ಪ್ರಧಾನಿ ಮೋದಿ ಆಯೋಧ್ಯೆ ಭೇಟಿ ವೇಳೆ ಜನರು ಹೂಮಳೆ ಸ್ವಾಗತ ನೀಡಿದ್ದಾರೆ. ಮೋದಿಯನ್ನು ಸ್ವಾಗತಿಸಲು ರಸ್ತೆ ಇಕ್ಕೆಲಗಳಲ್ಲಿ ಜನರು ತುಂಬಿದ್ದರು. ಹೀಗೆ ಹೂಮಳೆ ಸ್ವಾಗತ ನೀಡಿದವರ ಪೈಕಿ ಬಾಬ್ರಿ ಮಸೀದಿ ಪರವಾಗಿ ಹಾಗೂ ಶ್ರೀರಾಮ ಮಂದಿ ವಿರುದ್ಧವಾಗಿ ದೂರು ಸಲ್ಲಿಸಿದ ಮಾಜಿ ದೂರುದಾರ ಇಕ್ಬಾಲ್ ಅನ್ಸಾರಿ ಕೂಡ ಇದ್ದರು. ಮೋದಿ ಸ್ವಾಗತಿಸಿ ಬಳಿಕ ಅನ್ಸಾರಿ ಮಹತ್ವದ ಹೇಳಿಕೆ ನೀಡಿದ್ದಾರೆ. 

ಆಯೋಧ್ಯೆ(ಡಿ.30) ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಸಡಗರದಲ್ಲಿ ಮುಳುಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಗೆ ಭೇಟಿ ನೀಡಿ ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ 15,000 ಕೋಟಿ ರೂಪಾಯಿಗೂ ಅಧಿಕ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರದಾನಿ ಮೋದಿ ಆಯೋಧ್ಯೆಗೆ ಆಗಮಿಸುತ್ತಿದ್ದಂತೆ ಜನರು ಅದ್ಧೂರಿ ಸ್ವಾಗತ ನೀಡಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಜನರು ಮೋದಿಗೆ ಹೂಮಳೆ ಸ್ವಾಗತ ನೀಡಿದ್ದಾರೆ. ರಾಮ ಮಂದಿರ ವಿರುದ್ಧ ಹಾಗೂ ಬಾಬ್ರಿ ಮಸೀದಿ ವರ ಹೋರಾಟ ಮಾಡಿದ ಮಾಜಿ ಅರ್ಜಿದಾರ ಇಕ್ಬಾಲ್ ಅನ್ಸಾರಿ ಕೂಡ ಪ್ರಧಾನಿ ಮೋದಿಗೆ ಹೂಮಳೆ ಸ್ವಾಗತ ನೀಡಿದ್ದು ವಿಶೇಷವಾಗಿತ್ತು. 

ಆಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ ಮೋದಿ 15 ಕಿಲೋಮೀಟರ್ ರೋಡ್ ಶೋ ನಡೆಸಿದ್ದರು. ಧರ್ಮ ಪಥ, ಲತಾ ಮಂಗೇಶ್ಕರ್ ಚೌಕ್, ರಾಮ ಪಥ, ತೇಡಿ ಬಜಾರ್ ಮೂಲಕ ಮೋದಿ ರೋಡ್ ಶೋ ಸಾಗಿತ್ತು. 15 ಕಿ.ಮಿ ರೋಡ್ ‌ಶೋ ವೇಳೆ ಮೋದಿ ಸ್ವಾಗತಿಸಲು ಜನರು ಕಿಕ್ಕಿರಿದು ತುಂಬಿದ್ದರು. ದಾರಿಯುದ್ದಕ್ಕೂ ಜೈಶ್ರೀರಾಮ್, ಮೋದಿ ಮೋದಿ ಘೋಷಣೆಗಳು ಮೊಳಗಿತ್ತು. ಈ ಜನರ ನಡುವೆ ಬಾಬ್ರಿ ಮಸೀದಿ ಪರ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದ ಮಾಜಿ ಅರ್ಜಿದಾರ ಇಕ್ಬಾಲ್ ಅನ್ಸಾರಿ ಕೂಡ ಮೋದಿಗೆ ಸ್ವಾಗತ ನೀಡಿದ್ದಾರೆ. ಬಳಿಕ ಮಾತನಾಡಿದ ಅನ್ಸಾರಿ, ಮೋದಿಯಿಂದ ಆಯೋಧ್ಯೆಯಲ್ಲಿ ಸಾಮರಸ್ಯವಿದೆ. ಆಯೋಧ್ಯೆ ಇದೀಗ ಭಾರತದ ಕೇಂದ್ರಬಿಂದುವಾಗಿ ಬದಲಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿಯಿಂದ ಮಾತ್ರ ಅಯೋಧ್ಯೆಗೆ ಬಂತು ಜೀವಕಳೆ; ಮಾರಿಷಸ್ ಸಂಸದನ ಮೆಚ್ಚುಗೆ!

ಪ್ರಧಾನಿ ಮೋದಿ ಆಯೋಧ್ಯೆಗೆ ಆಗಮಿಸಿದ್ದಾರೆ. ನಾವೆಲ್ಲಾ ಹೂಮಳೆಯಿಂದ ಸ್ವಾಗತ ಕೋರಿದ್ದೇವೆ. ಆಯೋಧ್ಯೆಯಲ್ಲಿ ಹಿಂದೂ ಮುಸ್ಲಿಮ್, ಸಿಖ್ ಎಲ್ಲರೂ ಒಂದಾಗಿ ಮೋದಿಗೆ ಸ್ವಾಗತ ಕೋರಿದ್ದೇವೆ. ನಾವೆಲ್ಲಾ ಇಲ್ಲಿ ಜೊತೆಯಾಗಿ ಸಂತೋಷವಾಗಿದ್ದೇವೆ. ಆಯೋಧ್ಯೆ ರಾಮನಗರಿ ಎಂದೇ ಪ್ರಸಿದ್ಧಿಯಾಗಿದೆ. ಆಯೋಧ್ಯೆಗೆ ಆಗಮಿಸುವ ಎಲ್ಲಾ ಗಣ್ಯರನ್ನು ನಾವು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

Scroll to load tweet…

ರೋಡ್ ಶೋ ಬಳಿಕ ಪ್ರಧಾನಿ ಮೋದಿ ನವೀಕೃತ ಆಯೋಧ್ಯೆ ಧಾಮ ರೈಲು ನಿಲ್ದಾಣ ಉದ್ಘಾಟಿಸಿದ್ದಾರೆ. 240 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಈ ರೈಲು ನಿಲ್ದಾಣವನ್ನು ಪುನರ್‌ ನವೀಕರಣ ಮಾಡಲಾಗಿದೆ. ಇನ್ನು ವಾಲ್ಮೀಕಿ ಮಹರ್ಷಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರೆ. ವಿಮಾನ ನಿಲ್ದಾಣದ 1ನೇ ಹಂತವನ್ನು 1,450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 

ಆಯೋಧ್ಯೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ!