ಆಫಿಸ್‌ನಲ್ಲಿಯೇ ಕುಚ್‌ ಕುಚ್‌; ಮುತ್ತಿನಮಳೆ ಸುರಿಸೋ ಆತುರದಲ್ಲಿ ಕ್ಯಾಮೆರಾ ಇರೋದನ್ನೇ ಮರೆತ್ರು!

ಕಚೇರಿಯ ಕೋಣೆಯೊಂದರಲ್ಲಿ ಉದ್ಯೋಗಿಗಳಿಬ್ಬರ ರೊಮ್ಯಾನ್ಸ್ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 2 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Male and Female colleagues romance caught in cctv camera

Couple Video: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿಗಳಿಬ್ಬರ ರೊಮ್ಯಾನ್ಸ್ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ಕಚೇರಿಯ ಕೋಣೆಯೊಂದರಲ್ಲಿ ಪುರುಷ ಮತ್ತು ಮಹಿಳಾ ಉದ್ಯೋಗಿ ಅಪ್ಪಿಕೊಂಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ  ವಿಡಿಯೋವನ್ನು ಪ್ರಮೋಷನ್ ಪಡೆಯಲು ಮಹಿಳೆಯರು ಈ ರೀತಿ  ಮಾಡ್ತಾರೆ ಎಂಬ ಶೀರ್ಷಿಕೆಯಡಿಯಲ್ಲಿ ಎಕ್ಸ್  ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ 2 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ವೈರಲ್ ಆಗಿರುವ ವಿಡಿಯೋವನ್ನು  @DeepsBDJ35 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಂದಿನ ಜಗತ್ತು ತುಂಬಾ ಶಾರ್ಟ್‌ಕಟ್ ಎಂಬುದಕ್ಕೆ ಇದುವೇ ಉದಾಹರಣೆಯಾಗಿದೆ.  ಬಹಳಷ್ಟು ಜನರು ತಮ್ಮ ಮೇಲಾಧಿಕಾರಿಗಳಿಗೆ ಬಕೆಟ್ ಹಿಡಿಯುವ ಕೆಲಸ ಮಾಡ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ 24 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿದ್ದು, 500ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. 1 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಇದನ್ನೂ ಓದಿ: ಸೋದರನಿಂದ ಗರ್ಭಿಣಿಯಾದೆ, ಹಾಗಾಗಿ ಮದ್ವೆ ಆದ್ವಿ; ದೇವಸ್ಥಾನದಲ್ಲಿ ವಿಷಯ ರಿವೀಲ್ ಮಾಡಿದ ಯುವತಿ

ವೈರಲ್ ವಿಡಿಯೋದಲ್ಲಿ ಏನಿದೆ?
ಕೋಣೆಯೊಂದರಲ್ಲಿ  ಮಹಿಳಾ ಉದ್ಯೋಗಿ ಕೆಲಸ ಮಾಡುತ್ತಿರುತ್ತಾಳೆ.  ಈ ವೇಳೆ ಅಲ್ಲಿಗೆ ಬರೋ ಆಕೆಯ ಸಹೋದ್ಯೋಗಿ, ಕುರ್ಚಿ ಹಿಂದಕ್ಕೆ ಎಳೆದು ಮಹಿಳೆಯನ್ನು ಕೆಳಗೆ ಬೀಳಿಸುತ್ತಾನೆ. ನಂತರ ಆಕೆಯನ್ನು ಮೇಲೆತ್ತಿ ಅಪ್ಪಿಕೊಂಡು ಮುತ್ತಿನ ಮಳೆಯನ್ನೇ  ಸುರಿಸುತ್ತಾನೆ. ನಂತರ ಯಾರಾದ್ರೂ ಬರುತ್ತಿದ್ದಾರೆಯೇ ಎಂದು ಬಾಗಿಲು ತೆಗೆದು ಹೊರಗೆ ನೋಡುತ್ತಾನೆ. ರೊಮ್ಯಾನ್ಸ್ ವೇಳೆ ಮತ್ತೊಮ್ಮೆ ಮಹಿಳೆಯನ್ನು ಕೆಳಗೆ ಬೀಳಿಸುತ್ತಾನೆ. ಈ ಎಲ್ಲಾ ದೃಶ್ಯಗಳು ಆ  ಕೋಣೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಈ ವಿಡಿಯೋ ನೋಡಿದ ಕೆಲವರು ಇದು ಇಂದಿನ ಸತ್ಯ ಎಂದು ಹೇಳಿದ್ರೆ, ಇಬ್ಬರ  ಖಾಸಗಿ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕುರಿತು ಮಹಿಳಾ  ಸಂಘಟನೆ  ಸಹ ಪ್ರತಿಕ್ರಿಯಿಸಿದೆ. ಈ ರೀತಿಯ ವಿಡಿಯೋಗಳು ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆಯನ್ನುಂಟು ಮಾಡುತ್ತವೆ. ಇಂತಹ ಅನೈತಿಕ ನಡವಳಿಕೆ ಅಥವಾ ಸಂಬಂಧವನ್ನು ಒಪ್ಪಿಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮಹಿಳಾ ಸಂಘಟನೆ ಹೇಳಿದೆ. ಆದ್ರೆ  ಈ ಘಟನೆ  ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: 17 ಪತ್ನಿಯರ ಮುದ್ದಿನ ಗಂಡ, 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್; ನಾನು ಗ್ಲೋಬರ್‌ ಫಾದರ್ ಎಂದ ಸೂಪರ್ ಡ್ಯಾಡಿ

Latest Videos
Follow Us:
Download App:
  • android
  • ios