Asianet Suvarna News Asianet Suvarna News

ನಾವು ಶಾಂತಿಪ್ರಿಯರು, ಆದರೆ ದಾಳಿಗೆ ಬಂದರೆ ಸುಮ್ಮನೆ ಬಿಡಲ್ಲ: ನಾಯ್ಡು!

ಭಾರತ ಶಾಂತಿ ಬಯಸುವ ರಾಷ್ಟ್ರ ಎಂದ ಉಪರಾಷ್ಟ್ರತಿ| ಶಾಂತಿಗಾಗಿ ಭಾರತದ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದ ವೆಂಕಯ್ಯ ನಾಯ್ಡು| ‘ಭಾರತದ ಮೇಲೆ ಯಾರಾದರೂ ದಾಳಿಗೆ ಮುಂದಾದರೆ ಅವರಿಗೆ ತಕ್ಕ ಪ್ರತ್ಯುತ್ತರ’| ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ 95 ಭಾಷಣಗಳ ಸಂಗ್ರಹ ಕೃತಿ ಬಿಡುಗಡೆ|  ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಾದ ಮತ್ತು ಚರ್ಚೆಗೆ ಅವಕಾಶವಿದೆ’| 

Vice-Prez Says India Firm On Peace Stance But Befitting Reply Will Be Given If Attacked
Author
Bengaluru, First Published Sep 6, 2019, 6:53 PM IST

ನವದೆಹಲಿ(ಸೆ.06): ಭಾರತ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಶಾಂತಿಗಾಗಿ ಅದರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಆದರೆ ಭಾರತದ ಮೇಲೆ ಯಾರಾದರೂ ದಾಳಿಗೆ ಮುಂದಾದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವುದು ನಮ್ಮ ಜವಾಬ್ದಾರಿ ಕೂಡ ಹೌದು ಎಂದು ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

 ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ 95 ಭಾಷಣಗಳ ಸಂಗ್ರಹ ‘ಲೋಕತಂತ್ರ ಕೆ ಸ್ವರ್’ ಹಿಂದಿ ಅವತರಣಿಕೆ ಮತ್ತು‘ರಿಪಬ್ಲಿಕನ್ ಎಥಿಕ್’ ಇಂಗ್ಲಿಷ್ ಅವತರಣಿಕೆ ಕೃತಿಗಳನ್ನು ಲೋಕಾರ್ಪಣೆ ಮಾಡಿ ವೆಂಕಯ್ಯ ನಾಯ್ಡು ಮಾತನಾಡಿದರು.

ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ಭಾರತಕ್ಕೆ ನಂಬಿಕೆ ಇದ್ದು, ಇಡೀ ವಿಶ್ವವೇ ಒಂದು ಕುಟುಂಬ ಎಂದು ನಂಬಿರುವ ನಾವು ಯಾವುದೇ ದೇಶದ ಮೇಲೆ ತಾನಾಗಿ ದಾಳಿ ಮಾಡಿಲ್ಲ ಎಂದು ನಾಯ್ಡು ನುಡಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಾದ ಮತ್ತು ಚರ್ಚೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಅದೇ ರೀತಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮತ್ತು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ನಂಬಿಕೆಯೂ ನಮ್ಮದಾಗಿದೆ ಎಂದು ನಾಯ್ಡು ಈ ವೇಳೆ ಹೇಳಿದರು.

ಭಾರತ ಆಕ್ರಮಣಶೀಲ ರಾಷ್ಟ್ರವಲ್ಲ ಆದಾಗ್ಯೂ, ಯಾರಾದರೂ ಭಾರತದ ಮೇಲೆ ದಾಳಿ ಮಾಡಿದರೆ, ನಾವು ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಉಪರಾಷ್ಟ್ರಪತಿ ಗುಡುಗಿದರು.

Follow Us:
Download App:
  • android
  • ios