Cute Girl Dance Video: 2 ವರ್ಷದ ಬಾಲಕಿಯೊಬ್ಬಳು ನಾಗವಲ್ಲಿಯಂತೆ ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ. ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಈ ಮುದ್ದು ಬಾಲಕಿಯ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ನಾಗವಲ್ಲಿ ಹೆಸರು ಕೇಳಿದ್ರೆ ಒಂದು ಕ್ಷಣ ಭಯವಾಗುತ್ತೆ. ಇದಕ್ಕೆ ಕಾರಣ ತೆರೆಕಂಡ ಸಿನಿಮಾಗಳು. ನಾಗವಲ್ಲಿ ಕಥೆ ಆಧರಿತ ಸಿನಿಮಾಗಳು ಕನ್ನಡ, ಮಲಯಾಳಂ, ತಮಿಳು, ತೆಲಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಿವೆ. ಕನ್ನಡದಲ್ಲಿ ನಾಗವಲ್ಲಿಯಾಗಿ ಕಾಣಿಸಿಕೊಂಡಿದ್ದ ನಟಿ ಸೌಂದರ್ಯ ಅವರ ನೈಜ ನಟನೆ ಎಲ್ಲರನ್ನು ಭಯಪಡುವಂತಾಗಿತ್ತು. ಇನ್ನು ತಮಿಳಿನಲ್ಲಿ ಜ್ಯೋತಿಕಾ, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಮತ್ತು ಹಿಂದಿಯಲ್ಲಿ ವಿದ್ಯಾ ಬಾಲನ್ ನಟನೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ದಕ್ಷಿಣ ಭಾರತೀಯರಿಗೆ ನಾಗವಲ್ಲಿಯಾದ್ರೆ, ಉತ್ತರ ಭಾರತೀಯರಿಗೆ ಮಂಜುಲಿಕಳಾಗಿ ಚಿರಪರಿಚಿತರು. ಸಿನಿಮಾಗಳು ಬಿಡುಗಡೆಯಾಗಿ ದಶಕಗಳೇ ಕಳೆದ್ರೂ ಜನರು ಮಾತ್ರ ಈ ಪಾತ್ರಗಳನ್ನು ಮರೆತಿಲ್ಲ.
ಸಿನಿಮಾದ ಹಾಡು ಮತ್ತು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ 2 ವರ್ಷದ ಪೋರಿ, ನಾಗವಲ್ಲಿಯಾಗಿ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗವಾಗಿ ಹರಿದಾಡುತ್ತಿದೆ. ಆದ್ರೆ ನಿಮಗೆ ಈ ಪುಟ್ಟ ನಾಗವಲ್ಲಿಯನ್ನು ನೋಡಿದ್ರೆ ಖಂಡಿತ ಭಯವಾಗಲ್ಲ, ಬದಲಾಗಿ ಲವ್ ಆಗುತ್ತದೆ. ಬಾಲಕಿಯ ಡ್ಯಾನ್ಸ್ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡಿಕೊಂಡು, ಮೆಚ್ಚುಗೆ ಸೂಚಿಸಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು gurmelsinghvlog ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೂರು ದಿನಗಳ ಹಿಂದೆ ಶೇರ್ ಮಾಡಿಕೊಳ್ಳಲಾಗಿದೆ. ಇದುವರೆಗೂ 1.9 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿರುವ ಈ ವಿಡಿಯೋಗೆ ನೆಟ್ಟಿಗರು ಸಾಗರೋಪಾದಿಯಲ್ಲಿ ಲೈಕ್ಸ್ ನೀಡುತ್ತಾ ಕಮೆಂಟ್ ಮಾಡುತ್ತಿದ್ದಾರೆ. ಮುದ್ದಾಗಿ ಡ್ಯಾನ್ಸ್ ಮಾಡಿರುವ ಪೋರಿಯ ಹೆಸರು ನನ್ನು ಆಗಿದ್ದು, ದೆಹಲಿಯ ನಿವಾಸಿಯಾಗಿದ್ದಾಳೆ. ನನ್ನು ಪೋಷಕರು ಮಗಳಿಗಾಗಿಯೇ ಪ್ರತ್ಯೇಕ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಈ ಖಾತೆಯಲ್ಲಿ ನನ್ನುಳ ಮುದ್ದಾದ ವಿಡಿಯೋಗಳನ್ನು ನೋಡಬಹುದು.
ವೈರಲ್ ವಿಡಿಯೋದಲ್ಲಿ ಏನಿದೆ?
ಮಂಚದ ಮೇಲೆ ಮುದ್ದುಮರಿ ನನ್ನು ನಿಂತುಕೊಂಡಿರುತ್ತಾಳೆ. ಈ ವೇಳೆ ಪೋಷಕರು ಆಪ್ತಮಿತ್ರದ ರಿಮೇಕ್ ಆಗಿರುವ ಹಿಂದಿಯ 'ಭುಲ್ ಭುಲೈಯ್ಯಾ' ಚಿತ್ರದ ಹಾಡಿನ "ಮೇರೆ ಡೋಲನಾ ಸುನ್" ಹಾಡು ಪ್ಲೇ ಮಾಡುತ್ತಾರೆ. ಈ ಹಾಡು ಪ್ಲೇ ಆಗುತ್ತಿದ್ದಂತೆ ನಾಗವಲ್ಲಿಯಾಗಿ ಬದಲಾಗುವ ಬಾಲಕಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಇಷ್ಟು ಮಾತ್ರವಲ್ಲ ತನ್ನ ತೊದಲು ನುಡಿಗಳಿಂದ ಹಾಡು ಹೇಳಲು ನನ್ನು ಪ್ರಯತ್ನಿಸುತ್ತಾಳೆ. ಹಾಡು ಮುಗಿಯವರೆಗೂ ನನ್ನು ಡ್ಯಾನ್ಸ್ ಮಾಡುತ್ತಲೇ ಇರುತ್ತಾಳೆ. ನನ್ನುಳ ನಾಗವಲ್ಲಿಯ ಡ್ಯಾನ್ಸ್ ನೋಡಿದ್ರೆ ಭಯದ ಬದಲು ಆಕೆಯ ಮೇಲೆ ಲವ್ ಆಗುತ್ತೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಸ್ಕ್ವೇರ್ ವೇವ್ ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ಕಾರಣ ಏನು?
ನನ್ನು ಡ್ಯಾನ್ಸ್‌ಗೆ ನೆಟ್ಟಿಗರು ಹೇಳಿದ್ದೇನು?
ಓ ದೇವರೇ,ಈ ಮಗು ಎಷ್ಟು ಮುದ್ದಾಗಿ ಡ್ಯಾನ್ಸ್ ಮಾಡಿದೆ. ಪೋಷಕರೇ ಮಗುವಿನ ದೃಷ್ಟಿಯನ್ನು ತೆಗೆಯಿರಿ ಎಂದು ಹೇಳಿದ್ದಾರೆ. ಈಕೆಯ ಪ್ರೀತಿಯ ಕಣ್ಣುಗಳನ್ನು ನೋಡಿ ನನಗೆ ಲವ್ ಆಯ್ತು. ರಾಣಿಯಂತಿರೋ ಮಗುವಿನ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಕೆಲವರು ವಿದ್ಯಾ ಬಾಲನ್ ಅವರ ಮಂಜುಲಿಕಾ ಲುಕ್ ಫೋಟೋ ಕಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದಾರೆ. ಮಗುವಿಗೆ ಡ್ಯಾನ್ಸ್ ಜೊತೆ ನಟನೆಯ ಬಗ್ಗೆಯೂ ಆಸಕ್ತಿಯಿದ್ದಂತೆ ಕಾಣಿಸುತ್ತಿದೆ. ಭವಿಷ್ಯದಲ್ಲಿ ಒಳ್ಳೆಯ ತರಬೇತಿ ಮತ್ತು ಅವಕಾಶಗಳು ಸಿಕ್ಕರೆ ಇವಳು ಒಳ್ಳೆಯ ಕಲಾವಿದೆ ಆಗುತ್ತಾಳೆ ಎಂದು ನೆಟ್ಟಿಗರು ಹಾರೈಸಿದ್ದಾರೆ.
2 ವರ್ಷದ ನನ್ನು ಇನ್‌ಸ್ಟಾಗ್ರಾಂನಲ್ಲಿ 22 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ. ಈಕೆಯ ಪೋಷಕರು ಸಹ ಡ್ಯಾನ್ಸ್ ಮಾಡಿರುವ ರೀಲ್ಸ್‌ಗಳು ಲಕ್ಷ ಲಕ್ಷ ವ್ಯೂವ್ ಪಡೆದುಕೊಂಡಿವೆ.
ಇದನ್ನೂ ಓದಿ: ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್?
