.
ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಜಮಾತ್-ಇ-ಇಸ್ಲಾಮಿ ಹಿಂದ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಈ ಮಸೂದೆಯು ವಕ್ಫ್ ಆಸ್ತಿಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಶುಕ್ರವಾರ (ಫೆಬ್ರವರಿ 7, 2025)ದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾತೆ-ಇ-ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಸಲೀಂ, ಈ ಮಸೂದೆಯನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಮಂಡಳಿ ಮತ್ತು ಅದರ ಆಸ್ತಿಗಳನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ದೇಶದ ಮುಸ್ಲಿಮರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ಮಸೂದೆಯನ್ನು ಈಗಿನ ರೂಪದಲ್ಲಿ ಅಂಗೀಕರಿಸಿದರೆ ಅದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ. ಅಲ್ಲದೇ ಈ ಮಸೂದೆ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ, ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಗಳಿಂದಲೇ ವಕ್ಫ್ ಆಸ್ತಿ ಅತಿಕ್ರಮಣ: ಆರೋಪ
ಜನರ ಭೂಮಿ ವಕ್ಫ್ ಬೋರ್ಡ್ ಕಿತ್ತುಕೊಳ್ಳತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ವಾಸ್ತವದಲ್ಲಿ ರಾಜ್ಯ ಸರ್ಕಾರಗಳೇ ವಕ್ಫ್ ಆಸ್ತಿಗಳನ್ನು ಆಕ್ರಮಿಸಿಕೊಂಡಿದೆ ಎಂದು ಸಂಘಟನೆ ಆರೋಪಿಸಿದೆ. ಈ ಕಾರಣದಿಂದಾಗಿ, ಈ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಬೇಡಿ. ಅದನ್ನು ತಕ್ಷಣವೇ ಹಿಂಪಡೆಯುವಂತೆ ಜಮಾಅತೆ ಇಸ್ಲಾಮಿ ಹಿಂದ್ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನೂ ಓದಿ: ತಿದ್ದುಪಡಿ ಹೆಸರಲ್ಲಿ ವಕ್ಫ್ ಅಳಿಸಲು ಸಾಧ್ಯವಿಲ್ಲ, ಅಲ್ಲಾಹ್ ಉಳಿಸುತ್ತಾನೆ: ಫಾರೂಕ್ ಅಬ್ದುಲ್ ಹೇಳಿಕೆ ಸಂಚಲನ
ರೈತರ ಭೂ ಸುಧಾರಣಾ ಮಸೂದೆಯ ಸಮಯದಲ್ಲಿಯೂ ಕೇಂದ್ರ ಸರ್ಕಾರ ಅದೇ ತಪ್ಪನ್ನು ಮಾಡಿದೆ. ತೀವ್ರ ಪ್ರತಿಭಟನೆ ಬಳಿಕ ಮಸೂದೆ ಹಿಂಪಡೆಯಿತು. ಈಗಲೂ ಅದೇ ರೀತಿ ತಪ್ಪು ಮಾಡುತ್ತಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ, ಅವರು ದೇಶಾದ್ಯಂತ ಪ್ರತಿಭಟನೆ ನಡೆಸಿದರು ಮತ್ತು ಸರ್ಕಾರವು ಅಂತಿಮವಾಗಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕಾಯಿತು. ಇದೀಗ ವಕ್ಫ್ ಮಸೂದೆಯ ವಿಷಯವು ಇನ್ನೂ ಗಂಭೀರವಾಗಿದೆ ಏಕೆಂದರೆ ಅದರಲ್ಲಿ ಧಾರ್ಮಿಕ ಅಂಶವೂ ಸೇರಿದೆ. ಸರ್ಕಾರವು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಮಸೂದೆಯನ್ನು ಅಂಗೀಕರಿಸಿದರೆ, ಅದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಮತ್ತು ದೇಶಕ್ಕೆ ಒಳ್ಳೆಯದಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸಲೀಂ ಎಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಕ್ಫ್ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್ಸ್ಟ್ರೋಕ್? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು
ವಕ್ಫ್ ಮಸೂದೆಯ ಬಗ್ಗೆ ವಿ ವಾದ
ವಕ್ಫ್ ಮಂಡಳಿಯಲ್ಲಿ ಸುಧಾರಣೆ ತರಬೇಕೆಂಬ ಸರ್ಕಾರದ ಹೇಳಿಕೆಯನ್ನು ತಿರಸ್ಕರಿಸಿದ ಸಲೀಂ ಎಂಜಿನಿಯರ್, ಪೌರತ್ವ ಕಾಯ್ದೆ ( ಸಿಎಎ ) ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಸಹ ವಿರೋಧಿಸಿದ್ದೆ ಎಂದು ಹೇಳಿದರು. ಅದೇ ರೀತಿ, ವಕ್ಫ್ ತಿದ್ದುಪಡಿ ಮಸೂದೆಯೂ ಅಂಗೀಕಾರವಾದರೆ, ಸಂಘಟನೆಯು ಕಾನೂನು ಚೌಕಟ್ಟಿನೊಳಗೆ ಇದ್ದುಕೊಂಡು ಸಾಧ್ಯವಿರುವ ಎಲ್ಲ ರೀತಿಯಲ್ಲಿ ವಿರೋಧಿಸುತ್ತದೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
