ನವದೆಹಲಿ(ಮೇ.16): ಕೇಂದ್ರ ಸರ್ಕಾರದ ಕೋವಿಡ್ 19 ಜಿನೋಮ್ ಅಧ್ಯಯನ ಹಾಗೂ ನಿಗಾ ಯೋಜನೆಯ ಸದಸ್ಯ ಸ್ಥಾನಕ್ಕೆ ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ.

2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್‌ ಟ್ರಯಲ್‌: ಭಾರತದಲ್ಲೂ ಲಸಿಕೆ ಪ್ರಯೋಗ?

ವೈರಾಣು ವಂಶವಾಹಿ, ರೂಪಾಂತರಿ ವೈರಸ್ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಇಂಡಿಯನ್ SARS-CoV-2 ಜಿನೋಮಿಕ್ಸ್ ಒಕ್ಕೂಟ (INSACOG)ವನ್ನು ಕೇಂದ್ರ ಸರ್ಕಾರ ರಚಿಸಿತ್ತು. ಕಳೆದ ವರ್ಷ ಈ ಕೇಂದ್ರ ರಚಿಸಲಾಗಿತ್ತು.  ಈ ತಂಡದಲ್ಲಿ ವೈರಾಣು ತಜ್ಞ  ಶಾಹೀದ್ ಜಮೀಲ್ ಪ್ರಮುಖ ಸದಸ್ಯರಾಗಿದ್ದರು. 

ಮೂರನೇ ಕೊವಿಡ್‌ ಲಸಿಕೆಗೆ ದೇಶದಲ್ಲಿ ಅನುಮತಿ!.

ಕೊರೋನಾ ವೈರಸ್ ರೂಪಾಂತರಿ ವೈರಸ್ ಪತ್ತೆ ಹಚ್ಚುವ ಹಾಗೂ ಸಂಶೋಧಿಸುವ ಕಾರ್ಯವನ್ನು  ಕೋವಿಡ್ 19 ಜಿನೋಮ್ ಅಧ್ಯಯನ  ಕೇಂದ್ರ ನಡೆಸುತ್ತಿತ್ತು. ದೇಶಾದ್ಯಂತ 10 ಪ್ರಯೋಗಾಲಯಗಳಲ್ಲಿ ಈ ಅಧ್ಯನಯ ನಡೆಸಲಾಗುತ್ತಿತ್ತು. ಈ ತಂಡದಲ್ಲಿ ಜಮೀಲ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಆದರೆ ಇದೀಗ ದಿಢೀರ್ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ.

ಅಧ್ಯಯ ಕೇಂದ್ರದ ಸದಸ್ಯರು ಹಾಗೂ ಸರ್ಕಾರದ ಒತ್ತಡ ಕಾರಣದಿಂದ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ.  ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಡಾ.ಜಮೀಲ್ ಇತ್ತೀಚೆಗೆ ಸಾಂಕ್ರಾಮಿಕ ರೋಗ ಹಾಗೂ ಸರ್ಕಾರ ನಿರ್ವಹಿಸುವ ರೀತಿ ಕುರಿತು ಸಂವಾದವೊಂದರಲ್ಲಿ ಟೀಕಿಸಿದ್ದರು.

ಕೊರೋನಾ ವೈರಸ್ ಅಲೆ ಹಾಗೂ ಲಸಿಕೆ ಕುರಿತು ಜಮೀಲ್ ತಮ್ಮ ಅಭಿಪ್ರಾಯವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ್ದರು. ಮೇ. 13 ರಂದು ಜಮೀಲ್ ಅಭಿಪ್ರಾಯ ಪ್ರಕಟಣೆಯಾಗಿತ್ತು. ಕೊರೋನಾ ವೈರಸ್ ಹಾಗೂ ಲಸಿಕೆ ಕುರಿತು ಕಳೆದ ವರ್ಷವೇ ಎಚ್ಚರಿಕೆ ನೀಡಿದ್ದರು.