ದೇಶದೆಲ್ಲೆಡೆ ಇಂದು ರಕ್ಷಾ ಬಂಧನ ಹಬ್ಬ ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಜೊತೆ ಉಪರಾಷ್ಟ್ರಪತಿ ರಾಖಿ ಕಟ್ಟಿಸಿಕೊಂಡು ರಕ್ಷಾ ಬಂಧನ ಆಚರಿಸಿದ ವೆಂಕಯ್ಯ ನಾಯ್ಡು

ಬೆಂಗಳೂರು(ಆ.22): ದೇಶದಲ್ಲೆಡೆ ಇಂದು ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬ ಆಚರಿಸಲಾದಿದೆ. ಅಣ್ಣ ತಂಗಿಯರ ವಿಶೇಷ ಹಬ್ಬವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಚರಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ವೆಂಕಯ್ಯ ನಾಯ್ಡು ಇಂದು ಬೆಂಗಳೂರಿನ ರಾಜಭವನದಲ್ಲಿ ರಾಖಿ ಹಬ್ಬ ಆಚರಿಸಿದರು.

Scroll to load tweet…

ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!

ಬೆಂಗಳೂರಿನ ಶಾಲಾ ಮಕ್ಕಳ ಜೊತೆ ವೆಂಕಯ್ಯ ನಾಯ್ಡು ರಕ್ಷಾ ಬಂಧನ ಹಬ್ಬ ಆಚರಿಸಿದರು. ಶಾಲಾ ಮಕ್ಕಳು ಉಪರಾಷ್ಟ್ರಪತಿ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬನ್ನು ಸ್ಮರಣೀಯವಾಗಿಸಿದರು. ರಾಖಿ ಹಬ್ಬಕ್ಕಾಗಿ ರಾಜಭವನಕ್ಕ ಆಗಮಿಸಿದ ಶಾಲಾ ಮಕ್ಕಳಿಗೆ ವೆಂಕಯ್ಯ ನಾಯ್ಡು ಶುಭಕೋರಿದರು.

Scroll to load tweet…

ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ಪ್ರತಿಯೊಬ್ಬ ಮಹಿಳೆ, ಮಕ್ಕಳಿಗೆ ಗೌರವ ಹಾಗೂ ರಕ್ಷಣೆ ನೀಡಬೇಕು ಎಂದು ವೆಂಕಯ್ಯ ನಾಯ್ಡು ರಕ್ಷಾ ಬಂಧನ ಹಬ್ಬದ ದಿನ ವಿಶೇಷ ಮನವಿ ಮಾಡಿದರು. ರಕ್ಷಾ ಬಂಧನ ಹಬ್ಬ ಸಹೋದರ - ಸಹೋದರಿಯರ ನಡುವಿನ ಪ್ರೀತಿ ಮತ್ತು ಗೌರವದ ಆಚರಣೆಯಾಗಿದೆ ಎಂಂದು ಹಬ್ಬದ ಮಹತ್ವ ಸಾರಿದರು.

Scroll to load tweet…

ಬೆಂಗಳೂರಿನಲ್ಲಿ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ!

ರಕ್ಷಾ ಬಂಧನ ಹಬ್ಬ ನಾಗರಿಕರಲ್ಲಿ ಸಹೋದರತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಇದರಿಂದ ನಮ್ಮ ರಾಷ್ಟ್ರ ಬಲಿಷ್ಠವಾಗುತ್ತದೆ. ಇದೇ ವೇಳೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ವೆಂಕಯ್ಯ ನಾಯ್ಡು ಶ್ಲಾಘಿಸಿದರು. ಈ ಸಂಸ್ಕೃತಿಯಿಂದ ಹಿರಿಯನ್ನು ಗೌರವಿಸಲು, ಕುಟುಂಬಸ್ಥರ ನುಡವಿನ ಪ್ರೀತಿ, ಬಾಂಧವ್ಯ ಗಟ್ಟಿಯಾಗಿಸಲು ಸಾಧ್ಯವಾಗಿದೆ. ಭಾರತದಲ್ಲಿ ಹಬ್ಬದ ಸಂದರ್ಭದಲ್ಲಿ ಕುಟುಂಬಗಳು ಒಂದಾಗಿ ಆಚರಿಸುತ್ತವೆ. ಇದುವೇ ಹಬ್ಬದ ನಿಜವಾದ ಉದ್ದೇಶ ಎಂದು ರಾಷ್ಟ್ರಪತಿ ಹೇಳಿದರು.