ಅಯೋಧ್ಯೆಗೆ ಐತಿಹಾಸಿಕ ವಿಮಾನ ನೇತೃತ್ವ ವಹಿಸಿದ್ದ ಕ್ಯಾಪ್ಟನ್‌ ಅಶುತೋಷ್‌ ಶೇಖರ್‌, ಈ ಪ್ರಯಾಣದ ಕುರಿತು ಹೆಮ್ಮೆ ಹಾಗೂ ಗೌರವವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಪ್ರಯಾಣಿಕರ ಉತ್ಸಾಹವನ್ನು ಮೆಚ್ಚಿದ ಅವರು, ಇಂಡಿಗೋ ವಿಮಾನ ಹಾಗೂ ಇಲ್ಲಿನ ಪ್ರಯಾಣಿಕರಿಗೆ ಅಯೋಧ್ಯೆ ವಿಮಾನಯಾನದ ಮಹತ್ವವನ್ನು ತಿಳಿಸಿದರು. 

ಅಯೋಧ್ಯೆ (ಡಿ.30): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭವ್ಯ ಉದ್ಘಾಟನೆಯ ನಂತರ ಅಯೋಧ್ಯೆ ವಿಮಾನ ನಿಲ್ದಾಣವು ತನ್ನ ಉದ್ಘಾಟನಾ ವಿಮಾನ ಹಾರಾಟದ ಸಂಭ್ರಮ ಕಂಡಿತು. ಆ ಮೂಲಕ ಅಯೋಧ್ಯೆ ನಗರ ಐತಿಹಾಸಿಕ ಮೈಲಿಗಲ್ಲನ್ನು ಸಂಪಾದಿಸಿದಂತಾಗಿದೆ. ದೆಹಲಿಯಿಂದ ಬಂದ ಇಂಡಿಗೋ ವಿಮಾನವು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನ ಎನಿಸಿಕೊಂಡಿತು. ಆ ಮೂಲಕ ಅಯೋಧ್ಯೆಯ ವಾಯುಯಾನ ಇತಿಹಾಸದಲ್ಲಿ ಮಹತ್ವದ ಕ್ಷಣವನ್ನು ದಾಖಲು ಮಾಡಿತು. ಇಂಡಿಗೋ ವಿಮಾನದ ನೇತೃತ್ವ ವಹಿಸಿದ್ದ ಕ್ಯಾಪ್ಟನ್‌ ಅಶುತೋಷ್‌ ಶೇಖರ್‌, ಐತಿಹಾಸಿಕ ವಿಮಾನಯಾನದ ನೇತೃತ್ವ ವಹಿಸಿದ್ದಕ್ಕೆ ತಮಗೆ ಹಮ್ಮೆ ಹಾಗೂ ಗೌರವ ಎರಡೂ ಸಿಕ್ಕಿದೆ ಎಂದು ವಿಮಾನದಲ್ಲಿಯೇ ಹೇಳಿದರು. ಇದೇ ವೇಳೆ ಪ್ರಯಾಣಿಕರ ಉತ್ಸಾಹವನ್ನೂ ಮೆಚ್ಚಿದ ಅವರು, ಇಂಡಿಗೋ ವಿಮಾನಯಾನ ಕಂಪನಿಗೆ ಹಾಗೂ ಪ್ರಯಾಣಿಕರಿಗೆ ಈ ವಿಮಾನಯಾನದ ಮಹತ್ವವನ್ನು ಎಳೆಎಳೆಯಾಗಿ ವಿವರಿಸಿದರು. ಇದೇ ವೇಳೆ ಕ್ಯಾಪ್ಟನ್‌ ಶೇಖರ್‌, ವಿಮಾನದ ಇತರ ಸಿಬ್ಬಂದಿಯನ್ನೂ ಪ್ರಯಾಣಿಕರಿಗೆ ಪರಿಚಯಿಸಿದ್ದ ಮಾತ್ರವಲ್ಲದೆ, ಇಡೀ ಪ್ರಯಾಣದುದ್ದಕ್ಕೂ ಸುರಕ್ಷಿತವಾಗಿರುವ ಭರವಸೆ ನೀಡಿದರು.

ಪ್ರವಾಸದ ಉದ್ದಕ್ಕೂ ವಿಮಾನ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿಗಳನ್ನು ಒದಗಿಸುವುದಾಗಿ ಅವರು ತಿಳಿಸಿದರು. ತಮ್ಮ ಅನೌನ್ಸ್‌ಮೆಂಟ್‌ ಕೊನೆಯಲ್ಲಿ ಅವರು ಜೈ ಶ್ರೀರಾಮ್‌ ಎನ್ನುವ ಘೋಷಣೆಯನ್ನೂ ಹೇಳಿದರು. ಇದನ್ನು ಕೇಳಿದ ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರು ಕೂಡ ಜೈ ಶ್ರೀರಾಮ್‌ ಎಂದು ಉತ್ಸಾಹದಿಂದ ಘೋಷಣೆ ಕೂಗಿದರು. ಇದು ಅಲ್ಲಿದ್ದ ಆಧ್ಯಾತ್ಮಿಕ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಿತು.

Scroll to load tweet…

ಆಯೋಧ್ಯೆ ತೆರಳಿದ ಮೊದಲ ವಿಮಾನದಲ್ಲಿ ಪ್ರಯಾಣಿಕರಿಂದ ಹನುಮಾನ್ ಚಾಲೀಸ ಪಠಣ!

ಇನ್ನು ವಿಮಾನ ಯಾನ ಆರಂಭಕ್ಕೂ ಮುನ್ನ ಪ್ರಯಾಣಿಕರು, ಇಂಡಿಗೋ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಗಳು ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿದರು. ವಿಮಾನ ಹತ್ತುವ ಸಂದರ್ಭದಲ್ಲಿ ಪ್ರಯಾಣಿಕರು ಹೆಮ್ಮೆಯಿಂದ ಕೇಸರಿ ಧ್ವಜಗಳನ್ನು ಹಿಡಿದುಕೊಂಡಿದ್ದು, ಉದ್ಘಾಟನಾ ವಿಮಾನಕ್ಕೆ ಸಂಭ್ರಮದ ಮೆರುಗು ನೀಡಿದ್ದರಿಂದ ವಾತಾವರಣ ಮತ್ತಷ್ಟು ಆನಂದದಾಯಕವಾಗಿತ್ತು.

ಆಯೋಧ್ಯೆಯಲ್ಲಿ ಮೋದಿಗೆ ಹೂಮಳೆ ಸ್ವಾಗತ ನೀಡಿದ ಬಾಬ್ರಿ ಮಸೀದಿ ಅರ್ಜಿದಾರ ಇಕ್ಬಾಲ್ ಅನ್ಸಾರಿ!

ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ ಪ್ರಧಾನಿ ಮೋದಿಯವರು ಹೊಸದಾಗಿ ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣವನ್ನು ಅನಾವರಣಗೊಳಿಸಿದರು. ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಪುರ್ಔಭಾವಿಯಾಗಿ ಈ ಉದ್ಘಾಟನೆ ನಡೆದಿದೆ.