Asianet Suvarna News Asianet Suvarna News

Electoral reforms ವೋಟರ್‌ ಐಡಿ ಜತೆ ಆಧಾರ್‌ ಲಿಂಕ್, ಮಹತ್ವದ ಚುನಾವಣಾ ಸುಧಾರಣೆಗೆ ಕೇಂದ್ರ ಅಸ್ತು!

  • ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಸುಧಾರಣೆ 
  • ಕರಡು ಮಸೂದೆಗೆ  ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ
  • ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಸೇರಿ ಕೆಲ ಬದಲಾವಣೆ
     
Voter ID Aadhar linking to enrolment voters Union Cabinet approved some key electoral reforms ckm
Author
Bengaluru, First Published Dec 16, 2021, 4:21 AM IST

ನವದೆಹಲಿ(ಡಿ.16): ಚುನಾವಣಾ ಗುರುತಿನ ಚೀಟಿಯೊಂದಿಗೆ(Election Voter ID) ಆಧಾರ್‌ ಸಂಖ್ಯೆಯನ್ನು(Aadhar) ಸಂಯೋಜಿಸುವ ಮಹತ್ವದ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ವಿಷಯವೂ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಸುಧಾರಣೆ ತರುವ ಕರಡು ಮಸೂದೆಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ(Union Cabinet) ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆಧಾರ್‌ ಲಿಂಕ್‌:
ಮತದಾರರು(Voters) ಹಲವು ಕ್ಷೇತ್ರದಲ್ಲಿ ತಮ್ಮ ಹೆಸರು ನೋಂದಾಯಿಸುವುದನ್ನು ತಡೆಯಲು, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಆಧಾರ್‌ ಜೊತೆ ಜೋಡಿಸುವ(Linking) ಯೋಜನೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಇದು ಕಡ್ಡಾಯವಲ್ಲ. ಇದನ್ನು ಮತದಾರರು ಸ್ವಯಂಪ್ರೇರಣೆಯಿಂದ ಮಾತ್ರವೇ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ಪಾನ್‌ ಕಾರ್ಡ್‌ಗೆ ಆಧಾರ್‌ ಸಂಯೋಜನೆ ಕಡ್ಡಾಯ ಮಾಡಲಾಗಿತ್ತು. ಆದರೆ ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಕಡ್ಡಾಯಕ್ಕೆ ಭಾರೀ ವಿರೋಧವಿರುವ ಹಿನ್ನೆಲೆಯಲ್ಲಿ ಮತ್ತು ಇದು ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದನ್ನು ಐಚ್ಛಿಕ ಮಾಡಲಾಗಿದೆ.

Baal Aadhaar Card : ನಿಮ್ಮ ಮಗುವಿಗಿನ್ನೂ ಐದು ವರ್ಷ ತುಂಬಿಲ್ವಾ? ಆಧಾರ್ ಕಾರ್ಡ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ಈಗಾಗಲೇ ಚುನಾವಣಾ ಆಯೋಗವು(election commission of india) ಮತದಾರರ ಗುರುಚಿನ ಚೀಟಿಗೆ ಆಧಾರ್‌ ಸಂಯೋಜನೆಯನ್ನು ಪ್ರಾಯೋಗಿಕವಾಗಿ ಕೆಲವು ಕಡೆ ಜಾರಿ ಮಾಡಿತ್ತು. ಅದರಲ್ಲಿ ಧನಾತ್ಮಕ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ದೇಶವ್ಯಾಪಿ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆ ಇದೆ.

ನೋಂದಣಿಗೆ 4 ಅವಕಾಶ:
ಈವರೆಗೆ 18 ವರ್ಷ ತುಂಬಿದ ಹೊಸ ಮತದಾರರಿಗೆ ಹೆಸರು ನೋಂದಾಯಿಸಲು ವರ್ಷಕ್ಕೆ 1 ಬಾರಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೆ 4 ಬಾರಿ ನೀಡುವ ಪ್ರಸ್ತಾಪವಿದೆ.

Aadhaar Card : ಆಧಾರ್ ಕಾರ್ಡ್ ಹೊಂದಿರೋರು ಈ ತಪ್ಪು ಮಾಡಿ ಆಮೇಲೆ ಗೋಳಾಡಬೇಡಿ

ಲಿಂಗ ಸಮಾನತೆ:
ಇದುವರೆಗೆ ಯೋಧರೊಬ್ಬರ ಪತ್ನಿಗೆ ಸವೀರ್‍ಸ್‌ ವೋಟರ್‌ ಹೆಸರಲ್ಲಿ ನೋಂದಣಿಗೆ ಅವಕಾಶವಿತ್ತು. ಆದರೆ ಸೇನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರೆ ಆಕೆಯ ಪತಿಗೆ ಇದೇ ಅವಕಾಶ ಇರುತ್ತಿರಲಿಲ್ಲ. ಹೀಗಾಗಿ ಈ ನಿಯಮಕ್ಕೂ ಬದಲಾವಣೆ ತರಲು ಸಂಪುಟ ಅನುಮೋದನೆ ನೀಡಿದೆ.

ಹೆಚ್ಚಿನ ಅಧಿಕಾರ:
ಯಾವುದೇ ಕಟ್ಟಡಗಳನ್ನು ಚುನಾವಣಾ ಕೆಲಸಗಳಿಗೆ ಬಳಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವ ತಿದ್ದುಪಡಿ ಕೂಡ ಪ್ರಸ್ತಾವದಲ್ಲಿದೆ. ಈವರೆಗೆ ಶಾಲೆ ಹಾಗೂ ಕೆಲವು ಕಟ್ಟಡಗಳನ್ನು ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲು ಆಕ್ಷೇಪಗಳು ಕೇಳಿಬರುತ್ತಿದ್ದವು.

2019ರಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣೆಯಲ್ಲಿ ಮಹತ್ವದ ಬದಲಾವಣೆ ತರಲು ಪ್ರಸ್ತಾಪ ಮುಂದಿಟ್ಟಿತು. ಚುನಾವಣೆಯಲ್ಲಿನ ಅಕ್ರಮ ತಡೆಯಲು, ಸುಲಭ ಮತದಾನ, ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪಲು ಕೆಲ ಬದಲಾವಣೆಗೆ ಮುಂದಾಗಿತ್ತು. ಹಲವು ಚರ್ಚೆ ತಿದ್ದುಪಡಿಗಳ ಬಳಿಕ ಕರಡು ತಯಾರಿಸಲಾಗಿತ್ತು. ಇದರಲಲ್ಲಿ ಮತದಾನ ಚೀಟಿ ಜೊತೆಗೆ ಆಧಾರ್ ಜೋಡಣೆ ಕೂಡ ಸೇರಿದೆ. ಇದರಿಂದ ಹಲವು ಪ್ರದೇಶ ಹಾಗೂ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಯ ಹಲವು ದಾಖಲಾತಿಗೆ ಬ್ರೇಕ್ ಬೀಳಲಿದೆ. ಹಲವರು ತಾವು ಹುಟ್ಟಿ ಬೆಳೆದಲ್ಲಿನ ಮತಾನದ ಹಕ್ಕು ಪಡೆದಿರುತ್ತಾರೆ. ಇನ್ನು ಉದ್ಯೋಗ ಮಾಡುತ್ತಿರುವ ರಾಜ್ಯ ಅಥವಾ ಪ್ರದೇಶದಲ್ಲೂ ಮತದಾನದ ಹಕ್ಕು ಪಡೆದಿರುತ್ತಾರೆ. ಆಧಾರ್ ಜೋಡಣೆಯಿಂದ ಈ ಸಮಸ್ಯೆ ನಿವಾರಣೆಯಾಗಲಿದೆ. 

ತಿದ್ದುಪಡಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ 2020ರಲ್ಲೇ ಕೆಲಸ ಆರಂಭಿಸಿತ್ತು. ರವಿ ಶಂಕರ್ ಪ್ರಸಾದ್ ಸಚಿವರಾಗಿದ್ದ ವೇಳೆ ಪ್ರಯತ್ನಗಳು ಬಿರುಸಿನಿಂದ ಸಾಗಿತ್ತು. ಬಳಿಕ ಆಗಸ್ಟ್ ತಿಂಗಳಲ್ಲಿ ಕಿರಣ್ ರಿಜಿಜು ಸಚಿವರಾದ ಬಳಿಕ ಸಂಸತ್ತಿನಲ್ಲಿ ಈ ಕುರಿತು ಹೇಳಿಕೆ ನೀಡಿದ್ದರು. ಚುನಾವಣಾಯಲ್ಲಿನ ಮಹತ್ವದ ಬದಲಾವಣೆಗಳ ಬಿಲ್ ತರುವುದಾಗಿ  ಹೇಳಿದ್ದರು.
 

Follow Us:
Download App:
  • android
  • ios