಮ ಭಾಗವಹಿಸುವಿಕೆಯ ಸಂಕೇತವಾಗಿ ನೀವು ವಿಶೇಷ ಪ್ರಮಾಣಪತ್ರವನ್ನು ಪಡೆಯಬಹುದು. 

ಹರ್ ಘರ್ ತಿರಂಗ 2023
ಹರ್ ಘರ್ ತಿರಂಗಾ 2023 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. ಈ ಅಭಿಯಾನವು (Campaign) 2023ರ ಆಗಸ್ಟ್ 13 ರಿಂದ ಆಗಸ್ಟ್ 15ರ ವರೆಗೆ ಜನರು ತಮ್ಮ ಮನೆ, ಕಚೇರಿ, ಅಂಗಡಿಗಳ ಆವರಣದಲ್ಲಿ ಭಾರತೀಯ ಧ್ವಜವನ್ನು (Indian flag) ಹಾರಿಸುವ ಮೂಲಕ ಸಕ್ರಿಯವಾಗಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪ್ರತಿ ಮನೆಯವರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸಾಮೂಹಿಕ ಪ್ರಯತ್ನವು ನಾಗರಿಕರಲ್ಲಿ ಏಕತೆ, ದೇಶಭಕ್ತಿ ಮತ್ತು ರಾಷ್ಟ್ರಧ್ವಜದ ಗೌರವವನ್ನು ಬೆಳೆಸಲು ಪ್ರಯತ್ನಿಸುತ್ತದೆ. 

Independence Day 2023: ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ 76 ಅಥವಾ 77, ಯಾಕಿಷ್ಟು ಕನ್‌ಫ್ಯೂಶನ್‌!

ಅಭಿಯಾನದಲ್ಲಿ ಭಾಗವಹಿಸುವವರು ಅಧಿಕೃತ ವೆಬ್‌ಸೈಟ್, hargartiranga.com ನಲ್ಲಿ ನೋಂದಾಯಿಸಿಕೊಂಡು, ರಾಷ್ಟ್ರಧ್ವಜದೊಂದಿಗೆ ಸೆಲ್ಫೀಯನ್ನು ಅಪ್‌ಲೋಡ್ ಮಾಡಬಹುದಾಗಿದೆ. ಯಶಸ್ವಿ ನೋಂದಣಿ (Registration) ಮತ್ತು ಭಾಗವಹಿಸುವಿಕೆಯ ನಂತರ, ವ್ಯಕ್ತಿಗಳು ಅಭಿಯಾನಕ್ಕೆ ತಮ್ಮ ಕೊಡುಗೆಯನ್ನು ಗುರುತಿಸಿ ಪ್ರಮಾಣಪತ್ರವನ್ನು ಪಡೆಯಬಹುದು.

77ನೇ ಸ್ವಾತಂತ್ರ್ಯ ದಿನಾಚರಣೆ 2023
ಭಾರತದ 77ನೇ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15, 2023 ರಂದು ಆಚರಿಸಲಾಗುತ್ತದೆ. ಈ ಮಹತ್ವದ ದಿನವು ಬ್ರಿಟಿಷರ ಆಳ್ವಿಕೆಯಿಂ ಮುಕ್ತಗೊಂಡು ದೇಶಕ್ಕೆ ಸ್ವಾತಂತ್ರ್ಯ (Inpendence) ದೊರಕಿರುವುದನ್ನು ಸೂಚಿಸುತ್ತದೆ. ಭಾರತವು ಸ್ವಾತಂತ್ರ್ಯ ಪಡೆದ ಐತಿಹಾಸಿಕ ದಿನವನ್ನು ಸ್ಮರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು, ಧ್ವಜಾರೋಹಣ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇಶಭಕ್ತಿಯ ಭಾಷಣಗಳನ್ನು ನಡೆಸಲಾಗುತ್ತದೆ. 

ಹರ್ ಘರ್ ತಿರಂಗಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಹರ್ ಘರ್ ತಿರಂಗಾ ಪ್ರಮಾಣಪತ್ರ ಡೌನ್‌ಲೋಡ್ ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದ ಹರ್ ಘರ್ ತಿರಂಗ 2023 ಉಪಕ್ರಮದ ಅವಿಭಾಜ್ಯ ಅಂಗವಾಗಿದೆ. ಈ ಪ್ರಮಾಣಪತ್ರವು ಅಭಿಯಾನದಲ್ಲಿ ಭಾಗವಹಿಸುವಿಕೆಯನ್ನು ಸಂಕೇತಿಸುತ್ತದೆ. ಆಗಸ್ಟ್ 13 ರಿಂದ ಆಗಸ್ಟ್ 15, 2023 ರವರೆಗೆ ತಮ್ಮ ಮನೆಗಳಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಾರಿಸಲು ನಾಗರಿಕರನ್ನು ಮನವಿ ಮಾಡಿಕೊಳ್ಳುತ್ತದೆ. ಪ್ರಮಾಣಪತ್ರವನ್ನು ಪಡೆಯಲು, ಈ ಸರಳ ಹಂತಗಳನ್ನು ಅನುಸರಿಸಿ:

ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ

➤ ಹಂತ 1: ಅಧಿಕೃತ ವೆಬ್‌ಸೈಟ್, hargartiranga.com ಗೆ ಭೇಟಿ ನೀಡಿ.
➤ ರಿಜಿಸ್ಟರ್‌ ಬಟನ್ ಕ್ಲಿಕ್ ಮಾಡಿ
➤ ಹಂತ 2: 'ಫ್ಲಾಗ್‌ನೊಂದಿಗೆ ಸೆಲ್ಫಿ ಅಪ್‌ಲೋಡ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
➤ ಹಂತ 3: ನಿಮ್ಮ ಹೆಸರನ್ನು ನಮೂದಿಸಿ ಮತ್ತು ರಾಷ್ಟ್ರಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ಅಪ್‌ಲೋಡ್ ಮಾಡಿ.
➤ ಹಂತ 4: ಸಬ್ಮಿಟ್‌ ಕ್ಲಿಕ್ ಮಾಡಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
➤ ಹಂತ 5: ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪರಿಶೀಲನೆ ಕೋಡ್ ಅನ್ನು ಸ್ವೀಕರಿಸುತ್ತೀರಿ.
➤ ಹಂತ 6: ಪರಿಶೀಲನೆ ಕೋಡ್ ನಮೂದಿಸಿ ಮತ್ತು ಪರಿಶೀಲಿಸು ಬಟನ್ ಕ್ಲಿಕ್ ಮಾಡಿ.
➤ ಹಂತ 7: ನಿಮ್ಮ ಹರ್ ಘರ್ ತಿರಂಗ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ.

ತಿರಂಗದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ-  https://hargartiranga.com " ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್‌) ಪ್ರಧಾನಿ ಮೋದಿ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಇಲ್ಲಿಯವರೆಗೆ ಹರ್ ಘರ್ ತಿರಂಗ ವೆಬ್‌ಸೈಟ್‌ನಲ್ಲಿ ಸುಮಾರು 40 ಮಿಲಿಯನ್ ಜನರು ತಮ್ಮ ಸೆಲ್ಫಿಗಳನ್ನು ಉಪಕ್ರಮದ ಭಾಗವಾಗಿ ಅಪ್‌ಲೋಡ್ ಮಾಡಿದ್ದಾರೆ.

Follow Us:
Download App:
  • android
  • ios