ಪೆಟ್ರೋಲ್ ಡೀಸೆಲ್ ಹಾಕುವಾಗ 0 ಮಾತ್ರವಲ್ಲ, ಇದನ್ನೂ ಗಮನಿಸಿ, ಮೋಸ ಹೋಗುವುದು ತಪ್ಪಿಸಿ!
ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕುವಾಗ ಮೀಟರ್ ಬೋರ್ಡ್‌ನಲ್ಲಿ 0(ಶೂನ್ಯ) ಗಮನಿಸುತ್ತೇವೆ. ಆದರೆ ಇಷ್ಟು ಮಾತ್ರ ಗಮನಿಸಿದರೆ ಮೋಸ ಹೋಗುವುದಿಲ್ಲ ಎನ್ನಲು ಸಾಧ್ಯವಿಲ್ಲ. ಶೂನ್ಯದ ಜೊತೆಗೆ ಇದನ್ನೂ ಗಮನಿಸಿದರೆ ಉತ್ತಮ
ಪೆಟ್ರೋಲ್ ಪಂಪ್‌ಗಳಲ್ಲಿ ಮೋಸ ಮಾಡುತ್ತಾರೆ ಅನ್ನೋ ಆರೋಪ, ಕೆಲೆವೆಡ ರಂಪಾಟ, ಜಗಳಗಳೇ ನಡೆದಿದೆ. ಇಂಧನ ತುಂಬಿಸುವಾಗ ಮೋಸ ಹೋಗದಂತೆ ತಡೆಯಲು ಇದೀಗ ಬಹುತೇಕರು ಪೆಟ್ರೋಲ್ ಮೀಟರ್ ಬೋರ್ಡ್ ನೋಡಿ ಶೂನ್ಯವಾಗಿದೆಯಾ ಅನ್ನೋದು ಖಚಿತಪಡಿಸಿಕೊಳ್ಳುತ್ತಾರೆ. ಆದರೆ ಕೇವಲ 0 ಇದೆ ಎಂದು ನಿಶ್ಚಿಂತೆಯಿಂದ ಇರಲು ಸಾಧ್ಯವಿಲ್ಲ. ಕಾರಣ ಬೇರೊಂದು ಮಾರ್ಗದಲ್ಲೂ ಮೋಸ ಮಾಡುವ ಸಾಧ್ಯತೆಗಳಿದೆ. ಹೀಗಾಗಿ ಶೂನ್ಯ ಮಾತ್ರವಲ್ಲ, ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಮೀಟರ್ ಬೋರ್ಡ್‌ನಲ್ಲಿರುವ ಬೆಲೆ ಜಂಪ್ ಆಗುತ್ತಿರುವ ಹಾಗೂ ಲೀಟರ್ ಕುರಿತು ಗಮನ ಇಡಬೇಕು.
ಪೆಟ್ರೋಲ್ ತುಂಬಿಸಿಕೊಳ್ಳಲು ಹೋದಾಗ ಸಿಬ್ಬಂದಿಗಳು ಝಿರೋ ನೋಡಿ ಎಂದು ಸೂಚಿಸುತ್ತಾರೆ. ಮೀಟರ್ ಬೋರ್ಡ್‌ನತ್ತ 0 ಇದೆಯಾ ಎಂದು ಪರಿಶೀಲಿಸಿದ ಬಳಿಕ ಮೀಟರ್ ಬೋರ್ಡ್ ನೋಡುವ ಅಭ್ಯಾಸ ಹೆಚ್ಚಿನವರಿಗೆ ಇಲ್ಲ. ಸಿಬ್ಬಂದಿಗಳ ಮೇಲೆ ವಿಶ್ವಾಸವಿಟ್ಟು ಬಹುತೇಕರು ಪೆಟ್ರೋಲ್ ತುಂಬಿಸಿಕೊಂಡು ಮುಂದೆ ಸಾಗುತ್ತಾರೆ. ಆದರೆ 0 ಬಳಿಕವೂ ಕೆಲ ಮೋಸಗಳು ನಡೆಯುತ್ತದೆ ಎಂದು ವರದಿಗಳು ಹೇಳುತ್ತಿದೆ.
ಜನಸಾಮಾನ್ಯರಿಗೆ ಗುಡ್ ನ್ಯೂಸ್, ಪೆಟ್ರೋಲ್ ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆ!
ಒಂದು ಸಣ್ಣ ನಿರ್ಲಕ್ಷ್ಯ ಅಥವಾ ಅಭ್ಯಾಸದಿಂದ ಇಂಧನ ತುಂಬಿಸಿಕೊಳ್ಳುವಾಗ ಮೋಸ ಹೋಗುವ ಸಾಧ್ಯತೆ ಹೆಚ್ಚು. ಉದಾಹರಣೆಗೆ 100 ರೂಪಾಯಿ ಮೌಲ್ಯದ ಪೆಟ್ರೋಲ್ ತುಂಬಿಸುವಾಗ ಬೆಲೆಯ ಮೀಟರ್‌ನಲ್ಲಿ 1,2,3,4 ಎಂದು ನಂಬರ್ ಜಂಪ್ ಆಗುತ್ತಿದೆಯಾ ಅನ್ನೋದು ಪರಶೀಲಿಸಬೇಕು. ವೇಗವಾಗಿ ಪೆಟ್ರೋಲ್ ಹಾಕುವಾಗ ನಂಬರ್ ಜಂಪ್ ಆಗಲಿದೆ. ಆದರೆ ಈ ಜಂಪಿಂಗ್ ನಂಬರ್ 1,5,10,15 ಈ ರೀತಿ ಜಂಪ್ ಆಗುತ್ತಿದ್ದರೆ ಮೋಸ ಹೋಗುವ ಸಾಧ್ಯತೆ ಇದೆ. ಹಲವು ಸಿಬ್ಬಂದಿಗಳು ಸ್ಪೀಡ್ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಈ ಸ್ಪೀಡ್ 1,2,3,4 ನಂಬರ್ ಈ ರೀತಿಯೇ ಜಂಪ್ ಆಗಬೇಕು.
ಇಷ್ಟು ಮಾತ್ರವಲ್ಲ, ಬೆಲೆಯ ನಂಬರ್ ಜಂಪ್ ಆಗುತ್ತಿದ್ದಂತೆ ಇತ್ತ ಲೀಟರ್ ಕೂಡ ದಾಖಲಾಗಲಿದೆ. ಇದನ್ನೂ ಗಮನಿಸಬೇಕು. ಸರಿಯಾದ ಪ್ರಮಾಣದಲ್ಲಿ ಲೀಟರ್ ನಂಬರ್ ದಾಖಲಾಗುತ್ತಿದೆಯಾ ಅನ್ನೋದು ಪರಿಶೀಲಿಸಬೇಕು. ಸಾಮಾನ್ಯವಲ್ಲದ ಅಥವಾ ವ್ಯತ್ಯಾಸಗಳಿದ್ದರೆ ಈ ಕುರಿತು ಪರಿಶೀಲಿಸುವುದು ಅತೀ ಮುಖ್ಯ. ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿರುವ ಕಾರಣ ಒಂದು ಹನಿ ಇಂಧನ ಅತೀ ಮುಖ್ಯ. ಹೀಗಾಗಿ ಪರಿಶೀಲನೆ ಅತ್ಯಗತ್ಯ.
ಒಂದು ವೇಳೆ ನಿಮಗೆ ಮೋಸ ಹೋಗುತ್ತಿದ್ದೀರಿ ಅಥವಾ ಮೋಸ ಮಾಡುತ್ತಿದ್ದಾರೆ ಅನುಮಾನ ಕಾಡಿದ್ದರೆ ತಕ್ಷಣವೇ ಟೋಲ್ ಫ್ರೀ ನಂಬರ್ 1800-22-4344 ಕರೆ ಮಾಡಿ ದೂರು ದಾಖಲಿಸಬಹುದು. ಇನ್ನು ಹೆಚ್‌ಪಿ ಪೆಟ್ರೋಲ್ ಪಂಪ್ ಕುರಿತು ದೂರು ಸಲ್ಲಿಸಲು 1800-2333-555, ಇಂಡಿಯನ್ ಆಯಿಲ್ ಕುರಿತು ದೂರು ಸಲ್ಲಿಸಲು 1800 2333 555 ಈ ನಂಬರ್‌ಗೆ ಕರೆ ಮಾಡಬಹುದು.
ರಾತ್ರೋರಾತ್ರಿ ಕಾರಿಗೆ ಬೆಂಕಿ: ಸಿಸಿಟಿವಿಯಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ!