Asianet Suvarna News Asianet Suvarna News

ಅಫ್ಜಲ್‌ ಖಾನ್‌ನ ವಧೆ ಮಾಡಲು ಬಳಸಿದ್ದ ಶಿವಾಜಿಯ ವ್ಯಾಘ್ರನಖ ಶೀಘ್ರದಲ್ಲೇ ಭಾರತಕ್ಕೆ ವಾಪಾಸ್‌

Maratha Warrior Shivaji Wagh Nakh To Come Home:ಭಾರತೀಯ ಇತಿಹಾಸದಲ್ಲಿ ಹಾಗೂ ಮರಾಠರ ಇತಿಹಾಸದಲ್ಲಿ ಬಹಳ ಪ್ರಮುಖವಾಗಿದ್ದ ಈ ವಸ್ತು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಅವರು ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದು ಈ ವೇಳೆ ಭಾರತ-ಇಂಗ್ಲೆಂಡ್‌ ನಡುವೆ ಒಪ್ಪಂದವಾಗಲಿದೆ.
 

Wagh Nakh Used by King Shivaji To Kill Afzal Khan To Return Home From UK san
Author
First Published Sep 8, 2023, 7:16 PM IST

ನವದೆಹಲಿ (ಸೆ.8): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಬ್ರಿಟನ್‌ ದೇಶ, ಭಾರತ ಹಾಗೂ ಮರಾಠರ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿರುವ ಹಾಗೂ ಐತಿಹಾಸಿಕ ಆಯುಧ ಎನಿಸಿಕೊಂಡಿರುವ ವ್ಯಾಘ್ರನಖವನ್ನು ಭಾರತಕ್ಕೆ ನೀಡಲು ಒಪ್ಪಿದೆ. ಡ್ಯಾಗರ್‌ ಮಾದರಿಯ ಈ ಆಯುಧ ಹುಲಿಯ ಪಂಜದ ರೀತಿ ಇದ್ದು, ಇದರ ಸಹಾಯದಿಂದಲೇ ಛತ್ರಪತಿ ಶಿವಾಜಿ ಮಹಾರಾಜರು 1659ರಲ್ಲಿ ಬಿಜಾಪುರ ಸುಲ್ತಾನರ ಜನರಲ್‌ ಆಗಿದ್ದ ಅಫ್ಜಲ್‌ ಖಾನ್‌ನ ವಧೆ ಮಾಡಿದ್ದರು. ಭಾರತದಲ್ಲಿ ಹಿಂದೂಗಳ ಅಳಿವು ಉಳಿವಿನ ಪ್ರಶ್ನೆ ಇದ್ದಾಗ ಸೂರ್ಯಂತೆ ಕಂಡಿದ್ದ ಶಿವಾಜಿ ಮಹಾರಾಜರ ಜೀವನದಲ್ಲಿ ಈ ಆಯುಧಕ್ಕೆ ಮಹತ್ವವಾದ ಗೌರವವಿತ್ತು. ಇಲ್ಲಿಯವರೆಗೂ ಈ ಆಯುಧ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.  ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಅವರು ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದು, ಭಾರತ ಹಾಗೂ ಬ್ರಿಟನ್‌ ನಡುವೆ ನಡೆಯುವ ಒಪ್ಪಂದದ ಬಳಿಕ ಈ ವ್ಯಾಘ್ರನಖವನ್ನು ಭಾರತಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.

ಈಗಾಗಲೇ ವ್ಯಾಘ್ರನಖ ಭಾರತಕ್ಕೆ ಬರುವ ಬಗ್ಗೆ ಅಪಾರ ಪ್ರಮಾಣದ ನಿರೀಕ್ಷೆ ವ್ಯಕ್ತವಾಗಿದೆ. ಎಲ್ಲವೂ ಯೋಜನೆಗಳ ಪ್ರಕಾರ ನಡೆದಲ್ಲಿ, ಈ ವರ್ಷದ ಅಂತ್ಯದ ವೇಳೆಗೆ ಶಿವಾಜಿಯ ವ್ಯಾಘ್ರನಖ ತನ್ನ ಮೂಲಸ್ಥಳಗ್ಗೆ ಬರಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸುಧೀರ್‌ ಮುಂಗಂಟಿವಾರ್‌, 'ಯುಕೆ ಅಧಿಕಾರಿಗಳಿಂದ ಛತ್ರಪತಿ ಶಿವಾಜಿ ಮಹಾರಾಜರ 'ವಾಘ್ ನಖ್' ಅನ್ನು ಹಿಂದಿರುಗಿಸಲು ನಾವು ಸಿದ್ಧರಿದ್ದೇವೆ ಎಂದು ನಾವು ಮಾಹಿತಿ ಪಡೆದುಕೊಂಡಿದ್ದೇವೆ. ಹಿಂದೂ ಕ್ಯಾಲೆಂಡರ್‌ನ ಆಧಾರದ ಮೇಲೆ ಶಿವಾಜಿ ಅಫ್ಜಲ್‌ಖಾನ್‌ನನ್ನು ಕೊಂದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದನ್ನು ಮರಳಿ ತರಲು ನಾವು ಪರಿಗಣಿಸುತ್ತಿದ್ದೇವೆ. ನಾವು ಪರ್ಯಾಯ ದಿನಾಂಕಗಳನ್ನು ಕೂಡ ಹುಡುಕುತ್ತಿದ್ದೇವೆ ಮತ್ತು 'ವಾಘ್ ನಖ್' ಅನ್ನು ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಈ ಐತಿಹಾಸಿಕ ಆಯುಧಕ್ಕೆ ಭಾರತದ ಇತಿಹಾಸದಲ್ಲಿ ಹಾಗೂ ಮಹಾರಾಷ್ಟ್ರದ ಇತಿಹಾಸದಲ್ಲಿ ಅನನ್ಯ ಮನ್ನಣೆ ಇದೆ. ಗ್ರಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ, ಬಿಜಾಪುರ ಸುಲ್ತಾನರ ಸೇನಾ ಜನರಲ್‌ ಆಗಿದ್ದ ಅಫ್ಜಲ್‌ ಖಾನ್‌ನನ್ನು ನವೆಂಬರ್‌ 10 ರಂದು ವ್ಯಾಘ್ರನಖ ಬಳಸಿ ಕೊಂದು ಹಾಕಿದ್ದ ಎನ್ನಲಾಗುತ್ತದೆ. ಆದರೆ, ಸರ್ಕಾರವು ಹಿಂದೂ ತಿಥಿ ಕ್ಯಾಲೆಂಡರ್‌ಗೆ ಅನುಗುಣವಾಗಿ ವ್ಯಾಘ್ರನಖವನ್ನು ಭಾರತಕ್ಕೆ ತರಲು ದಿನಾಂಕವನ್ನು ನಿರ್ಧಾರ ಮಾಡುತ್ತಿದೆ.

ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖ ಕೇವಲ ಒಂದು ಆಯುಧವಲ್ಲ. ಇದು ಅಮೂಲ್ಯವಾದ ಐತಿಹಾಸಿಕ ಸಂಪತ್ತು. ಇದು ಇಡೀ ದೇಶದ ಹಾಗೂ ರಾಜ್ಯದ ಜನರ ಭಾವನೆಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿದೆ. ವ್ಯಾಘ್ರನಖವನ್ನು ತರುವ ಕಾರ್ಯವನ್ನು ಶೀಘ್ರವಾಗಿ ಮಾಡಬೇಕಿದೆ. ಅದಕ್ಕಾಗಿ ನಾನು ವೈಯಕ್ತಿಕವಾಗಿ ಜವಾಬ್ದಾರಿ ಹೊತ್ತಿದ್ದೇನೆ ಎಂದು ಸುಧೀರ್‌ ಮುಂಗಂಟಿವಾರ್‌ ಹೇಳಿದ್ದಾರೆ.

ಇದರ ನಿಟ್ಟಿನಲ್ಲಿ ಕೆಲಸ ಮಾಡಲು ಮುಂಗಂಟಿವಾರ್‌ ನೇತೃತ್ವದಲ್ಲಿ ಡಾ ವಿಕಾಸ್ ಖರ್ಗೆ (ಸಂಸ್ಕೃತಿ ಪ್ರಧಾನ ಕಾರ್ಯದರ್ಶಿ), ಮತ್ತು ಡಾ. ತೇಜಸ್ ಗಾರ್ಗೆ (ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯದ ನಿರ್ದೇಶಕ) ಅವರನ್ನು ಒಳಗೊಂಡ ತಂಡವು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಮತ್ತು ಲಂಡನ್‌ನಲ್ಲಿರುವ ಇತರ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಲಿದೆ. ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಸರ್ಕಾರದ ನಿರ್ಣಯವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ಈ ಆರು ದಿನಗಳ ಭೇಟಿಗಾಗಿ ಅಂದಾಜು 50 ಲಕ್ಷ ರೂಪಾಯಿಗಳ ಅಂದಾಜು ವೆಚ್ಚವನ್ನು ಇರಿಸಿದೆ.

ಶಾರುಖ್‌ ಖಾನ್‌ ಕೂಡ ತಿರುಪತಿಗೆ ಹೋಗ್ಬಹುದು ಇದು ನಮ್ಮ ಸನಾತನ ಎಂದ ಅಣ್ಣಾಮಲೈ!

ವ್ಯಾಘ್ರನಖ ಅಥವಾ 'ವಾಘ್ ನಖ್' ಇತಿಹಾಸದ ಒಂದು ಗಮನಾರ್ಹ ವಸ್ತವಾಗಿದೆ. ಇದನ್ನು ಶುದ್ಧ ಉಕ್ಕಿನಿಂದ ನಿರ್ಮಾಣ ಮಾಡಲಾಗಿದ್ದು, ಮೊದಲನೇ ಮತ್ತು ನಾಲ್ಕನೇ ಬೆರಳುಗಳಿಗೆ ಉಂಗುರದ ಆಕೃತಿಯನ್ನು ಹೊಂದಿದ್ದರೆ, ಉಳಿದ ಭಾಗಗಳಲ್ಲಿ ಹುಲಿಯ ಉಗುರಿನ ರೀತಿ ನಾಲ್ಕು ಉಗುರುಗಳನ್ನು ನಿರ್ಮಿಸಲಾಗಿದೆ. 

ಸ್ಟ್ಯಾಲಿನ್‌, ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಚೆನ್ನೈ ಪೊಲೀಸರಿಗೂ ಬಂತು ಕುತ್ತು!

Follow Us:
Download App:
  • android
  • ios