ರೈಲಿಗೆ ನಾಯಿಯನ್ನು ಏರಿಸುವ ಭರದಲ್ಲಿ ಮಾಲೀಕನೊಬ್ಬ ಅಪಾಯಕ್ಕೆ ಸಿಲುಕುವ ವಿಡಿಯೋ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲಿನಿಂದ ನಾಯಿ ಕೆಳಗೆ ಬಿದ್ದಾಗ ಆತಂಕದ ವಾತಾವರಣ ಸೃಷ್ಟಿಯಾಯಿತು. ನಾಯಿಯನ್ನು ರಕ್ಷಿಸಲಾಯಿತೇ ಎಂಬ ಪ್ರಶ್ನೆಗೆ ವಿಡಿಯೋದಲ್ಲಿ ಉತ್ತರವಿಲ್ಲ.

ಸೋಶಿಯಲ್‌ ಮೀಡಿಯಾದಲ್ಲಿ ಪ್ರಾಣಿ ಪ್ರೇಮಿಗಳಿಗೆ ಹಾರ್ಟ್‌ಬ್ರೇಕ್‌ ಆಗುವಂಥ ವಿಡಿಯೋ ವೈರಲ್‌ ಆಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಮುಂದಾಗುವ ಪರಿಣಾಮವನ್ನು ಅಂದಾಜಿಸದೆ, ರೈಲಿನ ಫ್ಲಾಟ್‌ಫಾರ್ಮ್‌ಗಳಲ್ಲಿ ಅಪಾಯಕಾರಿ ಸಾಹಸ ಹಾಗೂ ಅಸಾಮಾನ್ಯ ಚಟುವಟಿಕೆ ಮಾಡುವ ವಿಡಿಯೋಗಳು ಬರುತ್ತಲೇ ಇರುತ್ತದೆ. ಇಂಥದ್ದೇ ಒಂದು ಹೃದಯವಿದ್ರಾವಕ ವಿಡಿಯೋವೊಂದು ವೈರಲ್‌ ಆಗಿದೆ. 

ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ಶ್ವಾನವನ್ನು ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ರೈಲಿಗೆ ಹತ್ತಿಸುವ ಪ್ರಯತ್ನ ಮಾಡುತ್ತಾನೆ. ಇದು ಆತನ ಜೀವನಕ್ಕೆ ಮಾತ್ರವಲ್ಲ, ಪ್ರಾಣಿಯ ಜೀವಕ್ಕೂ ಸಂಚಕಾರ ತರುವ ಸಾಧ್ಯತೆ ಚಲಿಸುತ್ತಿದ್ದ ರೈಲಿನ ಚಕ್ರದಡಿಗೆ ಸಿಕ್ಕು ನಾಯಿ ಸಾವು ಕಾಣುವ ಅಪಾಯದಿಂದ ಪಾರಾಗಿದ್ದರೆ, ವ್ಯಕ್ತಿ ತನ್ನ ಪ್ರೀತಿಯ ಶ್ವಾನ ರೈಲಿನ ಚಕ್ರದಡಿಗೆ ಬಿದ್ದಿದ್ದನ್ನು ಕಂಡು ಕುಸಿದುಹೋದ ಘಟನೆ ನಡೆದಿದೆ.

ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನೀಲಿ ಟಿ-ಶರ್ಟ್‌ ಧರಿಸಿದ್ದ ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ರೈಲಿಗೆ ಹತ್ತಿಸುವ ಪ್ರಯತ್ನ ಮಾಡುತ್ತಾನೆ. ದುರದೃಷ್ಟವಶಾತ್‌, ನಾಯಿ ರೈಲಿನ ಬಾಗಿಲಿನ ಮೂಲಕ ಟ್ರೇನ್‌ ಏರಲು ವಿಫಲವಾಗುವುದು ಮಾತ್ರವಲ್ಲದೆ, ಟ್ರೇನ್‌ ಫ್ಲಾಟ್‌ಫಾರ್ಮ್‌ ಹಾಗೂ ಚಲಿಸುತ್ತಿರುವ ರೈಲಿನ ಮಧ್ಯೆ ಜಾರಿ ಕೆಳಗೆ ಬೀಳುತ್ತದೆ. ಇದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗುತ್ತದೆ.

ವ್ಯಕ್ತಿ ರೈಲಿನ ಮೆಟ್ಟಿಲು ಹತ್ತಲು ಹತಾಶವಾಗಿ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಾಯಿ ಹಳಿಗಳ ಮೇಲೆ ಬೀಳುತ್ತದೆ. ಅವನ ಸುತ್ತಲಿನ ಪ್ರಯಾಣಿಕರು ನಾಯಿಯನ್ನು ಹುಡುಕುತ್ತಾ ರೈಲು ಹಳಿಗಳತ್ತ ಧಾವಿಸುತ್ತಾರೆ, ಆದರೆ ಅವರು ನಾಯಿಯನ್ನು ಕಂಡುಕೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲಿರುವ ಜನರು ಆ ವ್ಯಕ್ತಿಯ ಮೇಲೆ ಕೂಗುತ್ತಾ, ಸಹಾಯಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಕರೆಯುವಂತೆ ಒತ್ತಾಯಿಸುತ್ತಿದೆ, ಆದರೆ ಕೆಲವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದರು.

ನಾಯಿ ಬದುಕಿದೆಯೇ? ಇಲ್ಲವೇ? ಎನ್ನುವುದನ್ನು ತಿಳಿಸದೇ ವಿಡಿಯೋ ಮುಕ್ತಾಯವಾಗಿದೆ. ಅದರೆ, ಮೂಲಗಳ ಪ್ರಕಾರ ನಾಯಿ ಬದುಕಿದೆ ಎನ್ನಲಾಗಿದೆ. ರೈಲು ನಿಧಾನವಾಗಿ ಮುಂದುವರಿಯುತ್ತಿದ್ದ ಕಾರಣ, ಫ್ಲಾಟ್‌ಫಾರ್ಮ್‌ನಿಂದ ಕೆಳಕ್ಕೆ ಬಿದ್ದ ನಾಯಿ ಇನ್ನೊಂದು ಕಡೆಗೆ ವೇಗವಾಗೊ ಓಡಿದೆ. ಟ್ರೇನ್‌ಗೆ ನೀರು ತುಂಬುತ್ತಿದ್ದ ಕಾರ್ಮಿಕರು ನಾಯಿಯನ್ನು ಹಿಡಿದು, ಮಾಲೀಕರಿಗೆ ಒಪ್ಪಿಸಿದ್ದಾರೆ.

ಮೈಮರೆತು ರೀಲ್ಸ್ ಮಾಡ್ತಿದ್ದ ಯುವತಿಯ ಕಾಲಿನ ನಡುವೆ ಬಂದ 8 ಅಡಿ ಉದ್ದದ ನಾಗರಹಾವು! ಮುಂದೇನಾಯ್ತು?

ಈ ವಿಡಿಯೋ ತ್ವರಿತವಾಗಿ ವೈರಲ್ ಆಗಿದ್ದು, ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜನರು ಸಿಟ್ಟಿನಿಂದ ಇದಕ್ಕೆ ಕಾಮೆಂಟ್‌ ಮಾಡಿದ್ದು, ನಾಯಿ ಜೀವಂತವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಹೆಚ್ಚಿನವರು ನಾಯಿಯ ಸುರಕ್ಷತಯ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ.

ಪತ್ನಿಯ ರೀಲ್ಸ್‌ ಕ್ರೇಜ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಗಂಡ: ಪೊಲೀಸ್‌ ಗಂಡನಿಗೆ ಅಮಾನತಿನ ಶಿಕ್ಷೆ

Scroll to load tweet…