MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ: ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ: ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್‌ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

1 Min read
Author : Mahmad Rafik
Published : Feb 12 2026, 09:45 AM IST
Share this Photo Gallery
  • FB
  • TW
  • Linkdin
  • Whatsapp
15
ಅಜಿತ್ ಮತ್ತು ಸನಾ
Image Credit : Aaj Tak

ಅಜಿತ್ ಮತ್ತು ಸನಾ

ಅಜಿತ್ ಮತ್ತು ಸನಾ ಇಬ್ಬರು ಪ್ರೀತಿಸುತ್ತಿದ್ದರು. ಹುಡುಗ ಅನ್ಯಕೋಮಿನವನಾಗಿದ್ದರಿಂದ ಸನಾ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ವಿರೋಧದ ನಡುವೆಯೂ ಅಜಿತ್ ಜೊತೆ 21 ವರ್ಷದ ಸನಾ ಮದುವೆಯಾಗಿದ್ದಳು. ಮದುವೆ ಬಳಿಕ ಮಗಳಿಂದ ಪೋಷಕರು ಅಂತರ ಕಾಯ್ದುಕೊಂಡಿದ್ದರು. ಇದೀಗ ಸನಾ ಸಾವನ್ನಪ್ಪಿದ್ದು, ಪೋಷಕರು ಇದನ್ನು ಕೊ*ಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

25
ವಿರೋಧದ ನಡುವೆ ಮದುವೆ
Image Credit : FReepik

ವಿರೋಧದ ನಡುವೆ ಮದುವೆ

ಅಜಿತ್ ಮತ್ತು ಸನಾ ಇಬ್ಬರು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಜೋಡಿ ನಾಲ್ಕು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದರು. ಅಜಿತ್ ಹಣಕಾಸಿನ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದನು. ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸನಾ ಸಾವನ್ನಪ್ಪಿದ್ದಾಳೆ.

Related Articles

Related image1
Haveri: ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!
Related image2
Vijayapura: ಮಗಳೇ ಮನೆಗೆ ಬಾರಮ್ಮಾ ಅಂದ್ರೆ ನಾನು ಮೊಹಮ್ಮದ್ ಸಲೀಂನ ಹೆಂಡ್ತಿ ಎಂದ ನಿಶಾ
35
ಚಿತೆಯಲ್ಲಿ ಸುಡುತ್ತಿತ್ತು ಸನಾ ಶವ
Image Credit : Getty

ಚಿತೆಯಲ್ಲಿ ಸುಡುತ್ತಿತ್ತು ಸನಾ ಶವ

ಮಗಳ ಸಾವಿನ ಸುದ್ದಿ ಪೋಷಕರಿಗೆ ತಿಳಿದಿದೆ. ಬುಧವಾರ ಸಂಜೆ ಮಗಳ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿರುವ ವಿಷಯ ತಿಳಿದ ಸನಾ ಪೋಷಕರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಹೊರಗೆ ತೆಗೆದಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ.

45
ಅಜಿತ್ ಪೊಲೀಸರ ವಶಕ್ಕೆ
Image Credit : google

ಅಜಿತ್ ಪೊಲೀಸರ ವಶಕ್ಕೆ

ಸನಾ ಕ್ಷಯರೋಗದಿಂದ ಬಳಲುತ್ತಿದ್ದಳು. ಬುಧವಾರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವುಂಟಾಗಿ ಪತ್ನಿ ಮೃತಳಾಗಿದ್ದಾಳೆ ಎಂದು ಅಜಿತ್ ಹೇಳಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಅಜಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶದ ಕಿರಾವಲಿ ಪ್ರದೇಶದ ಬಿಜೌ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Mandya: ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ

55
ಸನಾ ಪೋಷಕರು ಹೇಳೋದೇನು?
Image Credit : Asianet News

ಸನಾ ಪೋಷಕರು ಹೇಳೋದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಸನಾ ತಂದೆ ನಿಜಾಮ್, ಸಾಲದ ಹಣ ವಸೂಲಿಗಾಗಿ ಅಜಿತ್ ನಮ್ಮ ಮನೆಗೆ ಬರುತ್ತಿದ್ದನು. ಈ ವೇಳೆ ಮಗಳನ್ನು ಪರಿಚಯಿಸಿಕೊಂಡಿದ್ದನು. ನಂತರ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದನು. ಇದೀಗ ಮಗಳು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳಿವೆ. ನಾವು ಬಂದಾಗ ಚಿತೆ ಉರಿಯುತ್ತಿತ್ತು. ಪೊಲೀಸರು ಕೂಡಲೇ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಮಂಗಳೂರಿನಿಂದ ವಿದ್ಯಾರ್ಥಿನಿ ಪರಾರಿ; ಕೇರಳದಲ್ಲಿ ರಿಜಿಸ್ಟರ್ ಮದುವೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಪ್ರೇಮ ವಿವಾಹ
ಪ್ರೀತಿ
ಉತ್ತರ ಪ್ರದೇಶ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಹೇರ್‌ ಕಟ್‌ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ
Recommended image2
ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧನಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ
Recommended image3
ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!
Related Stories
Recommended image1
Haveri: ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!
Recommended image2
Vijayapura: ಮಗಳೇ ಮನೆಗೆ ಬಾರಮ್ಮಾ ಅಂದ್ರೆ ನಾನು ಮೊಹಮ್ಮದ್ ಸಲೀಂನ ಹೆಂಡ್ತಿ ಎಂದ ನಿಶಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved