Asianet Suvarna News Asianet Suvarna News

ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!

  • ಎಚ್.ಎ.ಎಲ್ ನಿರ್ಮಿಸಿದ ಲಘು ಯುದ್ಧ ಹೆಲಿಕಾಪ್ಟರ್.
  • ಅದರ ಸಾಮರ್ಥ್ಯ ಕಂಡು ಪ್ರಭಾವಿತನಾದೆ: ಉಪರಾಷ್ಟ್ರಪತಿ
  • ಕುಟುಂಬ ಸದಸ್ಯರೊಂದಿಗೆ ಅಣೆಕಟ್ಟಿಗೆ ಭೇಟಿ ನೀಡಿದ ನಾಯ್ಡು
     
Vice President Venkaiah Naidu visit tungabhadra dam after HAL aircraft manufacturing facilities ckm
Author
Bengaluru, First Published Aug 20, 2021, 9:55 PM IST
  • Facebook
  • Twitter
  • Whatsapp

ಬೆಂಗಳೂರು(ಆ.20):  ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL)ಗೆ ಭೇಟಿ ನೀಡಿದ್ದಾರೆ. HAL ಹಿರಿಯ ಅಧಿಕಾರಿಗಳ ಜೊತೆ ತೆರಳಿದ ವೆಂಕಯ್ಯ ನಾಯ್ಡು ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ, ಮದ್ದುಗುಂಡು ಸೇರಿದಂತೆ ಹಲವು ಶಸ್ತ್ರಗಳನ್ನು ನಾಯ್ಡು ಪರೀಶಿಲಿದರು. ಇದಾದ ಬಳಿಕ ನಾಯ್ಡು ತಮ್ಮ ಕುಟುಂಬ ಸದಸ್ಯರೊಂದಿಗೆ ಬಳ್ಳಾರಿಯ ತುಂಬಭದ್ರಾ ಅಣೆಕಟ್ಟಿಗೆ ಭೇಟಿ ನೀಡಿದರು.

 

ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ರಕ್ಷಣಾ ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಮತ್ತು ಆಧುನಿಕ ಮಿಲಿಟರಿ ಹಾರ್ಡ್‌ವೇರ್ ರಫ್ತು ಕೇಂದ್ರವಾಗಿ ಮಾರ್ಪಡಿಸುವ ಅಗತ್ಯವಿದೆ.  ಅತ್ಯಾಧುನಿಕ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಉಪ ರಾಷ್ಟ್ರಪತಿ  ವೆಂಕಯ್ಯ ನಾಯ್ಡು ಹೇಳಿದರು.

ಬೆಂಗಳೂರಿನ ʻಎಚ್ಎ‌ಎಲ್ʼ ಸಂಕೀರ್ಣದಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಉದ್ದೇಶಿಸಿ  ನಾಯ್ಡು ಮಾತನಾಡಿದರು.  ಮುಂಬರುವ ವರ್ಷಗಳಲ್ಲಿ ಭಾರತವನ್ನು ವೈಮಾನಿಕ ತಂತ್ರಜ್ಞಾನ ಮತ್ತು ರಕ್ಷಣಾ ಶಕ್ತಿ ಕೇಂದ್ರವಾಗಿ ಮಾಡುವಲ್ಲಿ ದೇಶೀಯ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.

 

ಬೆಂಗಳೂರಿನಲ್ಲಿ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ!

ಅತ್ಯಾಧುನಿಕ ಕ್ಷಿಪಣಿಗಳು, ಉಪಗ್ರಹಗಳು ಮತ್ತು ಬಾಹ್ಯಾಕಾಶ ವಾಹನಗಳನ್ನು ತಯಾರಿಸುವ ಭಾರತದ ಸಾಮರ್ಥ್ಯದ ಬಗ್ಗೆ ಗಮನ ಸೆಳೆದ ಅವರು, "ನಾವು ಇನ್ನೂ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಬ್ಬರಾಗಿದ್ದೇವೆ. ಆದರೆ ಈ ಪರಿಸ್ಥಿತಿಯನ್ನು ಬದಲಾಯಿಸಬೇಕು ಎಂದರು.

ಭದ್ರತಾ ಪಡೆಗಳ ಅನುಕರಣೀಯ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು. "ಯಾವುದೇ ಸವಾಲನ್ನು ಎದುರಿಸಲು ಮತ್ತು ಯಾವುದೇ ಭದ್ರತಾ ಸಂಬಂಧಿತ ಅಪಾಯವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಲು ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ ಎಂದರು.

ಭಾರತವು ತನ್ನ ಎಲ್ಲಾ ನೆರೆ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಬಯಸುತ್ತದೆ. ಆದರೆ ಕೆಲವು ದೇಶಗಳು ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ಮತ್ತು ಹಣಕಾಸು ನೆರವು ನೀಡುತ್ತಿವೆ. ಮತ್ತೆ ಕೆಲ ನೆರೆ ದೇಶಗಳು ವಿಸ್ತರಣಾ ಪ್ರವೃತ್ತಿ ಪ್ರದರ್ಶಿಸುತ್ತಿವೆ ಎಂದು ಪಾಕಿಸ್ತಾನ ಹಾಗೂ ಚೀನಾಗೆ ಪರೋಕ್ಷ ತಿರುಗೇಟು ನೀಡಿದರು.  ರಾಷ್ಟ್ರದ ಶಾಂತಿ ಮತ್ತು ಸಮೃದ್ಧಿಗೆ ನಮ್ಮ ಗಡಿಗಳ ಭದ್ರತೆ ಮತ್ತು ಸುರಕ್ಷತೆ ಬಹಳ ಮುಖ್ಯವಾಗಿದೆ.  ಭಾರತವು ತನ್ನ ದೃಷ್ಟಿಕೋನದಲ್ಲಿ ಎಂದಿಗೂ ವಿಸ್ತರಣಾವಾದಿಯಾಗಿಲ್ಲ ಎಂದು ಒತ್ತಿ ಹೇಳಿದರು. ಶಾಂತಿಯುತ ಸಹಬಾಳ್ವೆ; ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳನ್ನು ತಡೆಯುವುದು ನಮ್ಮ ಕಾರ್ಯವಿಧಾನವಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

 

ರಕ್ಷಣಾ ಉತ್ಪಾದನೆಯಲ್ಲಿ ದೇಶೀಯತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಲು ಸರಕಾರ ಕೈಗೊಂಡಿರುವ ಹಲವಾರು ನೀತಿ ಉಪಕ್ರಮಗಳನ್ನು ನಾಯ್ಡು ಉಲ್ಲೇಖಿಸಿದರು.  ಫಲಪ್ರದ ಫಲಿತಾಂಶಗಳಿಗಾಗಿ ರಕ್ಷಣಾ ಯೋಜನೆಗಳಲ್ಲಿ ಖಾಸಗಿ ಪಾಲುದಾರರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. "ಪ್ರಪಂಚದಾದ್ಯಂತದ ಅತ್ಯುತ್ತಮ ಉತ್ಪನ್ನಗಳೊಂದಿಗೆ ಹೋಲಿಸಬಹುದಾದ ಸ್ಪರ್ಧಾತ್ಮಕ ಉತ್ಪನ್ನಗಳನ್ನು ತಯಾರಿಸಲು ನಾವು ವ್ಯೂಹಾತ್ಮಕ ಪಾಲುದಾರಿಕೆ, ತಂತ್ರಜ್ಞಾನ ಹಂಚಿಕೆ ಅವಲಂಬಿತರಾಗಬೇಕಾಗುತ್ತದೆ  ಎಂದು ಉಪ ರಾಷ್ಟ್ರಪತಿಗಳು ಹೇಳಿದರು.

ಹೆಎಎಲ್ ಭೇಟಿ ಬಳಿಕ ಬಳ್ಳಾರಿಗೆ ತೆರಳಿದ ವೆಂಕಯ್ಯ ನಾಯ್ಡು ತುಂಗಭದ್ರ ಡ್ಯಾಮ್ ವೀಕ್ಷಿಸಿದರು. ಜಲಾಶದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ನಾಯ್ಡುಗೆ ಪತ್ನಿ  ಉಷಾ ನಾಯ್ಡು ಹಾಗೂ ಕುಟುಂಬ ಸದಸ್ಯರು ಸಾಥ್ ನೀಡಿದರು.

 

Follow Us:
Download App:
  • android
  • ios