Viral Video: Couple Caught on Railway Platform Under Bedsheet ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಬೆಡ್‌ಶೀಟ್‌ ಹೊದ್ದು ಮಲಗಿದ್ದ ಜೋಡಿಯ ಮೇಲಿನ ಹೊದಿಕೆಯನ್ನು ವ್ಯಕ್ತಿಯೊಬ್ಬರು ಎಳೆದಿದ್ದಾರೆ.

ನವದೆಹಲಿ (ಫೆ.10): ಇದು ಸೋಶಿಯಲ್‌ ಮೀಡಿಯಾ, ಝೆನ್‌ಜೀ ಜಮಾನ. ಯುವ ಜನಾಂಗ ಮುಕ್ತ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಆದರೆ, ಅನೇಕ ಸಂದರ್ಭಗಳಲ್ಲಿ ಯುವ ಜನಾಂಗದ ಮುಕ್ತತೆ ಕೈಮೀರುವಷ್ಟು ಮುಂದೆ ಹೋಗಿರುವುದು ಗೊತ್ತಾಗಿದೆ. ನೀವು ಏನು ಯೋಚನೆ ಮಾಡ್ತಿದ್ದೀರೋ ಅದು ಸತ್ಯ. ಪ್ರೀತಿ ಮತ್ತು ಮಾದಕ ವಸ್ತು ವಿಚಾರ ಮಾತನಾಡುವ ಸಂದರ್ಭ ಬಂದಾಗ ಯುವ ಜನತೆ ಮುಕ್ತ ಹಾಗೂ ಸ್ವಾತಂತ್ರ್ಯದ ತಪ್ಪು ಲಾಭವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಯುವ ಜನಾಂಗದಲ್ಲಿ ಮಾದಕ ವಸ್ತುವಿನ ವ್ಯಸನ ವೇಗವಾಗಿ ಏರುತ್ತಿದೆ. ಅದೇ ಸಮಯದಲ್ಲಿ ಬಹಿರಂಗವಾಗಿ ಪ್ರಣಯಕೇಳಿಯಿಂದಲೂ ಅವರು ದೂರವಿರುತ್ತಿಲ್ಲ. ಪಾರ್ಕ್‌, ಬಸ್‌ಸ್ಟ್ಯಾಂಡ್‌, ರಸ್ತೆ, ಪೊದೆ, ಖಾಲಿ ಜಾಗ ಎಲ್ಲೆಂದರಲ್ಲಿ 'ಇಂಥ' ವಿಡಿಯೋಗಳು ಲೀಲಾಜಾಲವಾಗಿ ಹೊರಬರುತ್ತಿದೆ. ಒಂದು ಕಾಲದಲ್ಲಿ ಕೇವಲ ಬೆಡ್‌ರೂಮ್‌ಗೆ ಮಾತ್ರವೇ ಸೀಮಿತವಾಗಿದ್ದ ಇಂಥ ಪ್ರಣಯಕೇಳಿ ಈಗ ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ವರೆಗೂ ಬಂದು ನಿಂತಿದೆ.

ಹೌದು ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ನಲ್ಲಿ ಒಂಚೂರು ನಾಗರೀಕ ಪ್ರಜ್ಞೆ ಇಲ್ಲದಂತೆ, ಯುವ ಜೋಡಿಯೊಂದು ಶುರು ಹಚ್ಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವಿಡಿಯೋದ ಆರಂಭದಲ್ಲಿ ಯಾರೋ ಒಬ್ಬರು ಇದನ್ನು ಶೂಟ್‌ ಮಾಡುತ್ತಿದ್ದಾರೆ. ಫ್ಲಾಟ್‌ಫಾರ್ಮ್‌ನಲ್ಲಿ ಹಾಸಿಗೆ ಹಾಸಿಕೊಂಡು ಮಲಗಿರುವ ಜೋಡಿಯ ಬೆಡ್‌ಶೀಟ್‌ ಅತಿಯಾಗಿ ಅಲ್ಲಾಡುತ್ತಿರುವುದು ಕಂಡುಬಂದಿದೆ. ಇದರ ಬೆನ್ನಲ್ಲಿಯೇ ಒಬ್ಬ ವ್ಯಕ್ತಿ ಬಂದು ಇವರ ಮೇಲಿದ್ದ ಬೆಡ್‌ಶೀಟ್‌ಅನ್ನು ಎಳೆದು ಹಾಕಿದ್ದಾರೆ. ಬೆಡ್‌ಶೀಟ್‌ ತೆಗೆದ ಬಳಿಕ ಕಂಡ ದೃಶ್ಯವು ಯುವ ಜೋಡಿ ಮಾತ್ರವಲ್ಲ ಅಲ್ಲಿದದ ಜನರೂ ಕೂಡ ತಲೆತಗ್ಗಿಸುವಂತಿದೆ.

ಬೆಡ್‌ಶೀಟ್‌ ಎಳೆದ ಬಳಿ ಮಲಗಿದ್ದ ಯುವ ಜೋಡಿ ಬೆತ್ತಲಾಗಿದ್ದು ಕಂಡಿದ್ದು, ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ. ಇಬ್ಬರನ್ನೂ ಆ ಸ್ಥಿತಿಯಲ್ಲಿ ನೋಡಿದ ಬಳಿಕ, ಬೆಡ್‌ಶೀಟ್‌ ಎಳೆದ ವ್ಯಕ್ತಿಯೇ ಇವರ ಮೇಲೆ ಮತ್ತೆ ಬೆಡ್‌ಶೀಟ್‌ ಹಾಕಿ ಅಲ್ಲಿಂದ ಹೊರನಡೆದಿದ್ದಾರೆ.

ಸಖತ್‌ ವೈರಲ್‌ ಆದ ವಿಡಿಯೋ

ಈ ವಿಡಿಯೋ ಎಲ್ಲಿನದು, ಹಾಗೂ ಯಾವ ರೈಲ್ವೇ ಸ್ಟೇಷನ್‌ದು ಅನ್ನೋದು ಗೊತ್ತಾಗಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 20 ರೂಪಾಯಿ ಕೊಟ್ಟರೆ, ರೈಲ್ವೇ ನಿಲ್ದಾಣದಲ್ಲೇ ಒಂದು ಚಿಕ್ಕ ರೂಮ್‌ ಸಿಗುತ್ತದೆ. 100 ರೂಪಾಯಿ ಖರ್ಚು ಮಾಡಿದರೆ, ಒಂದು ಸಣ್ಣಕೋಣೆ ಬಾಡಿಗೆ ಪಡೆದು ಇದನ್ನು ಮಾಡಬಹುದು. ಅಂಥದ್ದರಲ್ಲಿ ನಾಗರೀಕ ಪ್ರಜ್ಞೆ ಇಲ್ಲದೆ ಇಂಥ ಕೆಲಸವನ್ನು ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ನಲ್ಲಿಯೇ ಮಾಡಿದ್ದು ಅಪರಾಧ ಎಂದು ಹೇಳಿದ್ದಾರೆ. ಯುವ ಜೋಡಿಯ ವಿರುದ್ದ ಹಾಗೂ ಇಂಥ ಕೆಲಸ ಮಾಡ್ತಿದ್ದಾರೆ ಎಂದು ಗೊತ್ತಿರುವ ಸೂಚನೆ ನಡುವೆಯೂ ಅವರ ಮೇಲಿದ್ದ ಬೆಡ್‌ಶೀಟ್‌ ತೆಗೆದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Scroll to load tweet…