ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!
- ಸರ್. ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ಭಾಷಣ
- ಬೆಂಗಳೂರಿನಲ್ಲಿನ ಕಾರ್ಯಕ್ರಮದಲ್ಲಿ ಸಂಸತ್ ರಾಜ್ಯ ಶಾಸಕಾಂಗ ಅಧಿವೇಶನ ನೆನೆದ ನಾಯ್ಡು
- 6 ದಿನಗಳ ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಡ್ಡು
ಬೆಂಗಳೂರು(ಆ.18): ಮುಂಗಾರು ಅಧಿವೇಶನದಲ್ಲಿನ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೋರಿದ ವರ್ತನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಘಾಸಿಗೊಳಿಸಿದೆ. ಘಟನೆ ಬೆನ್ನಲ್ಲೇ ಸಂಸತ್ ಕಲಾಪದಲ್ಲಿ ವಿಪಕ್ಷಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದೀಗ ಮತ್ತೆ ಸಂಸತ್ ಅಧಿವೇಶನಗಳಲ್ಲಿ ರಾಜಕೀಯ ನಾಯಕರ ವರ್ತನೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ
ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ. ಆರ್. ಜಯರಾಮ್ ಅವರಿಗೆ "ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿದ ಉಪರಾಷ್ಟ್ರಪತಿ ಬಳಿಕ ರಾಜಕೀಯ ನಾಯಕರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕ ಜೀವನದಲ್ಲಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಯುವ ಪೀಳಿಗೆಗೆ ಮಾದರಿಯಾಗುವಂತೆ ಜನಪ್ರತಿನಿಧಿಗಳು ಮಾದರಿಯಾಗುವಂತೆ ಕರೆ ನೀಡಿದ್ದಾರೆ.
ಇತ್ತೀಚೆಗೆ ಸಂಸತ್ತು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ಶಾಸಕಾಂಗ ಸಭೆಗಳ ಅಧಿವೇಶನಗಳಲ್ಲಿ ನಡೆದ ಅನುಚಿತ ಘಟನೆಗಳಿಂದ ತಮಗೆ ತೀವ್ರ ಬೇಸರವಾಗಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ದುರದೃಷ್ಟಕರ ಘಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ ನಾಯ್ಡು, ಕೆಲವು ಸದಸ್ಯರ ಅನುಚಿತ ನಡವಳಿಕೆಯಿಂದಾಗಿ ತಮಗೆ ದುಃಖವಾಗಿದೆ ಎಂದರು.
ರಾಜ್ಯಸಭೆ ಗದ್ದಲ: ಶೀಘ್ರ ಸಂಸದರ ವಿರುದ್ಧ ಕ್ರಮ ?
ಇದೇ ವೇಳೆ ಸರ್. ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯುವ ಮೂಲಕ, ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸಲು ಯುವ ಪೀಳಿಗೆ ಹೊಸ ಆವಿಷ್ಕಾರಗಳು ಮತ್ತು ವಿನೂತನ ಆಲೋಚನೆಗಳನ್ನು ಮಾಡಬೇಕು ಎಂದು ಉಪರಾಷ್ಟ್ರಪತಿಯು ಕರೆ ಕೊಟ್ಟರು. ಬಡತನವನ್ನು ನಿವಾರಿಸಲು, ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ಮತ್ತು ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಯುವಕರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ವಿಶ್ವೇಶ್ವರಯ್ಯನವರಿಗೆ ಗೌರವ ನಮನಗಳನ್ನು ಸಲ್ಲಿಸಿದ ಅವರು, ಅವರನ್ನು 'ಆಧುನಿಕ ಭಾರತದ ಪ್ರಖ್ಯಾತ ನಿರ್ಮಾತೃ-ಎಂಜಿನಿಯರ್' ಎಂದು ಶ್ಲಾಘಿಸಿದರು. ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಹೈದರಾಬಾದ್‌ನ ಪ್ರವಾಹ ಸಂರಕ್ಷಣಾ ವ್ಯವಸ್ಥೆಯಂತಹ ಅಪ್ರತಿಮ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿರು, ಪ್ರತಿ ವರ್ಷ ನಾವು ಅವರ ಜನ್ಮ ದಿನಾಚರಣೆಯನ್ನು ‘ಎಂಜಿನಿಯರ್ಸ್ ಡೇ’ ಆಗಿ ಆಚರಿಸುತ್ತಿರುವುದು ಅವರ ಇಂಜಿನಿಯರಿಂಗ್ ಪ್ರತಿಭೆಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.
ವಿಪಕ್ಷಗಳ ಆಟಾಟೋಪ; ಕಣ್ಣೀರು ಹಾಕಿದ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು
ಮೈಸೂರಿನ ದಿವಾನರಾಗಿ ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸೋಪ್ ಫ್ಯಾಕ್ಟರಿ ಮತ್ತು ಮೈಸೂರು ಚೇಂಬರ್ ಆಫ್ ಕಾಮರ್ಸ್‌ನಂತಹ ಅನೇಕ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ತೋರಿದ ದೂರದೃಷ್ಟಿಯನ್ನು ಉಪರಾಷ್ಟ್ರಪತಿಯವರು ಸ್ಮರಿಸಿದರು. ಸ್ವಾತಂತ್ರ್ಯಕ್ಕೂ ಮುಂಚೆಯೇ, ಭಾರತದಲ್ಲಿ ನಮ್ಮ ಕೈಗಾರಿಕೀಕರಣದ ಚಳುವಳಿಯನ್ನು ವಿಶ್ವೇಶ್ವರಯ್ಯನವರು ಮುನ್ನಡೆಸಿದರು ಎಂದು ಅವರು ಹೇಳಿದರು.
ಎಂ.ಎಸ್. ರಾಮಯ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಅಧ್ಯಕ್ಷ ಡಾ.ಎಂ..ಆರ್..ಜಯರಾಮ್ ಅವರಿಗೆ ‘ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ’ಯನ್ನು ಪ್ರದಾನ ಮಾಡಿದ ಶ್ರೀ ನಾಯ್ಡು ಅವರು ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳನ್ನು ರೋಮಾಂಚಕ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿ ಅವರ ಸಮರ್ಪಣೆ ಮತ್ತು ಶ್ರಮವನ್ನು ಶ್ಲಾಘಿಸಿದರು. ರಾಜ್ಯದಲ್ಲಿ ನಾವೀನ್ಯತೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿರುವ ಎಫ್‌ಕೆಸಿಸಿಐ ಅನ್ನು ಅವರು ಶ್ಲಾಘಿಸಿದರು.