* ಮದುವೆ ಕಾರ್ಯಕ್ರಮದಲ್ಲಿ ಸಂಸದೆ ಪ್ರಜ್ಞಾ ಡಾನ್ಸ್* ಇಬ್ಬರು ಬಡ ಹೆಣ್ಮಕ್ಕಳ ಮದುವೆ ನೆರವೇರಿಸಿಕೊಟ್ಟ ಸಂಸದೆ* ಖುದ್ದು ತಾವೇ ಮುಂದೆ ನಿಂತು ಮದುವೆ ನಡೆಸಿಕೊಟ್ಟ ಸಂಸದೆ
ಭೋಪಾಲ್(ಜು.09): ಭೋಪಾಲ್‌ನಲ್ಲಿ ಸಂಸದೆ ಪ್ರಜ್ಞಾ ಠಾಕೂರ್ ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ವಿವಾದಕ್ಕೀಡಾಗಗುತ್ತಾರೆ. ಆದರೆ ಈ ಬಾರಿ ಅವರು ವಿಶೇಷ ಕಾರಣದಿಂದ ಸದ್ದು ಮಾಡುತ್ತಿದ್ದಾರೆ. ಸಂಸದೆ ಪ್ರಜ್ಞಾ ಠಾಕೂರ್ ತಮ್ಮ ಸರ್ಕಾರಿ ನಿವಾಸದಲ್ಲಿ ಇಬ್ಬರು ಬಡ ಹೆಣ್ಮಕ್ಕಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಮದುವೆಯ ಎಲ್ಲಾ ಸಂಪ್ರದಾಯದಲ್ಲಿ ಪ್ರಜ್ಞಾ ಠಾಕೂರ್ ಪಾಲ್ಗೊಂಡಿದ್ದರೆ.
ಈ ಇಬ್ಬರು ಹೆಣ್ಮಕ್ಕಳ ದಿಬ್ಬಣ ಬುಧವಾರ ಬುಧವಾರ ಸಂಜೆ ಸಂಸದೆ ಮನೆಗೆ ತಲುಪಿದೆ. ಇಲ್ಲಿ ಸಂಸದೆಯ ಹಾಜರಿಯಲ್ಲಿ ಎರಡೂ ಜೋಡಿ ಮದುವೆಯ ಬಂಧನದಲ್ಲಿ ಒಂದಾಗಿದ್ದಾರೆ.
ಈ ಹೆಣ್ಮಕ್ಕಳ ಪೋಷಕಿ ಸ್ಥಾನದಲ್ಲಿ ನಿಂತು, ತಾವೇ ಖುದ್ದು ದಿಬ್ಬಣವನ್ನು ಸ್ವಾಗತಿಸಿದ್ದಾರೆ. ಉಳಿದ ಆಚರಣೆಯಲ್ಲೂ ಪಾಲ್ಗೊಂಡಿದ್ದಾರೆ. ಇಲ್ಲಿ ಮಾಡಲಾಗಿದ್ದ ಡಾನ್ಸ್‌ನಲ್ಲೂ ಅವರು ಹೆಜ್ಜೇ ಹಾಕಿದ್ದಾರೆ. ಇದಾದ ಬಳಿಕ ಹೆಣ್ಮಕ್ಕಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗಲೂ ಅತ್ತಿದ್ದಾರೆ.
