Viral Video: ಸರ್ಕಾರಿ ಶಾಲೆಗೆ ಬಂದ ವಿಶೇಷ ಅತಿಥಿ: ಪಾಠ ಕೇಳಲು ದಿನಾ ಶಾಲೆಗೆ ಬರುತ್ತೆ ಕೋತಿ..!
ಲಂಗೂರ್ ಕೋತಿ ಶಾಲೆಗೆ ಹೋಗಿ ಕುಳಿತಿರುವ ಫೋಟೋ ಹಾಗೂ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾರ್ಖಂಡ್‌ನ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಾಣಿಗಳು (Animals) ಅಂದರೆ ಬಹುತೇಕರಿಗೆ ಇಷ್ಟ. ಈ ಹಿನ್ನೆಲೆ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗಾಗ್ಗೆ ಟ್ರೆಂಡಿಂಗ್ ಆಗುತ್ತಿರುತ್ತದೆ. ಇನ್ನು, ಪ್ರಾಣಿಗಳು ತಮ್ಮ ವರ್ತನೆಯಿಂದ ಒಮ್ಮೊಮ್ಮೆ ಮನುಷ್ಯರನ್ನೇ ತೀವ್ರ ಆಶ್ಚರ್ಯಪಡಿಸುತ್ತದೆ. ಅಂತಹ ಅನೇಕ ಘಟನೆಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇನ್ನು, ಮಂಗನಿಂದ ಮಾನವ ಅನ್ನೋ ಗಾದೆ ಮಾತು ನೀವು ಕೇಳಿರಬೇಕಲ್ಲ. ಇದೇ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಕೋತಿಯೊಂದರ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ, ಕೋತಿ ವಿದ್ಯಾರ್ಥಿಗಳಿಂದ ತುಂಬಿದ ತರಗತಿಗೆ ನುಗ್ಗಿದೆ. ಕಳೆದ ಒಂದು ವಾರದಿಂದ ಆ ಕೋತಿ ಕ್ಲಾಸ್‌ಗೆ ಹೋಗಿ ಪಾಠ ಕೇಳ್ತಿದೆಯಂತೆ..! ಅಂದಹಾಗೆ, ಈ ಘಟನೆ ನಡೆದಿರೋದು ಜಾರ್ಖಂಡ್‌ನ ಸರ್ಕಾರಿ ಶಾಲೆಯಲ್ಲಿ. ಈ ಘಟನೆ ಅನೇಕರ ಆಸಕ್ತಿಯ ವಿಷಯವೂ ಆಗಿದೆ. ಗುರುವಾರ ದೀಪಕ್ ಮಹತೋ ಎಂಬ ಟ್ವಿಟ್ಟರ್ ಬಳಕೆದಾರ ಈ ವಿಡಿಯೋವನ್ನು ಶೇರ್ ಮಾಡಿದ್ದು, ಈ ವಿಡಿಯೋಗೆ ನೂರಾರು ವೀಕ್ಷಣೆ ಹಾಗೂ ಹಲವು ಲೈಕ್‌ಗಳು ಸಿಕ್ಕಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಕಾಡು ಲಂಗೂರ್ ಇತರ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಶಾಲೆಗೆ ಹಾಜರಾಗಿದೆ ಎಂಬ ಕ್ಯಾಪ್ಷನ್ ಅನ್ನು ದೀಪಕ್ ಮಹತೋ ನೀಡಿದ್ದಾರೆ. ಅವರು ವಿಡಿಯೋ ಜತೆಗೆ, ಕೋತಿ ತರಗತಿಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿರುವ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದಾರೆ. ಜಾರ್ಖಂಡ್‌ನ ಹಜಾರಿಬಾಗ್‌ನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ತರಗತಿಗೆ ಕೋತಿ ಹಾಜರಾಗುತ್ತಿತ್ತು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಹಿಂದಿನ ಸಾಳಿನಲ್ಲಿ ಕೋತಿ ಇರುತ್ತಿತ್ತು, ಇದರ ಮಧ್ಯೆಯೇ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು ಎಂಬುದನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು, ಕೋತಿ ತರಗತಿಯ ಮುಂದಿನ ಸಾಲಿನಲ್ಲಿ ಕೂತಿರುವ ಮತ್ತೊಂದು ಫೋಟೋವೊಂದು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಸಹ ಇದನ್ನು ಪೋಸ್ಟ್ ಮಾಡಲಾಗಿದ್ದು, ‘’ಶಾಲೆಗೆ ಬಂದಿರುವ ಹೊಸ ವಿದ್ಯಾರ್ಥಿ’’ ಎಂಬ ಕ್ಯಾಪ್ಷನ್ ಅನ್ನು ಇದಕ್ಕೆ ನೀಡಲಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬುದು ಈವರೆಗೆ ತಿಳಿದುಬಂದಿಲ್ಲ.
ಜಿಲ್ಲಾಧಿಕಾರಿಯ ಕನ್ನಡಕ ಕಸಿದ ಕೋತಿ: ಫ್ರೂಟಿ ಕೊಟ್ಟು ಸ್ಪೆಕ್ಟ್ಸ್ ಪಡೆದ ಪೊಲೀಸರು..!
ತರಗತಿಯಲ್ಲಿ ಕುಳಿತ ಕೋತಿಯ ವಿಡಿಯೋ ವೈರಲ್
ಅದೃಷ್ಟವಶಾತ್, ತರಗತಿಯಲ್ಲಿ ಕುಳಿತಿದ್ದ ಕೋತಿ ಯಾರಿಗೂ ಹಾನಿ ಮಾಡಲಿಲ್ಲ ಮತ್ತು ತರಗತಿಯ ಬೆಂಚ್ ಮೇಲೆ ಕುಳಿತಿರುವುದು ಕಂಡುಬಂದಿದೆ. ಹಾಗೂ, ಈ ಕೋತಿಗೆ ಇದು ವಾಡಿಕೆಯಾಗಿದೆ ಎಂದೂ ತಿಳಿದುಬಂದಿದೆ. ಬುಧವಾರ ಕೋತಿ ಮುಖ್ಯೋಪಾಧ್ಯಾಯರ ಕ್ಯಾಬಿನ್‌ನಲ್ಲಿ ಕಾಣಿಸಿಕೊಂಡು ಮೇಜಿನ ಮೇಲೆ ಕುಳಿತಿತ್ತು. ನಂತರ, ತರಗತಿಗಳು ಶುರುವಾದ ಕೂಡಲೇ ತನ್ನ ದಿನಚರಿಯ ಭಾಗವಾಗಿ ತರಗತಿಯ ಬೆಂಚಿನ ಮೇಲೆ ಹೋಗಿ ಕುಳಿತಿದೆ ಎಂದು ವರದಿ ತಿಳಿಸಿದೆ. ಇನ್ನು, ಅರಣ್ಯ ಇಲಾಖೆಗೆ ಕರೆ ಮಾಡಿ ತಂಡ ಕೋತಿ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸಕಲದೇವ್ ಯಾದವ್ ತಿಳಿಸಿದ್ದಾರೆ.
Dog Scare: ಕೇರಳದಲ್ಲಿ ಬೀದಿ ನಾಯಿ ಹಾವಳಿ; ಮಗಳನ್ನು ಮದ್ರಸಾಗೆ ಕರೆದೊಯ್ಯಲು ಏರ್ ಗನ್ ಹಿಡಿದ ವ್ಯಕ್ತಿ
ಈ ಮಧ್ಯೆ, ಕೋತಿಗಳು ಮನುಷ್ಯರಂತೆ ವರ್ತಿಸಿರುವ ಇತರೆ ಘಟನೆಯೂ ಬೆಳಕಿಗೆ ಬಂದಿದೆ. ಸ್ವಲ್ಪ ಸಮಯದ ಹಿಂದೆ ಕೋತಿಗಳ ಗುಂಪು ಮೊಬೈಲ್ ಫೋನ್ ಅನ್ನು ಬಳಸುತ್ತಿರುವ ಮತ್ತೊಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಕೋತಿಗಳು ಸ್ಮಾರ್ಟ್‌ಫೋನ್ ಪರದೆಯನ್ನು ನೋಡುತ್ತಿರುವುದು ಮತ್ತು ಸಾಮಾಜಿಕ ಮಾಧ್ಯಮ ಖಾತೆಯಂತೆ ಗೋಚರಿಸುವ ಮೂಲಕ ಸ್ಕ್ರೋಲ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ 180,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಕೆಲವು ಇಂಟರ್ನೆಟ್ ಬಳಕೆದಾರರು ಈ ವಿಡಿಯೋವನ್ನು "ಮುದ್ದಾದ" ಎಂದು ಕರೆದರೆ, ಇತರರು ಕೋತಿಗಳು ಸಹ ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.