* ಲಖೀಂಪುರ ಹಿಂಸಾಚಾರಕ್ಕೆ ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ* ರೈತರ ಮೇಲೆ ಹರಿದಿತ್ತು ಎಸ್‌ಯುವಿ ಕಾರು* ಲಖೀಂಪುರ ಹಿಂಸಾಚಾರದ ಮತ್ತೊಂದು ಶಾಕಿಂಗ್ ವಿಡಿಯೋ ಬಯಲು

ಲಖೀಂಪುರ(ಅ.06): ಲಖೀಂಪುರದಲ್ಲಿ(Lakhimpur Kheri) ನಡೆದ ಹಿಂಸಾಚಾರ(Violence) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಿನ್ನೆಯಷ್ಟೇ ರೈತರ ಮೇಲೆ ಕಾರು ಹರಿದುಹೋಗಿದ್ದ ದೃಶ್ಯವಿರುವ ವಿಡಿಯೋ ವೈರಲ್ ಆಗಿತ್ತು. ಆದರೀಗ ಆ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ SUV ಹರಿದ ಭುಗಿಲೆದ್ದ ಹಿಂಸಾಚಾರದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿರುವ ದೃಶ್ಯಗಳು ಇದರಲ್ಲಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

ಈ ವಿಡಿಯೋದಲ್ಲಿ ರಕ್ತದಿಂದ ಕೂಡಿದ ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತಿದ್ದು, ಪೊಲೀಸ್ ಅಧಿಕಾರಿ(Police Officer) ತನ್ನ ಕೈಯಲ್ಲಿ ಮೈಕ್ ಹಿಡಿದು ಆತನನ್ನು ವಿಚಾರಿಸುತ್ತಿರುವುದನ್ನು ನೊಡಬಹುದಾಗಿದೆ. ಲಕ್ನೋದ ಚಾರ್ಬಾಗ್ ಪ್ರದೇಶದ ನಿವಾಸಿಯಾದ ಈ ವ್ಯಕ್ತಿಗೆ ಪೋಲಿಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಗಾಯಗೊಂಡ ವ್ಯಕ್ತಿ ತಾನು ಕಪ್ಪು ಫಾರ್ಚೂನರ್‌ನಲ್ಲಿ ಸವಾರಿ ಮಾಡುತ್ತಿದ್ದೆನೆಂದು ಹೇಳಿದ್ದು, ಅದರಲ್ಲಿ ಐದು ಜನರಿದ್ದರು ಎಂದಿದ್ದಾನೆ. ಅಲ್ಲದೇ ಕಾರಿನ ಹಿಂದೆ ಕುಳಿತಿದ್ದ ವ್ಯಕ್ತಿ ಈ ಕಾರು ಕಾಂಗ್ರೆಸ್‌ನ ಮಾಜಿ ಸಂಸದರಿಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾರೆ. ಬಳಿಕ ಆ ವ್ಯಕ್ತಿ ಕಾರಿನ ಪ್ಲೇಟ್ ನಂಬರ್ ನೀಡಿದ್ದಾನೆ.

"

NDTV ಈ ಬಗ್ಗೆ ವರದಿ ಪಗ್ರಕಟಿಸಿದ್ದು, ವೀಡಿಯೋದಲ್ಲಿ, ಪೋಲಿಸ್ ಗಾಯಗೊಂಡ ವ್ಯಕ್ತಿ ಬಳಿ, 'ನಿಮ್ಮ ವಾಹನದ ಎದುರು ಇದ್ದ ಮತ್ತೊಂದು ಕಾರು ಯಾರದ್ದು?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗಾಯಗೊಂಡ ವ್ಯಕ್ತಿ ಮೊದಲು, 'ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ. ಅಲ್ಲದೇ ಆ ವಾಹನದಲ್ಲಿ 'ಭಯ್ಯಾಜಿ' ಜೊತೆಗಿದ್ದೆ ಎಂದೂ ಹೇಳಿದ್ದಾನೆ. 

ಗಾಯಗೊಂಡ ವ್ಯಕ್ತಿ ಭಯ್ಯಾ ಎಂಬ ಪದವನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾರನ್ನು ಸಂಬೋಧಿಸಿ ಬಳಸಿದ್ದಾರೆನ್ನಲಾಗಿದೆ. ಈ ಹಿಂದೆ, ಮತ್ತೊಂದು ವೈರಲ್ ವಿಡಿಯೋದಲ್ಲಿ, ಮಹೀಂದ್ರಾ ಎಸ್ಯುವಿ ವಾಹವನ್ನು ರೈತರ ಮೇಲೆ ಹರಿಸಿದ ದೃಶ್ಯವಿತ್ತು. ಆ ಕಾರಿನ ಹಿಂದೆ ಕಪ್ಪು ಫಾರ್ಚೂನರ್ ಕೂಡ ಇತ್ತು.