ಭಾರತದಲ್ಲಿದ್ದ ಮಾಜಿ ಯುಎಸ್ ರಾಯಭಾರಿ ಡೇವಿಡ್ ಮುಲ್ಫೋರ್ಡ್, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅವರ ಹಳೆಯ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ವೈರಲ್‌ ಆಗಿದೆ. 

ನವದೆಹಲಿ (ಜ.2): ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಭಾರತವು ದೊಡ್ಡ ಪ್ರತಿಕ್ರಿಯೆ ನೀಡಿದ ವರ್ಷಗಳ ನಂತರ, 'ಸರ್ಜಿಕಲ್ ಸ್ಟ್ರೈಕ್'ಗಳ ಮೂಲಕ ತನ್ನ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಂಡಿದೆ..' ಎನ್ನುವ ಭಾರತದಲ್ಲಿನ ಮಾಜಿ ಯುಎಸ್ ರಾಯಭಾರಿ ಡೇವಿಡ್ ಮುಲ್ಫೋರ್ಡ್ ಅವರ ಹಳೆಯ ವೀಡಿಯೊ ಮತ್ತೆ ವೈರಲ್‌ ಆಗಿದೆ. ಪಾಕಿಸ್ತಾನದ ಭಯೋತ್ಪಾದನೆಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಅವರು ಶ್ಲಾಘಿಸಿದ್ದಾರೆ. ಪುಂಡನನ್ನು ತಡೆಯಬೇಕೆಂದರೆ, ಆತನ ಮೂಗಿನ ಮೇಲೆ ಗುದ್ದಬೇಕು ಎಂದು ಅವರು ಹೇಳಿರುವ ಮಾತುಗಳು ಕೂಡ ವೈರಲ್‌ ಆಗಿದೆ. 2016 ಮತ್ತು 2019 ರಲ್ಲಿ, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳ ವಿರುದ್ಧ ಸಾಮಾನ್ಯವಾಗಿ "ಸರ್ಜಿಕಲ್ ಸ್ಟ್ರೈಕ್" ಎಂದು ಕರೆಯಲ್ಪಡುವ ಎರಡು ಮಹತ್ವದ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿತ್ತು.

ಮೊದಲ ಸರ್ಜಿಕಲ್ ಸ್ಟ್ರೈಕ್ ಸೆಪ್ಟೆಂಬರ್ 2016 ರಲ್ಲಿ ಉರಿಯ ಭಾರತೀಯ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾಗಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ 19 ಸೈನಿಕರ ಪ್ರಾಣ ಬಲಿಯಾಗಿತ್ತು. ಆ ಬಳಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರನ್ನು ತಟಸ್ಥಗೊಳಿಸಲು ಭಾರತೀಯ ಸೇನೆಯ ವಿಶೇಷ ಪಡೆಗಳು ನಿಯಂತ್ರಣ ರೇಖೆಯನ್ನು ದಾಟಿದವು. ಫೆಬ್ರವರಿ 2019 ರಲ್ಲಿ, ಮಾರಣಾಂತಿಕ ಪುಲ್ವಾಮಾ ದಾಳಿಯ ನಂತರ ಎರಡನೇ ಸರ್ಜಿಕಲ್ ಸ್ಟ್ರೈಕ್‌ಗಳು ನಡೆದವು, ಅಲ್ಲಿ ಆತ್ಮಹತ್ಯಾ ಬಾಂಬರ್ ಭಾರತೀಯ ಅರೆಸೈನಿಕ ಸಿಬ್ಬಂದಿಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡಿದ್ದ. ಮತ್ತೊಮ್ಮೆ, ಭಾರತವು ಪಾಕಿಸ್ತಾನದ ಭೂಪ್ರದೇಶದಲ್ಲಿ ಆಳವಾಗಿ ನೆಲೆಗೊಂಡಿರುವ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದನೆ ಯನ್ನು ನೆಲಸಮ ಮಾಡುವ ನಿರ್ಧಾರ ಮಾಡಿತ್ತು.

2016ರ ಅಕ್ಟೋಬರ್ 26 ರಂದು ರೈಸ್ ಯೂನಿವರ್ಸಿಟಿಯ ಬೇಕರ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ನಲ್ಲಿ ಮಾಡಿದ ಭಾಷಣದಲ್ಲಿ ಭಾರತದ ಮಾಜಿ ರಾಯಭಾರಿ ಡೇವಿಡ್ ಮುಲ್ಫೋರ್ಡ್, 2005ರ ಅದೇ ದಿನದಂದು ನಡೆದ ದೆಹಲಿಯ ಸರೋಜಿನಿ ಮಾರ್ಕೆಟ್‌ ಬಾಂಬಿಂಗ್‌ನ ಬಗ್ಗೆ ಮಾತನಾಡಿದ್ದರು. ಅಂದು ನಡೆದ ದಾಳಿಯಲ್ಲಿ 60ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. "ನಾನು 2005 ರಲ್ಲಿ ಅಕ್ಟೋಬರ್ 26 ರಂದು ಭಾರತದಲ್ಲಿದ್ದೆ. ಅಂದು ಸಂಜೆ ಪೋಷಕರೊಂದಿಗೆ ಮಾತನಾಡಲು ನಾನು ನವದೆಹಲಿಯ ಹೊರಗಿನ ಶಾಲೆಗೆ ಹೋಗಿದ್ದೆ. ಸರೋಜಿನಿ ಮಾರುಕಟ್ಟೆಯಲ್ಲಿ ದಾಳಿ ನಡೆದಿದೆ ಎಂದು ನನಗೆ ಫೋನ್ ಕರೆ ಬಂದಿತು. ಆ ರಾತ್ರಿ ಹೊಸದಿಲ್ಲಿಯಲ್ಲಿ 60 ಜನರು ಸಾವು ಕಂಡಿದ್ದರು' ಎಂದು ಮುಲ್ಫೋರ್ಡ್‌ ಹೇಳಿದ್ದಾರೆ.

ಕಾಶ್ಮೀರದಲ್ಲಿನ ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗೆ ಅಂತರಾಷ್ಟ್ರೀಯ ಗಮನ ಸೆಳೆಯುವಲ್ಲಿ ಸೀಮಿತ ಯಶಸ್ಸಿನಿಂದ ಪಾಕಿಸ್ತಾನದ ಹತಾಶೆಯೇ ದಾಳಿಯ ಹಿಂದಿನ ಪ್ರೇರಣೆಯಾಗಿತ್ತು ಎಂದು ಗುಪ್ತಚರ ತನಿಖೆಯ ಬಳಿಕ ಮುಲ್ಫೋರ್ಡ್ ಕಂಡುಕೊಂಡರು. ಇದು ಮುಂದುವರಿದು, ಕುಖ್ಯಾತ 2006 ಮುಂಬೈ ರೈಲು ಬಾಂಬ್ ಸ್ಫೋಟಗಳು ಮತ್ತು 2008 ರ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅಂತ್ಯಗೊಂಡಿತು.

ಬಳಿಕ ನಾವು ನಮ್ಮ ಗುಪ್ತಚರ ಮಾಹಿತಿಯನ್ನು ನೋಡಿ ಅದರಂತೆ ಪಾಲಿಸಿದೆವು. ಕಾಶ್ಮೀರದಲ್ಲಿ ತಾವು ಮಾಡುತ್ತಿರುವ ಭಯೋತ್ಪಾದಕ ದಾಳಿಗಳು ಯಾವುದೇ ರೀತಿಯಲ್ಲೂ ದೇಶದ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಅರ್ಥ ಮಾಡಿಕೊಂಡಿದ್ದರು. ಅದಕ್ಕಾಗಿ ಭಾರತದ ವಿವಿಧ ನಗರಗಳಲ್ಲಿ ದಾಳಿ ಮಾಡುವ ಪ್ಲ್ಯಾನ್‌ ರೂಪಿಸಿದ್ದರು. ಭಾರತದ ಎಲ್ಲಾ ಮಾರುಕಟ್ಟೆಗಳಲ್ಲಿ ದಾಳಿ ಮಾಡುವುದು ಅವರ ಉದ್ದೇಶವಾಗಿತ್ತು. ಮುಂಬೈ ರೈಲಿನಲ್ಲಿ ಹೋಟೆಲ್‌ಗಳ ಮೇಲೆ ಅವರು ದಾಳಿ ಮಾಡಿದ್ದರು ಎಂದು ಮುಲ್ಫೋರ್ಡ್ ಹೇಳಿದ್ದಾರೆ.

Scroll to load tweet…

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

ಆಗಿನ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರು ಪ್ರತಿದಾಳಿ ನಡೆಸಬೇಕೆ ಎನ್ನುವ ಗೊಂದಲದಲ್ಲಿದ್ದರು. ಭಯೋತ್ಪಾದಕ ಶಿಬಿರಗಳು ಖಾಲಿಯಾಗಿರುವುದರಿಂದ ಅಂತಹ ಕ್ರಮವು ಅಪರಾಧಿಗಳನ್ನು ಪರಿಣಾಮಕಾರಿ ಎನಿಸುವುದಿಲ್ಲ ಎಂಬ ನಂಬಿಕೆ ಅವರಲ್ಲಿ ಹುಟ್ಟುಕೊಂಡಿತು. ಇದಲ್ಲದೆ, ಇದು ಪರಮಾಣು ದಾಳಿಗೆ ಕಾರಣವಾಗಬಹುದು ಎನ್ನುವ ಆತಂಕವೂ ಇವರಲ್ಲಿತ್ತು.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ಕೊಟ್ಟಿಲ್ಲ: ಪ್ರೂಫ್‌ ಕೇಳಿದ ಕಾಂಗ್ರೆಸ್‌ ನಾಯಕ

"ಆ ಸಮಯದಲ್ಲಿ, ಮನಮೋಹನ್ ಸಿಂಗ್ ಅವರ ಸರ್ಕಾರವು ಪ್ರತಿದಾಳಿ ಮಾಡಬೇಕೇ ಅಥವಾ ಬೇಡವೇ ಎಂದು ಚರ್ಚಿಸಿತು. ಪ್ರತಿದಾಳಿ ಮಾಡಿದರೆ ಏನೂ ಲಾಭವಿಲ್ಲ ಎಂದು ಅವರು ಅರಿತುಕೊಂಡಿದ್ದರು. ಭಯೋತ್ಪಾದಕ ಶಿಬಿರಗಳು ಈಗ ಖಾಲಿಯಾಗಿವೆ, ನೀವು ಏನನ್ನೂ ಸಾಧಿಸುವುದಿಲ್ಲ. ಇದನ್ನು ಇನ್ನಷ್ಟು ಪ್ರಚೋದಿಸಿದರೆ, ಎರಡೂ ದೇಶಗಳ ನಡುವಿನ ಪರಮಾಣು ಯುದ್ಧಕ್ಕೆ ಕಾರಣವಾಗಬಹುದು. ಈ ನಿರ್ಧಾರದ ಸಮಯದಲ್ಲಿ ನಾನು ಅವರೊಂದಿಗೆ ಇದ್ದೆ ಎಂದು ಮುಲ್ಫೋರ್ಡ್ ಹೇಳಿದ್ದಾರೆ. ಆದರೆ, 2016ರಲ್ಲಿ ಮೋದಿ ನೇತೃತ್ವದಲ್ಲಿ ದೇಶದ ಆಲೋಚನೆ ಬದಲಾಗಿತ್ತು. ಪುಂಡನಿಗೆ ಅವನ ಮಾತಿನಲ್ಲಿಯೇ ಉತ್ತರ ನೀಡಬೇಕು ಎನ್ನುವುದು ಮೋದಿ ಇರಾದೆಯಾಗಿತ್ತು. ಮೋದಿ ಅವರ ಅಪ್ರೋಚ್‌ತಮಗೆ ಇಷ್ಟವಾಯಿತು ಎಂದು ಹೇಳಿದ್ದಾರೆ.