Asianet Suvarna News Asianet Suvarna News
breaking news image

ಐಐಐಟಿ ಹೈದರಾಬಾದ್‌ ಹಾಸ್ಟೆಲ್ ಮೆಸ್ ಊಟದ ತುಂಬಾ ಜಿರಳೆ, ನೊಣ; ಮಾಜಿ ವಿದ್ಯಾರ್ಥಿ ಪೋಸ್ಟ್ ವೈರಲ್

ಹಾಸ್ಟೆಲ್ ಊಟ ಎಂದರೆ ಯಾರೂ ಅದರ ಬಗ್ಗೆ ಒಳ್ಳೆಯ ಮಾತಾಡುವುದು ಕೇಳುವುದು ಸಾಧ್ಯವಿಲ್ಲ. ಆದರೆ, ಸೋಷ್ಯಲ್ ಮೀಡಿಯಾದ ಈ ಯುಗದಲ್ಲಿ ತಮ್ಮ ಹಾಸ್ಟೆಲ್ ಊಟದ ಕಳಪೆ ಗುಣಮಟ್ಟ ಹೇಗಿದೆ ಎಂಬುದನ್ನು ಚಿತ್ರಗಳಲ್ಲೇ ತೋರಿಸಲು ಸಾಧ್ಯವಿದೆ..

Viral Post Claims IIIT Hyderabad Serves Food With Cockroaches And Flies skr
Author
First Published Jun 9, 2024, 2:20 PM IST

ಕಾಲೇಜು ದಿನಗಳು ಜೀವಮಾನವಿಡೀ ಉಳಿಯುವ ನೆನಪುಗಳನ್ನು ಸೃಷ್ಟಿಸುತ್ತವೆ. ಕ್ಲಾಸ್‌ಗೆ ಬಂಕ್ ಮಾಡಿ ಸಿನಿಮಾಗೆ ಹೋಗೋದರಿಂದ ಹಿಡಿದು ಹಾಸ್ಟೆಲ್ ದಿನಗಳ ನೆನಪು ಜೀವನಪೂರ್ತಿಗಾಗುವಷ್ಟಿರುತ್ತವೆ. ಅದರಲ್ಲೂ ಹಾಸ್ಟೆಲ್‌ನಲ್ಲಿ ಕಳೆದ ಪ್ರತಿಯೊಬ್ಬರಿಗೂ ಅಲ್ಲಿನ ಕಳಪೆ ಊಟದ ನೆನಪು ಅಜರಾಮರವಾಗಿರುತ್ತದೆ. ಅದರ ಬಗ್ಗೆ ಹಾಸ್ಟೆಲ್‌ಗಳಲ್ಲಿ ಸಾಕಷ್ಟು ಜೋಕ್‌ಗಳು ಹರಿದಾಡುತ್ತವೆ, ಬೈದುಕೊಂಡೇ ವಿದ್ಯಾರ್ಥಿಗಳು ಅದನ್ನು ಸೇವಿಸುತ್ತಾರೆ. ಆದರೆ, ಹಾಸ್ಟೆಲ್‌ ಮೆಸ್‌ಗಳು ಮಾತ್ರ ಬದಲಾಗೋದಿಲ್ಲ.

ಹಿಂದೆಲ್ಲ ವಿದ್ಯಾರ್ಥಿಗಳು ಈ ಬಗ್ಗೆ ದೂರುತ್ತ ತಿನ್ನುತ್ತಿದ್ದರು. ಯಾರೂ ಯಾವುದೇ ಕ್ರಮ ಕೈಗೊಂಡಿದ್ದು ಮಾತ್ರ ಸುಳ್ಳು. ಆದರೆ ಈ ಸೋಷ್ಯಲ್ ಮೀಡಿಯಾ ಯುಗದಲ್ಲಿ ಹಾಸ್ಟೆಲ್ ಊಟದ ಕಳಪೆ ಗುಣಮಟ್ಟವನ್ನು ಫೋಟೋಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಿದೆ. ಈ ಮೂಲಕವಾದರೂ ಹಾಸ್ಟೆಲ್ ಅಧಿಕಾರಿಗಳು ಹೋಗುವ ಮಾನವನ್ನು ಸರಿಪಡಿಸಿಕೊಳ್ಳಲು ಮುಂದಾಗುವರೇ ನೋಡಬಹುದು.

ಇದೇ ಪ್ರಯತ್ನದಲ್ಲಿ ಐಐಐಟಿ ಹೈದರಾಬಾದ್‌‌ನ ಮಾಜಿ ವಿದ್ಯಾರ್ಥಿಯೊಬ್ಬರು ಎಕ್ಸ್‌ನಲ್ಲಿ ತಮ್ಮ ಹಾಸ್ಟೆಲ್ ಮೆಸ್‌ನ ಕಳಪೆ ಊಟದ ಫೋಟೋ ಹಾಕಿದ್ದಾರೆ.

'ಮಗನ ಬಗ್ಗೆ ಮಾತಾಡಿದ್ರೆ ಯಾರಾದ್ರೂ..' 2021ರಿಂದ ಶಾರೂಖ್ ಮಾಧ್ಯಮಗಳನ ...
 

ಹೈದರಾಬಾದ್‌ನ IIITಯ ಮಾಜಿ ಪದವಿಪೂರ್ವ ಸಂಶೋಧಕ ಶಾಶ್ವತ್ ಗೋಯೆಲ್ ಅವರು X ‌ನಲ್ಲಿ ಸೌತೆಕಾಯಿಯ ಫೋಟೋ ಹಂಚಿಕೊಂಡಿದ್ದು ಅದರ ತುಂಬಾ ನೊಣಗಳು ಕುಳಿತಿವೆ. ಇದು ಐಐಐಟಿ ಹೈದರಾಬಾದ್‌‌ನ ಹಾಸ್ಟೆಲ್ ಊಟ ಎಂದವರು ಹೇಳಿದ್ದಾರೆ.

'ವಿದ್ಯಾರ್ಥಿಗಳು ಕಾಲೇಜು 'ಅವ್ಯವಸ್ಥೆ'ಗೆ ಚಂದಾದಾರರಾಗಲು ಬಲವಂತಪಡಿಸಲಾಗಿದೆ. ಆಹಾರದಲ್ಲಿ ಜಿರಳೆಗಳು, ನೊಣಗಳು, ಕೈ ತೊಳೆಯುವ ಕೊರತೆ ಇತ್ಯಾದಿಗಳನ್ನು ನಿರ್ಲಕ್ಷಿಸಬೇಕಾಗಿದೆ, ಆದರೆ ಇಲ್ಲಿನ ಊಟಗಳಲ್ಲಿ ಎಣ್ಣೆಗಿಂತ ಕಡಿಮೆ ಆಹಾರವಿರುತ್ತದೆ ಎಂಬ ವಿದ್ಯಾರ್ಥಿಗಳ ಪ್ರಮುಖ ದೂರುಗಳನ್ನು ಸಹ ನಿರ್ಲಕ್ಷಿಸುತ್ತಾರೆ' ಎಂದು ಗೋಯೆಲ್ ಬರೆದಿದ್ದಾರೆ. 
ಪೋಸ್ಟ್ 330K ವೀಕ್ಷಣೆಗಳನ್ನು ಪಡೆದಿದೆ.

ಹಾಸ್ಟೆಲ್ ಅಧಿಕಾರಿಗಳಿಗೆ ಯಾರಾದರೂ ಸಮಸ್ಯೆಯನ್ನು ವರದಿ ಮಾಡಿದಾಗ, ಅವರು ಆಹಾರ ವಿತರಣಾ ಅಪ್ಲಿಕೇಶನ್‌ಗಳಿಂದ ಆಹಾರವನ್ನು ಆರ್ಡರ್ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಆರೋಪವನ್ನು ಹೊರಿಸುತ್ತಾರೆ ಎಂದು ಶಾಶ್ವತ್ ಗೋಯೆಲ್ ಬರೆದಿದ್ದಾರೆ. 

'ವಿದ್ಯಾರ್ಥಿಗಳು ಅನಾರೋಗ್ಯದ ಬಗ್ಗೆ ವರದಿ ಮಾಡಿದಾಗ, ಹಾಸ್ಟೆಲ್ ಮತ್ತು ಆರೋಗ್ಯ ಅಧಿಕಾರಿಗಳು ಸ್ವಿಗ್ಗಿ ಝೊಮಾಟೊದಿಂದ ಆಹಾರ ತರಿಸಿಕೊಂಡಿದ್ದನ್ನೇ ಕಾರಣವಾಗಿ ದೂಷಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳು ವರದಿ ಮಾಡುವ ಪ್ರಯತ್ನವನ್ನು ಸಹ ನಿಲ್ಲಿಸಿದ್ದಾರೆ' ಎಂದಿದ್ದಾರೆ. 

ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ.. ಈ ನಟಿಯರ ಮಾಡೆಲಿಂಗ್ ದಿನಗಳ ಸಂಬಳ ಎಷ್ಟಿತ್ತು?
 

ಇದು ಪ್ರತ್ಯೇಕ ಘಟನೆಯಲ್ಲ ಎಂದು ಪ್ರಸ್ತಾಪಿಸಿದ ಶಾಶ್ವತ್ ಗೋಯೆಲ್, ಕಳೆದ ವರ್ಷ ಹಾಸ್ಟೆಲ್ ಆವರಣದಲ್ಲಿ ಕಲುಷಿತ ನೀರಿನಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟೈಫಾಯಿಡ್‌ನಿಂದ ಅಸ್ವಸ್ಥರಾಗಿದ್ದರು.ಬಾಲಕರ ಹಾಸ್ಟೆಲ್ ವಾರ್ಡನ್ ಪರೀಕ್ಷೆಗೆ ಒಳಗಾಗದಂತೆ ವಿದ್ಯಾರ್ಥಿಗಳನ್ನು ಬೆದರಿಸಿದರು, ರೋಗಲಕ್ಷಣಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸಕ್ರಿಯವಾಗಿ ಹರಡಿದರು ಎಂದೂ ದೂರಿದ್ದಾರೆ. 

ಶಾಶ್ವತ್ ಗೋಯೆಲ್ ಅವರ ಸ್ಟ್ರಿಂಗ್ ಅನ್ನು ಮರುಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರು ಹೀಗೆ ಬರೆದಿದ್ದಾರೆ, 'ಐಐಟಿ ದೆಹಲಿಯ ಪದವೀಧರನಾಗಿ, ನಮ್ಮ "ಉನ್ನತ" ಸಂಸ್ಥೆಗಳು ಹೇಗೆ ವಿದ್ಯಾರ್ಥಿಗಳನ್ನು ವಿಫಲಗೊಳಿಸುತ್ತಿವೆ ಎಂಬುದನ್ನು ನಾನು ನೇರವಾಗಿ ನೋಡಿದ್ದೇನೆ. ಹೈದರಾಬಾದ್ ಐಐಐಟಿಯಲ್ಲಿನ ಸಮಸ್ಯೆಗಳು ಮಂಜುಗಡ್ಡೆಯ ತುದಿಯಷ್ಟೇ ಆಗಿದೆ. ಇದು ಸಮಯ. ನಮ್ಮ ಐಐಟಿ ವ್ಯವಸ್ಥೆಯೊಳಗಿನ ಕೊಳಕನ್ನು ಬಹಿರಂಗಪಡಿಸಿ' ಎಂದು ಬರೆದಿದ್ದಾರೆ

ದೇಶದ ಪ್ರಮುಖ ವಿದ್ಯಾಸಂಸ್ಥೆಯಲ್ಲಿ ಓದುವ ಜಾಣ ವಿದ್ಯಾರ್ಥಿಗಳು ಎದುರಿಸಬೇಕಾದ ಈ ಅವ್ಯವಸ್ಥೆ ಖಂಡನೀಯ. 

ಇನ್ಸ್ಟಿಟ್ಯೂಟ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

Latest Videos
Follow Us:
Download App:
  • android
  • ios