Asianet Suvarna News Asianet Suvarna News

ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಸೈಬರ್ ವಂಚನೆ!?

ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಕೇಂದ್ರದ ಮಾಜಿ ಸಚಿವೆ ಹಾಗೂ ರಾಜ್ಯಪಾಲ ಮಾರ್ಗರೆಟ್ ಆಳ್ವಾ ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ತಮ್ಮ ಫೋನ್‌ ಅನ್ನು ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಮಾರ್ಗರೆಟ್ ಆಳ್ವಾ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರು ಸೈಬರ್‌ ವಂಚನೆಗೆ ಬಲಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. 

Vice Presidential candidate Margaret Alva jibe to MTNL Wont call any BJP Trinamool BJD MP if you restore phone san
Author
Bengaluru, First Published Jul 26, 2022, 12:27 PM IST

ಬೆಂಗಳೂರು (ಜುಲೈ 26): ವಿಪಕ್ಷಗಳ ಒಗ್ಗಟ್ಟಾಗಿ ನಿಲ್ಲಿಸಿರುವ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ, ಕೇಂದ್ರದ ಮಾಜಿ ಸಚಿವೆ ಹಾಗೂ ರಾಜ್ಯಪಾಲರೂ ಕೂಡ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಕರೆಗಳು ಡೈವರ್ಟ್ ಆಗುತ್ತಿವೆ ಮತ್ತು ಸಂಪರ್ಕಕ್ಕೆ ಫೋನ್ ಮಾಡಲು ಪ್ರಯತ್ನಿಸಿದಾಗ ಕರೆಗಳು ಹೋಗುತ್ತಿಲ್ಲ ಎಂದು ಅವರು ಅನೇಕರಿಂದ ದೂರುಗಳನ್ನು ಸ್ವೀಕರಿಸಿದ್ದಾರೆ.  ಈ ಕುರಿತಾಗಿ ಮಾರ್ಗರೆಟ್ ಆಳ್ವಾ, ಎಂಟಿಎನ್‌ಎಲ್‌ ಸಂಸ್ಥೆಯನ್ನು ಲೇವಡಿ ಮಾಡಿ ಟ್ವಿಟರ್‌ಅಲ್ಲಿ ಪೋಸ್ಟ್‌ ಮಾಡಿದ್ದ ಬೆನ್ನಲ್ಲಿಯೇ ಅವರು ಸೈಬರ್‌ ವಂಚನೆಗೆ ತುತ್ತಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಕುರಿತಾಗಿ ಜುಲೈ 19ರಂದೇ ಎಂಟಿಎನ್‌ಎಲ್‌ ಗ್ರಾಹಕರಿಗೆ ದೆಹಲಿ ಪೊಲೀಸ್‌ ಎಚ್ಚರಿಕೆಯನ್ನು ನೀಡಿ ಟ್ವಿಟರ್‌ನಲ್ಲಿ ಪೋಸ್ಟ್‌ ಕೂಡ ಮಾಡಿತ್ತು. ಆದರೆ, ಮಾರ್ಗರೆಟ್ ಆಳ್ವಾ  ತಮ್ಮ ಫೋನ್‌ ಅನ್ನು ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎನ್ನುವ ಆರೋಪ ಮಾಡಿದ್ದರು. ನವ ಭಾರತದಲ್ಲಿ ರಾಜಕಾರಣಿಗಳ ನಡುವಿನ ಸಭಾಷಣೆಯನ್ನು ಬಿಗ್‌ ಬ್ರದರ್‌ ಯಾವಾಗಲೂ ಕದ್ದಾಲಿಕೆ ಮಾಡುತ್ತಾರೆ ಎಂದು ಆರೋಪಿಸಿದ್ದರು.  ಆಳ್ವಾ. ಜುಲೈ 19 ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಔಪಚಾರಿಕ ನಾಮನಿರ್ದೇಶನವನ್ನು ಸಲ್ಲಿಸಿದ್ದಾರೆ. ಅಂದಿನಿಂದ, ವಿರೋಧ ಮತ್ತು ಆಡಳಿತ ಪಕ್ಷದ ಸ್ನೇಹಿತರ ದೊಡ್ಡ ವಲಯದೊಂದಿಗೆ ಮಾತನಾಡುತ್ತಿದ್ದಾರೆ.

ಲೇವಡಿ ಮಾಡಿ ಟ್ವೀಟ್: ಸೋಮವಾರ ರಾತ್ರಿ 9 ಗಂಟೆಯ ಸುಮಾರಿಗೆ ಅವರು ತಮ್ಮ ದೂರನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. “ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದ ನಂತರ, ನನ್ನ ಮೊಬೈಲ್‌ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಮತ್ತು ನನಗೆ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನೀವು ಫೋನ್ ಅನ್ನು ಮರುಸ್ಥಾಪಿಸಿದರೆ. ಇಂದು ರಾತ್ರಿ ಭಾರತೀಯ ಜನತಾ ಪಕ್ಷ, ತೃಣಮೂಲ ಕಾಂಗ್ರೆಸ್ ಅಥವಾ ಬಿಜು ಜನತಾ ದಳದ ಯಾವುದೇ ಸಂಸದರೊಂದಿಗೆ ನಾನು ಕರೆ ಮಾಡಿ ಮಾತನಾಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ' ಎಂದು ಲೇವಡಿ ಮಾಡಿ ಟ್ವೀಟ್‌ ಮಾಡಿದ್ದರು.

ಸರ್ಕಾರದ ಮೇಲೆ ಆರೋಪ: ಟ್ವಿಟರ್‌ನಲ್ಲಿ, ಆಳ್ವಾ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಜೊತೆ ಆಗಿರುವ  ಸಂವಹನವನ್ನು ಪೋಸ್ಟ್ ಮಾಡಿದ್ದಾರೆ, ಅದು ಅವರ ಎಂಟಿಎನ್‌ಎಲ್‌ ಕೆವೈಸಿ ಅನ್ನು ಅಮಾನತುಗೊಳಿಸಲಾಗಿದೆ ಮತ್ತು 24 ಗಂಟೆಗಳ ಒಳಗೆ ಅವರ ಸಿಮ್‌ ಕಾರ್ಡ್ ಅನ್ನು ನಿರ್ಬಂಧಿಸಲಾಗುವುದು ಎಂದು ಅದರಲ್ಲಿ ಹೇಳಲಾಗಿದೆ.  ಟ್ಯಾಗ್ ಮಾಡಿದ ಆಳ್ವ, "ಆತ್ಮೀಯ ಬಿಎಸ್ಎನ್‌ಎಲ್‌/ಎಂಟಿಎನ್‌ಎಲ್‌, ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದ ನಂತರ, ನನ್ನ ಮೊಬೈಲ್‌ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಮತ್ತು ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.' ಎಂದು ಪೋಸ್ಟ್‌ ಮಾಡಿದ್ದಾರೆ. ನೀವು ಫೋನ್ ಅನ್ನು ಮರುಸ್ಥಾಪಿಸಿದರೆ. ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯ ಯಾವುದೇ ಸಂಸದರೊಂದಿಗೆ ಕರೆ ಮಾಡಿ ಮಾತನಾಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು ಅವರು ಬರೆದಿದ್ದಾರೆ. ಕೊನೆಯಲ್ಲಿ ಈಗ ನಿಮಗೆ ನನ್ನ ಕೆವೈಸಿ ಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವ ನಾಮಪತ್ರ

ಎಂಟಿಎನ್ಎಲ್ ಪ್ರತಿಕ್ರಿಯೆ: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಟಿಎನ್‌ ಎಲ್‌, ವಾಟ್ಸ್‌ಆಪ್‌/ಎಸ್ಎಂಎಸ್/ಕರೆಗಳ ಮೂಲಕ ಇ-ಕೆವೈಸಿ ಮಾಡುವಂತೆ ಕೇಳುವುದಿಲ್ಲ. ಇಂತಹ ರೀತಿಯ ಇ-ಕೆವೈಸಿ ವಾಟ್ಸ್‌ಆಪ್‌/ಎಸ್ಎಂಎಸ್/ಕರೆಗಳನ್ನು ತಪ್ಪಿಸಲು ಎಲ್ಲಾ ಜಿಎಸ್ಎಂ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಎಂಟಿಎನ್‌ಎಲ್‌ ಎಚ್ಚರಿಕೆ ನೀಡುತ್ತದೆ ಏಕೆಂದರೆ ಇದು ಕೆಲವು ರೀತಿಯ ವಂಚನೆಗೆ ಕಾರಣವಾಗಬಹುದು, ಆದ್ದರಿಂದ ನೀವು ಅಂತಹ ಇ-ಕೆವೈಸಿ ಸಂದೇಶಗಳನ್ನು ನಿರ್ಲಕ್ಷಿಸುವಂತೆ ವಿನಂತಿಸಲಾಗಿದೆ ಎಂದು ಟ್ವೀಟ್‌ ಮಾಡಿದೆ.

ಬಿಜೆಪಿಗೆ ಹೋದವರು ಮತ್ತೆ ವಾಪಸ್ : ಮಾರ್ಗರೇಟ್ ಹೇಳಿಕೆಗೆ ಗೌಡರ ಉತ್ತರ

ಚುನಾವಣೆಯಿಂದ ಟಿಎಂಸಿ ದೂರ: ಮಾರ್ಗರೆಟ್ ಆಳ್ವಾ ಅವರು ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಆಡಳಿತಾರೂಢ ಎನ್‌ಡಿಎಯ ಜಗದೀಪ್‌ ಧನಕರ್‌ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿದೆ.

Follow Us:
Download App:
  • android
  • ios