* ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಇತರ ಅಧಿಕಾರಿಗಳು* ರೇಸ್‌ ಟ್ರ್ಯಾಕ್‌ ಮೇಲೆ ಪವಾರ್‌ ಕಾರು* ಎನ್‌ಸಿಪಿ ನಾಯಕನ ನಡೆಗೆ ಸಚಿವ ಕಿರಿಣ್‌ ರಿಜಿಜು, ಅನೇಕರ ಆಕ್ಷೇಪ

ಪುಣೆ(ಜೂ.29): ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಇತರ ಅಧಿಕಾರಿಗಳು ರೇಸ್‌ ಟ್ರ್ಯಾಕ್‌ ಮೇಲೆಯೇ ಕಾರನ್ನು ಪಾರ್ಕ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಶನಿವಾರ ಶರದ್‌ ಪವಾರ್‌ ಮಹಾರಾಷ್ಟ್ರದ ಕ್ರೀಡಾ ಸಚಿವ ಸುನಿಲ ಕೇದಾರ್‌ ಅವರ ಜೊತೆಗೂಡಿ ಶಿವ ಛತ್ರಪತಿ ಕ್ರೀಡಾಂಗಣದ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದರು. ಆದರೆ, ಕಾರನ್ನು ಹೊರಗೆ ನಿಲ್ಲಿಸುವ ಬದಲು ನೇರವಾಗಿ ಕ್ರೀಡಾಗಣದ ಒಳಗೆ ಒಯ್ಯಲಾಗಿತ್ತು. ಇದರಿಂದ ರೇಸ್‌ ಟ್ರ್ಯಾಕ್‌ಗೆ ಹಾನಿ ಆಗಿದೆ ಎಂದು ಆರೋಪಿಸಲಾಗಿದೆ.

Scroll to load tweet…

ಪವಾರ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಕ್ರಿಡಾ ಸಚಿವ ಕಿರಣ್‌ ರಿಜಿಜು, ದೇಶದಲ್ಲಿ ಕ್ರೀಡೆ ಮತ್ತು ಕ್ರೀಡೆಗೆ ಅಗೌರವ ತೋರುತ್ತಿರುವುದು ವೈಯಕ್ತಿಕವಾಗಿ ತಮಗೆ ನೋವುಂಟು ಮಾಡಿದೆ ಎಂದಿದ್ದಾರೆ. ಘಟನೆ ಬಗ್ಗೆ ಕ್ಷಮೆ ಯಾಚಿಸಿರುವ ಕ್ರೀಡಾಂಗಣದ ಅಧಿಕಾರಿಗಳು, ಪವಾರ್‌ ಅವರು ನಡೆದುಕೊಂಡು ಬರಲು ಸಾಧ್ಯವಾದ ಕಾರಣ ಕಾರನ್ನು ಒಳಗೆ ತರಲು ಅನುಮತಿ ಕೋರಿದ್ದರು ಎಂದು ಹೇಳಿದ್ದಾರೆ.