ನವದೆಹಲಿ[ಜು.30]: ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಎಸ್‌.ಜೈಪಾಲ್‌ ರೆಡ್ಡಿ ಅವರನ್ನು ನೆನೆದು, ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ಕಣ್ಣೀರಿಟ್ಟಘಟನೆ ನಡೆದಿದೆ.

ಸೋಮವಾರ ಕಲಾಪ ಆರಂಭಾಗುತ್ತಲೇ ವೆಂಕಯ್ಯನಾಯ್ಡು ಅವರು ಜೈಪಾಲ್‌ ರೆಡ್ಡಿ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ಪ್ರಸ್ತಾಪ ಮಾಡಿದರು. ಈ ವೇಳೆ ತಮ್ಮ ಆತ್ಮೀಯರಾಗಿದ್ದ ಜೈಪಾಲ್‌ರೆಡ್ಡಿ ಅವರನ್ನು ನೆನೆಪಿಸಿಕೊಂಡು ನಾಯ್ಡು ಆಸನದಲ್ಲೇ ಕಣ್ಣೀರಿಟ್ಟರು.

ಹಿಂದೆಲ್ಲಾ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಮುಂಜಾನೆ 8 ಗಂಟೆಗೆಲ್ಲಾ ಆರಂಭವಾಗುತ್ತಿತ್ತು. ಹೀಗಾಗಿ ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು ಎಂದು ಹಳೆಯ ನೆನಪು ಮೆಲಕು ಹಾಕಿದರು.