ಉತ್ತರಾಖಂಡ್ ಯುದ್ಧ ಸ್ಮಾರಕಕ್ಕೆ ಬೇಕಿದೆ ಸಹೃದಯಿಗಳ ಕೊಡುಗೆ!
* ಭಾರತದ ಭೂಭಾಗ ಆಕ್ರಮಿಸಿಕೊಂಡು ಉದ್ಧಟತನ ಮೆರೆದಿದ್ದ ಪಾಕಿಸ್ತಾನಕ್ಕೆ ಪಾಠ
* ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸ ಆಚರಣೆ
* ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧ
ಡೆಹ್ರಾಡೂನ್(ಜು.26): ಭಾರತದ ಭೂಭಾಗ ಆಕ್ರಮಿಸಿಕೊಂಡು ಉದ್ಧಟತನ ಮೆರೆದಿದ್ದ ಪಾಕಿಸ್ತಾನಕ್ಕೆ ಪಾಠ ಕಲಿಸಿ ಇಂದಿಗೆ 22 ವರ್ಷ. ಹೀಗಿರುವಾಗ ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಈ ಯುದ್ಧದಲ್ಲಿ ಉತ್ತರಾಖಂಡ್‌ನ ಸುಮಾರು 75 ಯೋಧರು ಹುತಾತ್ಮರಾಗಿದ್ದರು. ಈ ಯೋಧರ ಸ್ಮರಣಾರ್ಥ ಡೆಹ್ರಾಡೂನ್‌ನಲ್ಲಿ 'ಶೌರ್ಯ ಸ್ಥಳ' ಹೆಸರಿನ ಯುದ್ಧ ಸ್ಮಾರಕ ನಿರ್ಮಾಣವಾಗುತ್ತಿದ್ದು, ಇದಕ್ಕೆ ಸಹೃದಯಿಗಳ ನೆರವು ಬೇಕಾಗಿದೆ.
ಈ ಸಂಬಂಧ ವಿಡಿಯೋ ಒಂದು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಮಾರಕದ ಬಗ್ಗೆ ಮಾತನಾಡುತ್ತಾ ಕಾರ್ಗಿಲ್ ಯುದ್ಧದ ಮಹಾನ್ ಶೂರ ವೀರರು ಭಾರತದ ರಕ್ಷಣೆಯ ಸ್ವರ್ಣ ಅಧ್ಯಾಯ ತಮ್ಮ ಶೌರ್ಯ, ಪರಾಕ್ರಮ ಹಾಗೂ ಬಲಿದಾನದಿಂದ ಬರೆದಿದ್ದಾರೆ. ಕಠಿಣ ಹಾಗೂ ಅನಾನುಕೂಲ ಪರಸ್ಥಿತಿಗಳ ನಡುವೆಯೂ ಭಾರತೀಯ ಸೇನೆ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿತು, ಇದು ವಿಶೇಷವೂ ಆಗಿದೆ. ನಾನು ಕಾರ್ಗಿಲ್‌ನಲ್ಲಿ ಹುತಾತ್ಮರಾದ ಎಲ್ಲಾ ವೀರ ಸೈನಿಕರ ಕುಟುಂಬದವರಿಗೆ ಈ ದೇಶ ಬಲಿದಾನವನ್ನು ಯಾವತ್ತೂ ಮರೆಯುವುದಿಲ್ಲ ಎಂಬ ಭರವಸೆ ಕೊಡುತ್ತೇನೆ. ನಮ್ಮ ಹುತಾತ್ಮ ಯೋಧರ ಸ್ಮರಣಾರ್ಥ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಿರ್ಮಾಣವಾಗುತ್ತಿರುವ ಯುದ್ಧ ಸ್ಮಾರಕ ನಮ್ಮ ವೀರ ಯೋಧರಿಗೆ ದೇಶ ಸಲ್ಲಿಸುತ್ತಿರುವ ಕೃತಜ್ಞತೆಯ ಸಂಕೇತವಾಗಿದೆ. ಈ ಸ್ಮಾರಕದ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡುವ ಪ್ರತಿಯೊಬ್ಬ ವ್ಯಕ್ತಿಗೂ ಅಭಾರಿಯಾಗಿದ್ದೇವೆ. ವೀರ ಸೈನಿಕರ ಬಲಿದಾನವನ್ನೂ ಯಾವತ್ತೂ ನೆನಪಿಸಿಕೊಳ್ಳುತ್ತೇವೆ. ಇದು ನಮ್ಮ ಯುವಕರಿಗೆ ದೇಶಕ್ಕಾಗಿ ತಮ್ಮದೆಲ್ಲವನ್ನೂ ಸಮರ್ಪಿಸಲು ಪ್ರೇರಣೆಯಾಗಲಿ ಎಂದಿದ್ದಾರೆ.
"
ಈ ಸ್ಮಾರಕಕ್ಕೆ ನಿರ್ಮಾಣಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ #WarMemorial4UK ಹ್ಯಾಷ್ ಟ್ಯಾಗ್‌ನಡಿ ಅಭಿಯಾನ ಆರಂಭವಾಗಿದ್ದು, ಇದರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಲಾಗುತ್ತಿದೆ. ವೀರ ಯೋಧರ ಬಲಿದಾನ ಸ್ಮರಿಸಿ ನಿರ್ಮಿಸಲಾಗುತ್ತಿರುವ ಈ ಸ್ಮಾರಕಕ್ಕೆ ನೀವೂ ಕೊಡುಗೆ ನೀಡಲು ಬಯಸುವುದಾದರೆ ಈ ಕೆಳಗಿನ ವಿವರಗಳನ್ನು ಬಳಸಿ ಆರ್ಥಿಕ ಸಹಾಯ ಮಾಡಬಹುದಾಗಿದೆ.
ಬ್ಯಾಂಕ್: State Bank Of India
IFSC Code: SBIN0060432
Account Number: 38355787478
Paytm Number: 9289146888