Asianet Suvarna News Asianet Suvarna News

ಮೂರನೇ ಕೊವಿಡ್‌ ಲಸಿಕೆಗೆ ದೇಶದಲ್ಲಿ ಅನುಮತಿ!

ರಷ್ಯಾದ ಸ್ಪುಟ್ನಿಕ್‌ ಲಸಿಕೆ ತುರ್ತು ಬಳಕೆಗೆ ನಿಶಾನೆ| ಔಷಧ ಪ್ರಾಧಿಕಾರ ತಜ್ಞರ ಸಮಿತಿಯಿಂದ ಶಿಫಾರಸು| ದೇಶಕ್ಕೆ ಶೀಘ್ರದಲ್ಲೇ ಸಿಗಲಿದೆ 3ನೇ ಕೋವಿಡ್‌ ಲಸಿಕೆ| ಸ್ಪುಟ್ನಿಕ್‌ನಿಂದ ದೇಶದ ಲಸಿಕೆ ಕೊರತೆ ನೀಗುವ ನಿರೀಕ್ಷೆ

Panel clears Sputnik could soon be India 3rd shot against Covid 19 surge pod
Author
Bangalore, First Published Apr 13, 2021, 7:19 AM IST

ನವದೆಹಲಿ(ಏ.13): ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಭಾರತ ಸೋಮವಾರ ಇನ್ನೊಂದು ಹೆಜ್ಜೆ ಮುಂದಿರಿಸಿದೆ. ರಷ್ಯಾದ ‘ಸ್ಪುಟ್ನಿಕ್‌-5’ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಬಳಸಬಹುದು ಎಂದು ಭಾರತದ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಈ ಶಿಫಾರಸನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) ಪರಿಶೀಲಿಸಿ ಅಂತಿಮ ಒಪ್ಪಿಗೆ ಸೂಚಿಸಿದರೆ, ಭಾರತದಲ್ಲಿ 3ನೇ ಲಸಿಕೆ ದೊರಕಿದಂತಾಗುತ್ತದೆ. ಈಗಿನ ಮಟ್ಟಿಗೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳಿಗಷ್ಟೇ ಅನುಮತಿಯಿದ್ದು, ಅವನ್ನು ಮಾತ್ರ ಜನರಿಗೆ ನೀಡಲಾಗುತ್ತಿದೆ. ಈ ಎರಡೂ ಲಸಿಕೆ ಬಳಕೆಗೆ 2020ರ ಜ.3ರಂದು ಅನುಮತಿ ನೀಡಲಾಗಿತ್ತು.

ಸೋಮವಾರ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ, ಸ್ಪುಟ್ನಿಕ್‌-5 ಲಸಿಕೆಯ ಬಳಕೆಗೆ ‘ಡಾ| ರೆಡ್ಡೀಸ್‌ ಲ್ಯಾಬ್‌’ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಶಿಫಾರಸು ಮಾಡಿದೆ. ತುರ್ತು ಬಳಕೆಗೆ ಅನುಮತಿ ಸಿಕ್ಕ ತಕ್ಷಣವೇ ರಷ್ಯಾದಿಂದ ಲಸಿಕೆ ತರಿಸಿಕೊಂಡು ಭಾರತದಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ಈಗ 2 ಲಸಿಕೆ ಮಾತ್ರ ಇರುವ ಕಾರಣ ಅಲ್ಲಲ್ಲಿ ಲಸಿಕೆಯ ಕೊರತೆ ಕಾಣಿಸಿಕೊಳ್ಳುತ್ತಿದೆ. ಸ್ಪುಟ್ನಿಕ್‌ ಬಂದರೆ ಈ ಕೊರತೆ ನೀಗುವ ಸಾಧ್ಯತೆ ಇದೆ.

ಸ್ಪುಟ್ನಿಕ್‌-5 ಲಸಿಕೆಯ ಎಲ್ಲ 3 ಹಂತದ ಪ್ರಯೋಗ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಭಾರತದಲ್ಲಿ ಡಾ| ರೆಡ್ಡೀಸ್‌ ಲ್ಯಾಬ್‌ ಜನರ ಮೇಲೆ ಪ್ರಯೋಗ ನಡೆಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ರಷ್ಯಾ ಜತೆ ಡಾ| ರೆಡ್ಡೀಸ್‌ ಕಂಪನಿ ಒಪ್ಪಂದ ಮಾಡಿಕೊಂಡಿತ್ತು.

ರಷ್ಯಾದಲ್ಲಿ 19,866 ಸ್ವಯಂಸೇವಕರ ಮೇಲೆಯೂ ಸೇರಿದಂತೆ 3 ಹಂತದ ಲಸಿಕಾ ಪ್ರಯೋಗದ ದತ್ತಾಂಶವನ್ನು ಸ್ಪುಟ್ನಿಕ್‌-5 ನೀಡಿದ್ದು, ಲಸಿಕೆಯು ಶೇ.91.6ರಷ್ಟುಪರಿಣಾಮಕಾರಿ ಎಂದಿದೆ. ಸ್ಪುಟ್ನಿಕ್‌ ವಿಶ್ವದ ಮೊದಲ ಕೊರೋನಾ ಲಸಿಕೆ ಎಂಬ ಹಿರಿಮೆ ಹೊಂದಿದೆ.

Follow Us:
Download App:
  • android
  • ios