ಭಾರತದ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೆಟ್ ಆಳ್ವ ಕಣದಲ್ಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭಗೊಳ್ಳಲಿದ್ದು, ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ. ಯಾರಿಗೆ ಒಲಿಯಲಿದೆ ಭಾರತದ ಉಪ ರಾಷ್ಟ್ರಪತಿ ಪಟ್ಟ?
ನವದೆಹಲಿ(ಆ.06): ಉಪ ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದೆ. ಇಂದು(ಆ.06) ಬೆಳಗ್ಗೆ 11 ಗಂಟೆಯಿಂದ ಮತದಾನ ಆರಂಭಗೊಳ್ಳಲಿದೆ. ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಬಳಿತ ಮತ ಎಣಿಕೆ ಆರಂಭಗೊಳ್ಳಲಿದೆ. ಎನ್‌ಡಿಎ ಅಭ್ಯರ್ಥಿ ಜಗದೀಪ್ ದನಕರ್ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವ ಕಣದಲ್ಲಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. 16ನೇ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆ ಬಹುತೇಕ ಖಚಿತಗೊಂಡಿದೆ. ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರವದಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ನೂತನ ರಾಷ್ಟ್ರಪತಿ ಆ.11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಜೊತೆಗೆ ಪ್ರತಿಪಕ್ಷಗಳ ಒಕ್ಕೂಟ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಒಡೆದ ಮನಯಾಗಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಗರೆಟ್ ಆಳ್ವ ಹೆಸರು ಘೋಷಿಸುವ ಮುನ್ನ ತಮ್ಮ ಬಳಿ ಚರ್ಚಿಸಿಲ್ಲ ಎಂದು ಕಾಂಗ್ರೆಸ್ ಹಾಗೂ ಪ್ರತಿ ಪಕ್ಷಗಳ ಒಕ್ಕೂಟದ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಇಷ್ಟೇ ಅಲ್ಲ ತೃಣಮೂಲ ಕಾಂಗ್ರೆಸ್ ಆಳ್ವಾಗೆ ಬೆಂಬಲ ಸೂಚಿಸುವುದಿಲ್ಲ ಎಂದಿದ್ದರು.
ಆಮ್ ಆದ್ಮಿ ಪಾರ್ಟಿ, ತೆಲಂಗಾಣ ರಾಷ್ಟ್ರ ಸಮಿತಿ(TRS), ಜಾರ್ಖಂಡ್ ಮುಕ್ತಿ ಮೋರ್ಚಾ(JMM) ಪಕ್ಷಗಳು ಈಗಾಗಲೇ ಮಾರ್ಗರೆಟ್ ಆಳ್ವಾಗೆ ಬೆಂಬಲ ಸೂಚಿಸಿದೆ. ಇತ್ತ ಜಗದೀಪ್ ದನಕರ್‌ಗೆ ಎನ್‌ಡಿಎ ಒಕ್ಕೂಟಗಳಾದ ಬಿಜೆಪಿ, ಜನತಾದಳ(U), YSRCP, ಶಿವಸೇನಾ, AIADMK ಬೆಂಬಲ ಸೂಚಿಸಿದೆ. ಬಿಜೆಪಿಯ ಲೋಕಸಭಾ 303 ಸದಸ್ಯರ ಬಲ, ರಾಜ್ಯಸಭೆಯ 91 ಸದಸ್ಯರ ಮತಗಳು ಹಾಗೂ ಮಿತ್ರ ಪಕ್ಷಗಳ ಮತಗಳು ಸೇರಿದಟೆ ಸರಿಸುಮಾರು 500 ಮತಗಳು ಜಗದೀಪ್ ಧನಕರ್ ಬೀಳಲಿವೆ. ಇತ್ತ ಮಾರ್ಗರೆಟ್ ಆಳ್ವ ಪರ 200 ಮತಗಳು ಸಿಗುವ ಸಾಧ್ಯತೆ ಇದೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 788 ಮತಗಳು ಚಲಾವಣೆಯಾಗಲಿದೆ. ಇತ್ತೀಚಿನ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಸದಸ್ಯರಿಂದ ಎನ್‌ಡಿಎ ಅಭ್ಯರ್ಥಿಗೆ ಸಿಕ್ಕ ಭರ್ಜರಿ ಬೆಂಬಲವನ್ನು ಗಮನಿಸಿದರೆ ಧನಕರ್ ಆಯ್ಕೆ ಬಹುತೇಕ ಖಚಿತವೆನ್ನಿಸಿದೆ.
ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಸೈಬರ್ ವಂಚನೆ!?
ಯಾರಿಂದ ಮತ?:
ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಜೊತೆಗೆ ರಾಜ್ಯ ವಿಧಾನಸಭಾ ಸದಸ್ಯರಿಗೂ ಮತದಾನದ ಹಕ್ಕಿರುತ್ತದೆ. ಆದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕೇವಲ ಸಂಸದರಿಗೆ ಮಾತ್ರವೇ ಮತದಾನದ ಹಕ್ಕಿರುತ್ತದೆ. ಅದನರ್ವಯ ಸಂಸತ್ತಿನ ಉಭಯ ಸದನಗಳ 788 ಸದಸ್ಯರು ಅಂದರೆ ರಾಜ್ಯಸಭೆಯ 233, ನಾಮ ನಿರ್ದೇಶನಗೊಂಡ 12, ಲೋಕಸಭೆಯ 543 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ಇದೀಗ ರಾಜ್ಯಸಭೆಯ 8 ಸ್ಥಾನ ಖಾಲಿ ಇವೆ. ಹೀಗಾಗಿ ಸದನದ ಒಟ್ಟು ಬಲ 788ರಿಂದ 780ಕ್ಕೆ ಕುಸಿದಿದ್ದು, ಈ ಪೈಕಿ 391 ಮತ ಪಡೆದವರು ವಿಜೇತರಾಗಿ ಹೊರಹೊಮ್ಮುತ್ತಾರೆ.
ಅಭ್ಯರ್ಥಿ ಯಾರು? ಬಿಜೆಪಿ ಅಣಕಿಸಿದ ಕಾಂಗ್ರೆಸ್‌ಗೆ ಸಂಕಷ್ಟ ತಂದಿಟ್ಟ ಜೈರಾಮ್ ರಮೇಶ್!
ಜಗದೀಪ್ ಧನಕರ್‌ಗೆ ಬಿಎಸ್ಪಿ ನಾಯಕಿ ಮಾಯಾವತಿ ಬುಧವಾರ ಬೆಂಬಲ ಸೂಚಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿತ್ತು. ಈಗ ಅದೇ ನೀತಿಯನ್ನು ಉಪರಾಷ್ಟ್ರಪತಿ ಚುನಾವಣೆಯಲ್ಲೂ ಮುಂದುವರಿಸಿರುವುದು ಗಮನಾರ್ಹ. ‘ಸಾರ್ವಜನಿಕ ಹಿತಾಸಕ್ತಿ ಹಾಗೂ ಪಕ್ಷದ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಅಭ್ಯರ್ಥಿ ಧನಕರ್ ಅವರಿಗೆ ಬಿಎಸ್‌ಪಿ ಬೆಂಬಲ ಸೂಚಿಸಲಿದೆ’ ಎಂದು ಮಾಯಾ ಟ್ವೀಟ್ ಮಾಡಿದ್ದಾರೆ. ಧನಕರ್ ಮೂಲತಃ ರಾಜಸ್ಥಾನದವರು. ಉತ್ತರ ಪ್ರದೇಶದಲ್ಲಿ ತುಂಬಾ ಜನಸಂಖ್ಯೆ ಹೊಂದಿರುವ ಜಾಟ್ ಸಮುದಾಯದ ನಾಯಕ. ಸಮಾಜವಾದಿ ಹಿನ್ನಲೆಯು ಹೊಂದಿದ್ದಾರೆ.
