ದೇಶದ ಹಲವೆಡೆ ರಾಮ ನವಮಿ ಆಚರಣೆಗೆ ಅಡ್ಡಿಪಡಿಸಿದ, ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿದೆ. ಆದರೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಿಕ್ಕ ಸಿಕ್ಕ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಮೆರವಣಿಗೆ ಮೇಲೆ ಕಲ್ಲುತೂರಾಟ, ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ.

ಕೋಲ್ಕತಾ(ಮಾ.30): ದೇಶಾದ್ಯಂತ ರಾಮ ನವಮಿ ಆಚರಿಸಲಾಗಿದೆ. ಆದರೆ ದೇಶದ ಹಲವು ಭಾಗಗಳಲ್ಲಿ ರಾಮ ನವಮಿ ಆಚರಣಗೆ ಅಡ್ಡಿಯಾಗಿದೆ. ಇದೀಗ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ಇದೇ ರಾಮ ನವಮಿ ಆಚರಣಗೆ ಹೊತ್ತಿ ಉರಿದಿದೆ. ರಾಮ ಮನವಿ ಶೋಭಾ ಯಾತ್ರೆ ಮುಸ್ಲಿಮ್ ವಲಯದಲ್ಲಿ ಸಂಚರಿಸುತ್ತಿದ್ದ ವೇಳೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಆಚರಣೆಗೆ ಅಡ್ಡಿ ಪಡಿಸಲಾಗಿದೆ. ಇದರ ಪರಿಣಾಮ ಹೌರಾ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಿದೆ. ರಾಮ ನವಮಿ ಮೆರವಣಿಗೆ ಅಡ್ಡಿ ಪಡಿಸಿದ ಕಿಡಿಗೇಡಿಗಳ ಗುಂಪು, ಬಳಿಕ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರ ಪರಿಣಾಮ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ರಾಮ ನವಮಿ ಹಿನ್ನಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಹತ್ವದ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಲೇ ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆಗೆ ಅಡ್ಡಿಯಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ರಾಜ್ಯದಲ್ಲಿ ರಾಮ ನವಮಿ ಆಚರಣೆಯನ್ನು ಶಾಂತಿಯುತವಾಗಿ ಮಾಡಬೇಕು. ಯಾವುದೇ ಮೆರವಣಿಗೆಯನ್ನು ಮುಸ್ಲಿಮ್ ಏರಿಯಾದಲ್ಲಿ ಮಾಡಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಈ ಹೇಳಿಕೆಯಿಂದ ಪ್ರಚೋದನೆ ಪಡೆದ ಹಲವರು ರಾಮ ನವಮಿ ಶೋಭಯಾತ್ರೆ ಮೇಲೆ ಕಲ್ಲು ಹಾಗೂ ಇಟ್ಟಿಗೆ ತೂರಿದ್ದಾರೆ. ಇದರಿಂದ ಹಿಂಸಾಚಾರ, ಗಲಭೆ ಶುರುವಾಗಿದೆ. 2022ರಲ್ಲಿ ರಾಮ ನವಮಿ ಆಚರಣೆ ವೇಳೆ ಹೌರಾದಲ್ಲಿ ಇದೇ ರೀತಿ ಹಿಂಸಾಚಾರ ನಡೆದಿತ್ತು.

ರಾಮ ನವಮಿ ಶೋಭ ಯಾತ್ರೆ ಮೇಲೆ ಕಲ್ಲು ತೂರಾಟ, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದ ಪೊಲೀಸ್!

ಸದ್ಯ ಹೌರಾ ಜಿಲ್ಲೆಯ ಹಲವು ಭಾಗದಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪರಿಸ್ಥತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ರಾಮ ನವಮಿ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದೆ. ಯಾತ್ರೆಯಲ್ಲಿ ಪಾಲ್ಗೊಂಡ ಹಲವು ಭಕ್ತರಿಗೆ ಗಾಯಗಳಾಗಿವೆ. ಕಲ್ಲು ಹಾಗೂ ಇಟ್ಟಿಗೆ ಮೂಲಕ ದಾಳಿ ನಡೆಸಿದ ಕಾರಣ ಹಲವರು ಗಾಯಗೊಂಡಿದ್ದಾರೆ.

Scroll to load tweet…

ಘಟನೆಯನ್ನು ಬಿಜೆಪಿ ಖಂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಹಿಂದೂಗಳ ಒಂದೇ ಒಂದು ಹಬ್ಬವನ್ನು ಸರಿಯಾಗಿ ಆಚರಿಸಲು ಅವಕಾಶ ನೀಡುತ್ತಿಲ್ಲ. ಮಮತಾ ಬ್ಯಾನರ್ಜಿ ಹೇಳಿಕೆಯಿಂದಲೇ ಈ ಗಲಭೆ ಸೃಷ್ಟಿಯಾಗಿದೆ. ಮುಸ್ಲಿಮ್ ಏರಿಯಾದಲ್ಲಿ ಮೆರವಣಿಗೆ ಮಾಡಬೇಡಿ ಅಂದರೆ ಏನರ್ಥ? ಹಿಂದೂ ಏರಿಯಾ, ಮುಸ್ಲಿಮ್ ಏರಿಯಾ ಎಂದು ವರ್ಗೀಕರಣ ಮಾಡಿದವರು ಯಾರು? ಹಿಂದೂಗಳ ತಮ್ಮ ಹಬ್ಬ ಹಾಗೂ ಮೆರವಣಿಗೆ ಮಾಡಲು ಅಡ್ಡಿಯಾಕೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಹೇಳಿದ್ದಾರೆ.

ಹೌರಾದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ನೇರ ಕಾರಣ. ಅವರ ಹೇಳಿಕಗಳೇ ಈ ಗಲಭೆಗೆ ಕುಮ್ಮುಕ್ಕು ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಪ್ರತಿ ಹಬ್ಬಕ್ಕೂ ಈ ರೀತಿ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭರ್ಜರಿಯಾಗಿ ನಡೆದ ರಾಮನವಮಿ ಶೋಭಾಯಾತ್ರೆ!

ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಗುಜರಾತ್‌ನ ವಡೋದರಲಲ್ಲಿ ಸಾಗುತ್ತಿದ್ದ ರಾಮ ನವಮಿ ಶೋಭಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ವಲಯ ಪ್ರವೇಶಿಸುತ್ತಿದ್ದಂತೆ ಮೊದಲೇ ಸಜ್ಜಾಗಿದ್ದ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹಲವರಿಗೆ ಗಾಯವಾಗಿದೆ.