ರೀ ನೀವೇನ್ ಮಿನಿಸ್ಟರಾ?: ತಾಳ್ಮೆ ಕಳೆದುಕೊಂಡ ನಾಯ್ಡು!
ಶಾಂತ ಸ್ವಭಾವದ ಉಪರಾಷ್ಟ್ರಪತಿ ತಾಳ್ಮೆ ಕಳೆದುಕೊಂಡರೆ ಏನಾಗುತ್ತೆ?| ಕಲಾಪದ ವೇಳೆ ಕೆಂಡಾಮಂಡಲರಾದ ರಾಜ್ಯಸಭೆ ಉಪ ಸಭಾಪತಿ| ದೆಹಲಿಯಲ್ಲಿ ನೀರಿನ ಗುಣಮಟ್ಟದ ಕುರಿತು ಚರ್ಚೆ| ಬಿಜೆಪಿಯ ವಿಜಯ್ ಗೋಯಲ್ ಪ್ರಸ್ತಾವನೆಗೆ ಆಪ್ ಸಂಸದ ಸಂಜಯ್ ಸಿಂಗ್ ಆಕ್ಷೇಪ| ನೀವೇನು ಸಚಿವರಾ ಎಂದು ಸಂಜಯ್ ಸಿಂಗ್ ತರಾಟೆಗೆ ತೆಗೆದುಕೊಂಡ ವೆಂಕಯ್ಯ ನಾಯ್ಡು|
ನವದೆಹಲಿ(ನ.22): ಸಾಮಾನ್ಯವಾಗಿ ಶಾಂತ ಸ್ವಭಾವದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಕಲಾಪದ ವೇಳೆ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ .
ಶೂನ್ಯ ವೇಳೆಯಲ್ಲಿ ಬಿಜೆಪಿಯ ವಿಜಯ್ ಗೋಯೆಲ್ ದೆಹಲಿಯಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟದ ಕುರಿತು ಚರ್ಚೆ ಆರಂಭಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಆಪ್ ಸಂಸದ ಸಂಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.
ನಾವು ಶಾಂತಿಪ್ರಿಯರು, ಆದರೆ ದಾಳಿಗೆ ಬಂದರೆ ಸುಮ್ಮನೆ ಬಿಡಲ್ಲ: ನಾಯ್ಡು!
ದೆಹಲಿಯಲ್ಲಿ ಮನೆಗಳಿಗೆ ಸರಬರಾಜಾಗುವ ನೀರು ಕಳಪೆ ಗುಣಮಟ್ಟದ್ದಾಗಿದೆ ಎಂದು ವಿಜಯ್ ಗೋಯಲ್ ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಜಯ್ ಸಿಂಗ್, ವಿಜಯ್ ಗೋಯಲ್ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಿದರು.
ಸತತ ಮನವಿಯ ಬಳಿಕವೂ ಸಂಜಯ್ ಸಿಂಗ್ ಸುಮ್ಮರಾಗದಿದ್ದಾಗ ತಾಳ್ಮೆ ಕಳೆದುಕೊಂಡ ನಾಯ್ಡು, ಗೋಯಲ್ ಪ್ರಸ್ತಾವನೆಗೆ ಉತ್ತರ ನೀಡಲು ನೀವೇನು ಸಚಿವರೇ ಎಂದು ಗುಡುಗಿದರು.
ಜೈಪಾಲ್ ರೆಡ್ಡಿ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು!
ಗೋಯಲ್ ಎತ್ತಿರುವ ಪ್ರಶ್ನೆಗೆ ಸಂಬಂಧಿಸಿದ ಸಚಿವರು ಉತ್ತರ ನೀಡುತ್ತಾರೆ. ಅಲ್ಲದೇ ಗೋಯಲ್ ದೆಹಲಿ ಸರ್ಕಾರದ ವಿರುದ್ಧ ಯಾವುದೇ ಆರೋಪವೂ ಮಾಡಿಲ್ಲ. ಅಂತದ್ದರಲ್ಲಿ ನೀವೇಕೆ ಮಧ್ಯ ಬಾಯಿ ಹಾಕುತ್ತೀರಿ ಎಂದು ಸಂಜಯ್ ಸಿಂಗ್ ಅವರನ್ನು ನಾಯ್ಡು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ದೆಹಲಿಯ ನೀರಿನ ಸಮಸ್ಯೆ ಕುರಿತು ಮಾತನಾಡುವಾಗ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಪ್ರದರ್ಶಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ನಾಯ್ಡು, ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರದರ್ಶಿಸುವಂತೆ ತಾಕೀತು ಮಾಡಿದರು.
ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ