ಪೆಟ್ರೋಲ್ ಪಂಪ್‌ನಲ್ಲಿ ಏರ್ ಮಾತ್ರವಲ್ಲ ಗ್ರಾಹಕರಿಗೆ ಸಿಗಲಿದೆ ಈ 6 ಸೇವೆಗಳು ಉಚಿತ!

ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳಲು ಪೆಟ್ರೋಲ್ ಪಂಪ್‌ಗೆ ತೆರಳಿದರೆ ಇಲ್ಲಿ ಗ್ರಾಹಕರಿಗೆ ಕೆಲ ಸೇವೆಗಳು ಉಚಿತವಾಗಿ ಸಿಗುತ್ತದೆ. ಬಹುತೇಕರಿಗೆ ವಾಹನದ ಚಕ್ರಗಳಿಗೆ ಗಾಳಿ ಉಚಿತ ಅನ್ನೋದು ತಿಳಿದಿದೆ.ಇದರ ಜೊತೆಗೆ 6 ಸೇವೆಗಳು ಉಚಿತವಾಗಿ ಸಿಗಲಿದೆ.

Washroom to air filler Petrol pump offers six free service in India ckm

ಪೆಟ್ರೋಲ್ ಪಂಪ್‌ನತ್ತ ಪ್ರತಿ ದಿನ ಬಹುತೇಕರು ಚಿತ್ತ ನೆಟ್ಟಿರುತ್ತಾರೆ. ಕಾರಣ ಪೆಟ್ರೋಲ್ ಡೀಸೆಲ್ ಬೆಲೆ ಮೇಲೆ ಇತರ ಬೆಲೆಗಳು ಅವಲಂಬಿತವಾಗಿರುತ್ತದೆ. ಇನ್ನು ವಾಹನ ಬಳಸುವವರು ದುಬಾರಿ ಬೆಲೆಗೆ ಅಸಧಾನ, ಆಕ್ರೋಶಗೊಂಡರೂ ಪೆಟ್ರೋಲ್ ಅಥವಾ ಡೀಸಲ್ ತುಂಬಿಸಿಕೊಳ್ಳಲೇಬೇಕು. ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಪಂಪ್‌ಗೆ ತೆರಳುವ ಗ್ರಾಹಕರಿಗೆ ಕೆಲ ಸೇವೆಗಳು ಉಚಿತವಾಗಿ ಸಿಗಲಿದೆ.  ಹಲವರಿಗೆ ಯಾವೆಲ್ಲಾ ಸೇವೆಗಳು ಗ್ರಾಹಕರಿಗೆ ಪೆಟ್ರೋಲ್ ಪಂಪ್‌ನಲ್ಲಿ ಉಚಿತವಾಗಿ ಸಿಗಲಿದೆ ಅನ್ನೋದು ಸರಿಯಾಗಿ ತಿಳಿದಿಲ್ಲ. ಹೀಗೆ ಪೆಟ್ರೋಲ್ ಪಂಪ್‌ನಲ್ಲಿ ಲಭ್ಯವಿರುವ ಉಚಿತ ಸೇವೆಗಳ ವಿವರ ಇಲ್ಲಿದೆ.

1 ವಾಹನದ ಚಕ್ರಗಳಿಗೆ ಗಾಳಿ ತುಂಬಿಸಿಕೊಳ್ಳುವುದು ಉಚಿತ
ಪೆಟ್ರೋಲ್ ಪಂಪ್‌ನಲ್ಲಿ ಗ್ರಾಹಕರಿಗೆ ತಮ್ಮ ತಮ್ಮ ವಾಹನಗಳ ಚಕ್ರಗಳಿಗೆ ಗಾಳಿ ತುಂಬಿಸಿಕೊಳ್ಳುವುದು ಉಚಿತವಾಗಿದೆ. ಪ್ರತಿ ಪೆಟ್ರೋಲ್ ಪಂಪ್‌ನಲ್ಲಿ ಏರ್ ಫಿಲ್ಲರ್ ಇರುವುದು ಕಡ್ಡಾಯವಾಗಿದೆ. ಜೊತೆಗೆ ಗ್ರಾಹಕರಿಗೆ ಏರ್ ಪಿಲ್ಲರ್ ಸೇವೆಯನ್ನು ಕಡ್ಜಾಯವಾಗಿ ನೀಡಲೇಬೇಕು. ಹಲವು ಪೆಟ್ರೋಲ್ ಪಂಪ್‌ನಲ್ಲಿ ಗಾಳಿ ತುಂಬಿಸಲು ಓರ್ವ ಸಿಬ್ಬಂದಿಯನ್ನು ನಿಲ್ಲಿಸಿರುತ್ತಾರೆ.

ಪೆಟ್ರೋಲ್ ಡೀಸೆಲ್ ಹಾಕುವಾಗ 0 ಮಾತ್ರವಲ್ಲ, ಇದನ್ನೂ ಗಮನಿಸಿ, ಮೋಸ ಹೋಗುವುದು ತಪ್ಪಿಸಿ!

2 ಶೌಚಾಲಯ ಸೌಲಭ್ಯ ಉಚಿತ
ಪೆಟ್ರೋಲ್ ಪಂಪ್‌ನಲ್ಲಿ ಗ್ರಾಹಕರಿಗೆ ಶೌಚಾಲಯದ ಸೌಲಭ್ಯವೂ ಇದೆ. ಇದು ಕೂಡ ಉಚಿತವಾಗಿದೆ. ಯಾವುದೇ ಗ್ರಾಹಕರು ಪೆಟ್ರೋಲ್ ಪಂಪ್‌ನಲ್ಲಿರುವ ಶೌಚಾಲಯವನ್ನು ಉಚಿತವಾಗಿ ಬಳಸಿಕೊಳ್ಳಬಹುದು. 

3 ಪ್ರಥಮ ಚಿಕಿತ್ಸೆ ಸೌಲಭ್ಯ ಉಚಿತ
ಪೆಟ್ರೋಲ್ ಪಂಪ್‌ನಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿಕ್ಸೆ ಬಾಕ್ಸ್ ಕಡ್ಡಾಯವಾಗಿ ಇರಲೇಬೇಕು. ಫಸ್ಟ್ ಏಡ್ ಬಾಕ್ಸ್‌ನಲ್ಲಿ ಬ್ಯಾಂಡೇಜ್,ಕೆಲ ಔಷಧಿಗಳು ಸೇರಿದಂತೆ ತುರ್ತು ಚಿಕಿತ್ಸೆಯ ಔಷಧಿಗಳು ಇರಲಿದೆ. ಪೆಟ್ರೋಲ್ ಪಂಪ್ ಮಾಲೀಕರು, ಅಥವಾ ಸಿಬ್ಬಂದಿ ಈ ಫಸ್ಟ್ ಏಡ್ ಬಾಕ್ಸ್ ಅವಧಿ ಮೀರದಂತೆ ಬದಲಾಯಿಸುತ್ತಿರಬೇಕು. ಈ ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ಗ್ರಾಹಕರು ಉಚಿತವಾಗಿ ಬಳಸಬಹುದು.

4 ತುರ್ತು ಕರೆ ಸೌಲಭ್ಯ
ಗ್ರಾಹಕರು ಪೆಟ್ರೋಲ್ ಪಂಪ್‌ನಲ್ಲಿ ತುರ್ತು ಕರೆಯನ್ನು ಮಾಡಲು ಸಾಧ್ಯವಿದೆ. ಇದು ಕೂಡ ಉಚಿತವಾಗಿದೆ. ಗ್ರಾಹಕರ ಫೋನ್ ಸ್ವಿಚ್ ಆಫ್, ಅಥವಾ ನೆಟವರ್ಕ್ ಸಮಸ್ಯೆಗಳಿಂದ ಕೂಡಿದ್ದರೆ, ಇದೇ ವೇಳೆ ತೀವ್ರ ಅಗತ್ಯದ ತುರ್ತು ಕರೆ ಮಾಡಬೇಕಿದ್ದಲ್ಲಿ ಉಚಿತವಾಗಿ ಈ ಸೇವೆ ಬಳಸಬಹುದು. 

5 ಅಗ್ನಿಶಾಮಕ ಸೌಲಭ್ಯ
ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿಶಾಮಕ ಸೌಲಭ್ಯಗಳು ಕಡ್ಡಾಯವಾಗಿ ಇರಲೇಬೇಕು. ಗ್ರಾಹಕರು ತುರ್ತು ಸಂದರ್ಭದಲ್ಲಿ ಈ ಅಗ್ನಿಶಾಮಕ ಸೇವೆಯನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಕಾರಿನ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡರೆ, ಅಥವಾ ಇನ್ಯಾವುದೇ ರೀತಿಯಲ್ಲಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡರೆ ಗ್ರಾಹಕರು ಉಚಿತವಾಗಿ ಈ ಅಗ್ನಿಶಾಮಕ ಸೇವೆ ಬಳಸಿಕೊಳ್ಳಬಹುದು.

6 ಕುಡಿಯು ನೀರಿನ ವ್ಯವಸ್ಥೆ
ಪೆಟ್ರೋಲ್ ಪಂಪ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಹಕರು ಈ ಸೇವೆಯನ್ನು ಉಚಿತವಾಗಿ ಬಳಸಿಕೊಳ್ಳಹುದು. ಪೆಟ್ರೋಲ್ ಪಂಪ್ ಕುಡಿಯಲು ಯೋಗ್ಯವಾದ ಶುಚಿಯಾದ ನೀರನ್ನೇ ನೀಡಬೇಕು. 

ಕೆಲ ಪೆಟ್ರೋಲ್ ಪಂಪ್‌ಗಳಲ್ಲಿ ಚಕ್ರಗಳಿಗೆ ಗಾಳಿ ಹಾಕುವ ಮಶಿನ್ ಸರಿಯಾಗಿರುವುದಿಲ್ಲ. ಅಥವಾ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ದೂರು ನೀಡಲು ಅವಕಾಶವಿದೆ. ಕೆಲ ಸೇವೆಗಳನ್ನು ಪೆಟ್ರೋಲ್ ಪಂಪ್ ಕಡ್ಡಾಯವಾಗಿ ಹಾಗೂ ಉಚಿತವಾಗಿ ನೀಡಬೇಕು ಅನ್ನೋದು ನಿಯಮ. 

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.92 ರೂಪಾಯಿ. ಇನ್ನು ಡೀಸೆಲ್ ದರ ಪ್ರತಿ ಲೀಟರ್‌ಗೆ 88.99 ರೂಪಾಯಿ. ಇಂಧನ ದರ ಕಳೆದ ಕೆಲ ದಿನಗಳಿಂದ ಸ್ಥಿರವಾಗಿದೆ. ಆದರೆ ದುಬಾರಿಯಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.ಪೆಟ್ರೋಲ್ ದರ 100 ರೂಪಾಯಿಂದ ಕೆಳಗಿಳಿಯುವ ಸಾಧ್ಯತೆಯೂ ಇಲ್ಲ. 
 

Latest Videos
Follow Us:
Download App:
  • android
  • ios