Asianet Suvarna News Asianet Suvarna News

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

* ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್‌

* ಉತ್ತರ ಪ್ರದೇಶದ ಲಖೀಂಪುರ ಖೇರಿ ದುರ್ಘಟನೆಯ ದೃಶ್ಯಾವಳಿ ಬಹಿರಂಗ

* ಹಠಾತ್‌ ಮೈಮೇಲೆರಗಿದ ಕಾರು

* ಕಾರಲ್ಲಿ ಮಗ ಇದ್ದರೆ ರಾಜೀನಾಮೆ: ಕೇಂದ್ರ ಸಚಿವ ಮಿಶ್ರಾ

* ಕಾರಲ್ಲಿ ಮಿಶ್ರಾ ಪುತ್ರ ಇದ್ದ, ಗುಂಡು ಹಾರಿಸಿದ: ಎಫ್‌ಐಆರ್‌

 

Lakhimpur Kheri FIR mentions BJP minister son Ashish Mishra firing SUVs crushing protesting farmers pod
Author
Bangalore, First Published Oct 6, 2021, 7:30 AM IST

ಲಖನೌ(ಅ 06): ಉತ್ತರ ಪ್ರದೇಶದ(Uttar Pradesh) ಲಖೀಂಪುರ ಖೇರಿಯಲ್ಲಿ(Lakhimpur Kheri) ರೈತರ ಮೇಲೆ ಹರಿದಿದೆ ಎನ್ನ​ಲಾದ ಎಸ್‌​ಯುವಿ(SUV) ಕಾರಿ​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ನಡು​ವೆಯೇ ಘಟ​ನೆಯ ಎಫ್‌​ಐ​ಆ​ರ್‌​ನಲ್ಲಿ(FIR) ‘ರೈತರ ಮೇಲೆ ಹರಿದ ಕಾ​ರಿ​ನಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ(Ajay Mishra) ಮಗ ಇದ್ದರು. ಅವರು ರೈತರ ಮೇಲೆ ಗುಂಡು ಕೂಡ ಹಾರಿ​ಸಿ​ದ​ರು(Firing)’ ಎಂದು ಉಲ್ಲೇಖಿ​ಸ​ಲಾ​ಗಿದೆ. ಇದು ದೊಡ್ಡ ರಾಜ​ಕೀಯ ಬಿರು​ಗಾಳಿ ಎಬ್ಬಿ​ಸಿ​ದೆ.

25 ಸೆಕೆಂಡಿನ ವಿಡಿಯೋ ಕ್ಲಿಪ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಎಸ್‌ಯುವಿ ಕಾರೊಂದು ಗುದ್ದಿಕೊಂಡು ಹೋಗಿದೆ. ಈ ಸಮಯದಲ್ಲಿ ಕೆಲವರು ಕಾರಿನ ಅಡಿಗೆ ಸಿಲುಕಿಕೊಂಡರೆ, ಹಲವರು ತಪ್ಪಿಸಿಕೊಳ್ಳಲು ಓಡಿದ್ದಾರೆ.

"

‘ಈ ಕಾರಿನಲ್ಲಿ ಕೇಂದ್ರ ಮಂತ್ರಿ ಅಜಯ್‌ ಕುಮಾರ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ(Ashish Mishra) ಹಾಗೂ ಅವರ ಸಹ​ಚ​ರರು ಇದ್ದ​ರು. ಕಾರು 100 ಕಿ.ಮೀ. ವೇಗ​ದಲ್ಲಿ ನುಗ್ಗಿ​ಬಂತು. ಇದು ನಮ್ಮ ಕೊಲೆಗೆ ನಡೆದ ಸಂಚಾ​ಗಿ​ತ್ತು’ ಎಂದು ಗಾಯಾಳು ರೈತ ತೇಜಿಂದರ್‌ ವಿರ್ಕ್ ಆರೋ​ಪಿ​ಸಿ​ದ್ದಾ​ರೆ. ದೃಶ್ಯ​ದಲ್ಲಿ ಕಾರು ಚಾಲನೆ ಮಾಡು​ತ್ತಿ​ದ್ದ​ವರು ಯಾರು ಎಂಬ ಸ್ಪಷ್ಟತೆ ಇಲ್ಲ. ಆದರೆ ಎಫ್‌ಐ​ಆ​ರ್‌​ನಲ್ಲಿ ‘ಕಾ​ರಲ್ಲಿ ಮಿಶ್ರಾ ಪುತ್ರ ಆಶಿಷ್‌ ಇದ್ದ​ರು’ ಎಂದು ಬರೆ​ದಿ​ರು​ವುದು ಈ ದೃಶ್ಯಕ್ಕೆ ಪುಷ್ಟಿನೀಡು​ವಂತಿ​ದೆ.

ವಿಡಿಯೋ ಬಗ್ಗೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಪ್ರತಿ​ಕ್ರಿ​ಯಿ​ಸಿದ್ದು, ‘ನನ್ನ ಮಗನ ವಿರುದ್ಧ ಒಂದೇ ಒಂದು ಸಾಕ್ಷ್ಯ ದೊರಕಿದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಆ ಕಾರು ನಮ್ಮದೇ ಹೌದು. ಆದರೆ ಅದರಲ್ಲಿ ನನ್ನ ಮಗ ಇರಲಿಲ್ಲ’ ಎಂದು ತಿಳಿಸಿದ್ದಾರೆ.

ಈ ನಡುವೆ, ವಿಡಿ​ಯೋ​ವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಟ್ವೀಟ​ರ್‌​ನಲ್ಲಿ ಹಂಚಿ​ಕೊಂಡಿದ್ದು, ತಪ್ಪಿ​ತ​ಸ್ಥರ ವಿರುದ್ಧ ಕ್ರಮಕ್ಕೆ ಆಗ್ರ​ಹಿ​ಸಿ​ದ್ದಾ​ರೆ.

3 ರೈತರ ಅಂತ್ಯ​ಕ್ರಿ​ಯೆ:

ಕಾರು ಹರಿದು ಮೃತ​ಪಟ್ಟಮೂವರು ರೈತರ ಅಂತ್ಯ​ಕ್ರಿಯೆ ಮಂಗ​ಳ​ವಾರ ನಡೆ​ಯಿತು. ಆದರೆ ನಾಲ್ಕನೇ ರೈತನ ಕುಟುಂಬ​ದ​ವರು ಪೋಸ್ಟ್‌ ಮಾರ್ಟಂನಲ್ಲಿ ಅಕ್ರಮ ನಡೆ​ದಿದೆ ಎಂದು ಆರೋ​ಪಿ​ಸಿದ್ದು, 2ನೇ ಬಾರಿ ಮರ​ಣೋ​ತ್ತರ ಪರೀ​ಕ್ಷೆಗೆ ಆಗ್ರ​ಹಿ​ಸಿ​ದ್ದಾರೆ. ಬೇಡಿಕೆ ಈಡೇ​ರಿಕೆವರೆ​ಗೆ ಅಂತ್ಯ​ಕ್ರಿಯೆ ನೆರ​ವೇ​ರಿ​ಸಲು ನಿರಾ​ಕ​ರಿ​ಸಿ​ದ್ದಾ​ರೆ.

Close

Follow Us:
Download App:
  • android
  • ios