ಇಲ್ಲೊಂದು ಕಡೆ ಮಗನೋರ್ವ ತನ್ನ ತಾಯಿಗೆ ಬಂಗಾರದ ಸರವನ್ನು ಕೊಡುಗೆಯಾಗಿ ನೀಡಿ ಸರ್‌ಪ್ರೈಸ್ ನೀಡಿದ್ದಾನೆ. ಆದರೆ ಈ ಭಾರಿ ಕೊಡುಗೆಯನ್ನು ನಿರೀಕ್ಷಿಸದ ತಾಯಿ ಭಾವುಕರಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಪೋಷಕರು ಅಥವಾ ತಂದೆ ತಾಯಿ ಮಕ್ಕಳಿಗಾಗಿ ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳ ಏಳ್ಗೆಗಾಗಿ ಅವರ ಕನಸುಗಳನ್ನು ಈಡೇರಿಸಲು ಶ್ರಮ ಪಡುತ್ತಾರೆ. ಪೋಷಕರು ಇದಕ್ಕಾಗಿ ಮಕ್ಕಳಿಂದ ಯಾವುದೇ ಮರು ನಿರೀಕ್ಷೆ ಮಾಡುವುದಿಲ್ಲ. ಆದಾಗ್ಯೂ ಮಕ್ಕಳು ತಮ್ಮ ತಂದೆ ತಾಯಿಯ ಮಹತ್ವವನ್ನು ಅರಿತುಕೊಂಡು ಅವರಿಗೆ ಅದನ್ನು ಪ್ರೀತಿಯ ರೂಪದಲ್ಲಿ ಸಮರ್ಪಿಸಿದಾಗ ಪೋಷಕರಿಗೆ ಆಗುವ ಸಂತೋಷ ಊಹೆಗೂ ನಿಲುಕದ್ದು, ಅದೇ ರೀತಿ ಇಲ್ಲೊಂದು ಕಡೆ ಮಗನೋರ್ವ ತನ್ನ ತಾಯಿಗೆ ಬಂಗಾರದ ಸರವನ್ನು ಕೊಡುಗೆಯಾಗಿ ನೀಡಿ ಸರ್‌ಪ್ರೈಸ್ ನೀಡಿದ್ದಾನೆ. ಆದರೆ ಈ ಭಾರಿ ಕೊಡುಗೆಯನ್ನು ನಿರೀಕ್ಷಿಸದ ತಾಯಿ ಭಾವುಕರಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@Gulzar_sahab ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅಮ್ಮನಿಗಾಗಿ ಚಿಕ್ಕದೊಂದು ಕೊಡುಗೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಮನೆಯ ಹಾಲ್‌ನಲ್ಲಿ ತಾಯಿ ನೆಲದಲ್ಲಿ ಕುಳಿತು ತಟ್ಟೆಗಳನ್ನು ಇರಿಸಿ ಎಲ್ಲರಿಗೂ ಆಹಾರ ಬಡಿಸುತ್ತಿದ್ದು, ಈ ವೇಳೆ ಮಗ ಹಿಂದಿನಿಂದ ಬಂದು ತಾಯಿಯ ಕೊರಳಿಗೆ ಚಿನ್ನದ ಸರವನ್ನು ಹಾಕುತ್ತಿದ್ದಾನೆ. ಈ ವೇಳೆ ತಾಯಿ ಭಾವುಕವಾಗಿದ್ದು, ಅಚ್ಚರಿಯ ಭಾವದಿಂದ ಮಗನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮಗನ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂತಹ ಮಗ ಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಮದ್ವೆ ದಿನ ವರನ ಸರ್‌ಪ್ರೈಸ್, ಸ್ಪೆಷಲ್ ಗೆಸ್ಟ್ ನೋಡಿ ಕಣ್ಣೀರಾಧ ವಧು, ಬಂದಿದ್ಯಾರು ?
ಕೆಲ ದಿನಗಳ ಹಿಂದೆ ಪುತ್ರನೋರ್ವ ತನ್ನ ತಾಯಿಗೆ ಮೊಬೈಲ್ ಫೋನ್ ತಂದುಕೊಟ್ಟಾಗ ಆ ತಾಯಿ ಪ್ರತಿಕ್ರಿಯಿಸಿದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಚೇರ್ ಮೇಲೆ ತಮ್ಮಷ್ಟಕ್ಕೆ ತಾವು ಕುಳಿತಿದ್ದ ತಾಯಿಗೆ ಮಗ ದೊಡ್ಡದಾದ ಸ್ಮಾರ್ಟ್‌ಫೋನ್ ಗಿಫ್ಟ್ ನೀಡಿದ್ದ. ಈ ವೇಳೆ ತಾಯಿ ಬಹಳ ಅಚ್ಚರಿ ಹಾಗೂ ಖುಷಿಯಿಂದ ಬೊಬ್ಬೆ ಹೊಡೆದಿದ್ದರು. ಸಾಮಾನ್ಯವಾಗಿ ಪೋಷಕರು ಮಕ್ಕಳಿಂದ ಪ್ರೀತಿಯ ಹೊರತಾಗಿ ಬೇರೇನನ್ನು ನಿರೀಕ್ಷೆ ಮಾಡುವುದಿಲ್ಲ. ಹಾಗಿದ್ದು ಮಕ್ಕಳು ಕೆಲವೊಮ್ಮೆ ಗಿಫ್ಟ್ ನೀಡಿದಾಗ ಪೋಷಕರ ಖುಷಿಗೆ ಸಾಟಿ ಯಾವುದು ಇರುವುದಿಲ್ಲ. ಮಕ್ಕಳನ್ನು ಬೆಳೆದು ದೊಡ್ಡವರಾಗಿಸಿದ ಸಾರ್ಥಕತೆಯ ಭಾವ ಅವರ ಮೊಗದಲ್ಲಿ ಕಾಣಿಸುವುದು.
ಅಜ್ಜಿಯ 90ನೇ ಬರ್ತ್‌ಡೇಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟ ವಿಶೇಷ ಅತಿಥಿ.. ಭಾವುಕರಾದ ಹಿರಿಯಜ್ಜಿ