Asianet Suvarna News Asianet Suvarna News

ಅಭ್ಯರ್ಥಿ ಯಾರು? ಬಿಜೆಪಿ ಅಣಕಿಸಿದ ಕಾಂಗ್ರೆಸ್‌ಗೆ ಸಂಕಷ್ಟ ತಂದಿಟ್ಟ ಜೈರಾಮ್ ರಮೇಶ್‌!

ಕಳೆದೆರಡು ವಾರದಿಂದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸತತ ಹಿನ್ನಡೆ ಅನುಭವಿಸುತ್ತಿದ್ದಾರೆ. ಬಿಜೆಪಿಯನ್ನು ಟೀಕಿಸಲು ಹೋಗಿ ಪೇಚಿಗೆ ಸಿಲುಕುತ್ತಿದ್ದಾರೆ. ಇದೀಗ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕೇಳಿ, ಕಾಂಗ್ರೆಸ್‌ಗೂ ಸಂಕಷ್ಟ ತಂದಿಟ್ಟಿದ್ದಾರೆ.

Who is the Candidate Jairam Ramesh mocks bjp on Vice president nomination backfired congress ckm
Author
Bengaluru, First Published Jul 18, 2022, 8:19 PM IST

ನವದೆಹಲಿ(ಜು.18): ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒಂದರ ಮೇಲೊಂದರಂತೆ ಮುಖಭಂಗ ಅನುಭವಿಸುತ್ತಿದ್ದಾರೆ. ಬಿಜೆಪಿಯನ್ನು ಟೀಕೀಸಿ, ಅಣಕಿಸಿ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಉಪ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಜಗದೀಪ್ ದಂಕರ್ ನಾಪತ್ರ ಸಲ್ಲಿಕೆ ಅಣಕಿಸಿ, ಇಲ್ಲಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ  ವೇಗದಲ್ಲಿ ಬಿಜೆಪಿ ಉತ್ತರ ನೀಡಿದೆ. ಈ ಉತ್ತರಕ್ಕೆ ಜೈರಾಮ್ ರಮೇಶ್ ಕಂಗಾಲಾಗಿದ್ದಾರೆ, ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಉಪರಾಷ್ಟ್ರಪತಿ ಚುನಾವಣೆಗೆ ಜಗದೀಪ್ ದಂಕರ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಉಪಸ್ಥಿತರಿದ್ದರು. ಜಗದೀಪ್ ನಾಮಪ್ರವನ್ನು ಮೋದಿ ಆಯೋಗ ಅಧಿಕಾರಿಗಳಿಗೆ ನೀಡಿದ್ದಾರೆ. ಹೀಗಾಗಿ ಜೈರಾಮ್ ರಮೇಶ್ ಇಲ್ಲಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದಾರೆ. ಜಗದೀಪ್ ನಾಮಪತ್ರವನ್ನು ಮೋದಿ ನೀಡಿದ ಕಾರಣಕ್ಕೆ ಬಿಜೆಪಿಯನ್ನು ಅಣಕಿಸಿದ್ದರು.

ಜೈರಾಮ್ ರಮೇಶ್ ಟ್ವೀಟ್‌ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ಆದರೆ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಹಳೇ ಫೋಟವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಉಪರಾಷ್ಚ್ರಪತಿ ಹಮೀದ್ ಅನ್ಸಾರಿ ಅವರ ನಾಮಪತ್ರವನ್ನು ಸೋನಿಯಾ ಗಾಂಧಿ ನೀಡುತ್ತಿದ್ದಾರೆ. ಪ್ರಧಾನಿ ಮನ್‌ಮೋಹನ್ ಸಿಂಗ್ ಪಕ್ಕದಲ್ಲಿದ್ದಾರೆ. ರಾಹುಲ್ ಗಾಂಧಿ, ಮುಲಾಯಂ ಸಿಂಗ್ ಯಾದವ್ ಸೇರಿ ಇತರ ಕಾಂಗ್ರಸ್ ನಾಯಕರು ಪಕ್ಕದಲ್ಲಿ ನಿಂತಿದ್ದಾರೆ. ಈ ಫೋಟೋ ಟ್ವೀಟ್ ಮಾಡಿದ ನಿಶಿಕಾಂತ್ ದುಬೆ, ಇಂಗ್ಲೀಷರ ಮನಸ್ಥಿತಿ ಹೊಂದಿರುವ ಗುಲಾಮ್ ಜೈರಾಮ್ ರಮೇಶ್ ಈ ಫೋಟೋ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. 

 

 

President Election ರಾಷ್ಟ್ರಪತಿ ಚುನಾವಣೆಯಲ್ಲಿ ಭರ್ಜರಿ ಕ್ರಾಸ್‌ ವೋಟಿಂಗ್..!

ಸರ್ವಪಕ್ಷ ಸಭೆಗೆ ಪ್ರಧಾನಿ ಗೈರು, ರಮೇಶ್‌ಗೆ ಮುಖಭಂಗ
ಮುಂಗಾರು ಅಧಿವೇಶನದಲ್ಲಿ ಸುಗಮ ಕಲಾಪ ನಡೆಸಲು ವಿಪಕ್ಷಗಳ ಸಹಕಾರ ಕೋರಲು ಸರ್ಕಾರ, ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆದರೆ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದ್ದಕ್ಕೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಆದರೆ ಎಂದಿನಂತೆ ಪ್ರಧಾನಿ ಗೈರಾಗಿದ್ದಾರೆ. ಇದು ಅಸಂಸದೀಯ ವರ್ತನೆಯಲ್ಲವೇ ಎಂದು ಟಾಂಗ್‌ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್‌ ಜೋಶಿ, ವಿಪಕ್ಷಗಳು ಇಲ್ಲದ ಸಮಸ್ಯೆಯನ್ನು ಹುಡುಕುವ ಯತ್ನ ಮಾಡುತ್ತಿವೆ. 2014ಕ್ಕಿಂತ ಮೊದಲು ಕಾಂಗ್ರೆಸ್‌ ಅಧಿಕಾರದಲ್ಲಿದ್ದ ವೇಳೆ ಪ್ರಧಾನಿಗಳು ಸರ್ವಪಕ್ಷ ಸಭೆಯಲ್ಲಿ ಹಾಜರಾದ ಉದಾಹರಣೆಯೇ ಇಲ್ಲ. 2014ರ ಬಳಿಕ ಈ ಸಂಸ್ಕೃತಿ ಆರಂಭಗೊಂಡಿತು. ಈ ಬಾರಿ ಮೋದಿ ಗೈರಾಗಿದ್ದಾರೆ. ಅದಕ್ಕೆ ಕಾರಣಗಳೂ ಇದೆ ಎಂದಿದ್ದಾರೆ. ಈ ಮೂಲಕ ಜೈರಾಮ್ ರಮೇಶ್ ಮತ್ತೆ ಪೇಚಿಗೆ ಸಿಲುಕಿದ್ದರು.

ರಾಷ್ಟ್ರಪತಿ ಚುನಾವಣೆ, ಮತದಾನಕ್ಕೆ ವಿಶೇಷ ಮಾರ್ಕರ್ ಪೆನ್‌,ಮೈಸೂರಿನಲ್ಲಿ ತಯಾರಾಗುತ್ತೆ ಅಳಿಸಲಾಗದ ಶಾಯಿ!

ಇನ್ನು ಕೇಂದ್ರ ಸರ್ಕಾರ ಸಂಸತಿನಲ್ಲಿ ಕೆಲ ಪದಗಳ ನಿಷೇಧ ಮಾಡಿದ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು. ಪ್ರತಿಭಟನೆ, ಧರಣಿ, ಉಪವಾಸ ಸೇರಿದಂತೆ ಕೆಲ ಪದಗಳನ್ನು ಉಲ್ಲೇಖಿಸಿ ಬಿಜೆಪಿ ಆದೇಶವನ್ನು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದರು. ಕೆಲವೇ ಕ್ಷಣಗಲ್ಲಿ ನೆಟಿಜನ್ಸ್ 2009ರಲ್ಲಿ ಕಾಂಗ್ರೆಸ್ ಸರ್ಕಾರ ಇದೇ ರೀತಿಯ ಆದೇಶ ನೀಡಿತ್ತು. ಅದರ ಪ್ರತಿಯನ್ನು ನೀಡಿ ಈ ಆದೇಶ ನೀವೇ ನೀಡಿದ್ದೀರೆ, ಈಗ ಏನು ಹೇಳುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಹೀಗೆ ಜೈರಾಮ್ ರಮೇಶ್ ಒಂದಲ್ಲ ಒಂದು ಕಾರಣಕ್ಕೆ ಮುಖಭಂಗ ಅನುಭವಿಸುತ್ತಲೇ ಇದ್ದಾರೆ.
 

Follow Us:
Download App:
  • android
  • ios